ತಾತಪ್ಪ ಮತ್ತು ಗದ್ದೆಮ್ಮ 
ರಾಜ್ಯ

Photoshoot ನೆಪದಲ್ಲಿ ಗಂಡನ ನದಿಗೆ ತಳ್ಳಿದ ಹೆಂಡತಿ ಕೇಸ್ ಗೆ ಭಾರಿ ಟ್ವಿಸ್ಟ್; ಪತಿ ತಾತಪ್ಪ ವಿರುದ್ಧ POCSO ಪ್ರಕರಣ ದಾಖಲು!

ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದ್ದ ಘಟನೆ ಮತ್ತೊಂದು ಆಯಾಮಕ್ಕೆ ಮರಳಿದೆ. ಫೋಟೋ ಶೂಟ್ ನೆಪದಲ್ಲಿ ಪತ್ನಿಯೇ ತನ್ನ ಪತಿಯನ್ನು ನದಿಗೆ ತಳ್ಳಿದ್ದರು.

ರಾಯಚೂರು: ರಾಯಚೂರಿನಲ್ಲಿ ಪತ್ನಿಯಿಂದಲೇ ನದಿಗೆ ತಳ್ಳಲ್ಪಟ್ಟ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ದೊರೆತಿದ್ದು ಪತಿ ತಾತಪ್ಪ ವಿರುದ್ಧ ಇದೀಗ ಪೋಕ್ಸೋ ಕೇಸ್ (POCSO Case) ದಾಖಲಾಗಿದೆ.

ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದ್ದ ಘಟನೆ ಮತ್ತೊಂದು ಆಯಾಮಕ್ಕೆ ಮರಳಿದೆ. ಫೋಟೋ ಶೂಟ್ ನೆಪದಲ್ಲಿ ಪತ್ನಿಯೇ ತನ್ನ ಪತಿಯನ್ನು ನದಿಗೆ ತಳ್ಳಿದ್ದಾರೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಹಗ್ಗಗಳ ಸಹಾಯದಿಂದ ಪತಿಯನ್ನು ರಕ್ಷಣೆ ಮಾಡಿದ್ದರು.

ಪ್ರಕರಣಕ್ಕ ಬಿಗ್ ಟ್ವಿಸ್ಟ್

ವೈರಲ್ ವಿಡಿಯೋದಲ್ಲಿ ಹೆಂಡತಿಯೇ ತಪ್ಪಿತಸ್ಥಳೆಂದು ತೋರಿಸಿದರೂ, ಗಂಡನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಹೆಂಡತಿಯನ್ನು ಮದುವೆಯಾಗಿ, ನಂತರ ಆಕೆಯ ಮೇಲೆಯೇ ಆರೋಪ ಹೊರಿಸಿದ್ದಾನೆ ಎಂದು ಪತಿ ತಾತಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೂರು ತಿಂಗಳ ಹಿಂದಷ್ಟೇ ತಾತಪ್ಪ ಮತ್ತು ಗದ್ದೆಮ್ಮ ಇಬ್ಬರೂ ಮದುವೆ ಮಾಡಿಕೊಂಡಿದ್ದರು. ಅತ್ತೆಯ ಮಗಳಾಗಿದ್ದ ಗದ್ದೆಮ್ಮ 8ನೇ ತರಗತಿ ಓದಿಕೊಂಡು ಹೊಲ, ಮನೆ ಕೆಲಸ ಮಾಡಿಕೊಂಡು ಮನೆಯ್ಲಿದ್ದಳು. ಮನೆಯವರು ಇಬ್ಬರನ್ನೂ ಮದುವೆ ಮಾಡಿಸಿ, ಸುಖ ಸಂಸಾರ ಮಾಡಿಕೊಂಡಿರಲು ಆಶೀರ್ವಾದ ಮಾಡಿದ್ದರು.

ಫೋಟೋಶೂಟ್ ನೆಪದಲ್ಲಿ ಗಂಡನ ನದಿಗೆ ತಳ್ಳಿದ ಪತ್ನಿ?

ನವಜೋಡಿ ಆಗಿದ್ದರಿಂದ ಊರೂರು ಸುತ್ತಾಡುವುದು, ಬೀಗರ ಮನೆಗೆ ಹೋಗಿ ಬರುವುದು ಸಾಮಾನ್ಯ. ಅಂತೆಯೇ ಗದ್ದೆಮ್ಮಳ ಚಿಕ್ಕಮ್ಮನ ಮನೆಗೆ ಗಂಡ-ಹೆಂಡತಿ ಇಬ್ಬರೂ ಹೋಗಿ ವಾಪಸ್ ಗಂಡನ ಮನೆಗೆ ಬಕ್‌ನಲ್ಲಿ ಹೋಗುತ್ತಿರುವಾಗ ಬ್ರಿಡ್ಜ್ ಬಳಿ ಫೋಟೋ ತೆಗೆದುಕೊಳ್ಳಲು ಬೈಕ್ ನಿಲ್ಲಿಸಿದ್ದಾರೆ. ಆಗ ಸೆಲ್ಫಿ ಫೋಟೋಗೆ ಗದ್ದೆಮ್ಮ ನಿರಾಕರಿಸಿದ್ದಾಳೆ. ಗಂಡನನ್ನು ಒಬ್ಬನೇ ನಿಲ್ಲಲು ಹೇಳಿ, ಫೋಟೋ ತೆಗೆಯುವಾಗ ತಳ್ಳಿದ್ದಾಳೆ ಎಂದು ಆಕೆಯ ಗಂಡ ಹೇಳಿದ್ದಾನೆ.

ಭಾರಿ ವೈರಲ್ ಆಗಿದ್ದ ವಿಡಿಯೋ

ಗುರ್ಜಾಪುರ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿದ್ದ ಸೇತುವೆಯಿಂದ ಹೆಂಡತಿ ತನ್ನನ್ನು ನದಿಗೆ ತಳ್ಳಿದ್ದಾನೆ ಎಂಬ ಘಟನೆಯ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ 2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂಬೆಲ್ಲಾ ಟ್ಯಾಗ್‌ಲೈನ್‌ಗಳು ವೈರಲ್ ಆಗಿದ್ದವು.

ವಿಚ್ಛೇದನಕ್ಕೆ ಮುಂದಾಗಿದ್ದ ಪತಿ

ಈ ಘಟನೆ ನಂತರ ರಾಜಿ ಪಂಚಾಯಿತಿ ಮಾಡಿದರೂ ಬಗ್ಗದ ಗಂಡ ತಾತಪ್ಪ, ಈಕೆ ನನ್ನನ್ನು ನದಿಗೆ ತಳ್ಳಿ ಸಾಯಿಸಲು ಪ್ರಯತ್ನ ಮಾಡಿದ್ದಾಳೆ, ಈಕೆಯೊಂದಿಗೆ ನಾನು ಸಂಸಾರ ಮಾಡೋದಿಲ್ಲ. ಈಕೆಯಿಂದ ಡಿವೋರ್ಸ್ ಬೇಕು ಎಂದು ಹೇಳಿದ್ದಾನೆ. ಅಲ್ಲದೆ ಗಂಡ ತಾತಪ್ಪ ಹೆಂಡತಿಗೆ ಡಿವೋರ್ಸ್ ಕೊಡಲು ಅರ್ಜಿ ಸಲ್ಲಿಸಿದ್ದಾನೆ.

ಅಸಲಿ ಸತ್ಯ ಬಹಿರಂಗ

ಗದ್ದೆಮ್ಮ ನನಗೆ ಬೇಡ ಎನ್ನುತ್ತಿರುವ ತಾತಪ್ಪನಿಗೆ ಇದೀಗ ಅಸಲಿ ಸಂಕಷ್ಟ ಶುರುವಾಗಿದ್ದು, ಅಸಲಿಗೆ ಯುವತಿ ಗದ್ದೆಮ್ಮಳಿಗೆ ಇನ್ನೂ ಮದುವೆಯ ವಯಸ್ಸೇ ಆಗಿಲ್ಲ. ಅಪ್ರಾಪ್ತಳಾಗಿದ್ದ ಅತ್ತೆಯ ಮಗಳನ್ನು ಮದುವೆ ಮಾಡಿಕೊಂಡು ಆಕೆಯೊಂದಿಗೆ ಮೂರು ತಿಂಗಳು ಸಂಸಾರವನ್ನೂ ಮಾಡಿದ್ದಾನೆ. ಗದ್ದೆಮ್ಮಳಿಗೆ ಇನ್ನೂ ಕಾನೂನಿನ ಅನ್ವಯ ಮದುವೆಯ ವಯಸ್ಸು 18 ವರ್ಷ ತುಂಬಿಲ್ಲ. ಆಕೆಗಿನ್ನೂ 15 ವರ್ಷ 8 ತಿಂಗಳು ಆಗಿದೆ. ಯಾದಗಿರಿಯಲ್ಲಿ ಓದುವಾಗಲೇ ಮದುವೆ ಮಾಡಿಕೊಂಡು, ಇದೀಗ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಳೆ ಎಂಬ ಆರೋಪ ಮಾಡಿದ್ದಾನೆ ಎಂದು ತಾತಪ್ಪನ ವಿರುದ್ಧವೇ ಪೋಕ್ಸೋ ಕೇಸ್ ದಾಖಲು ಮಾಡಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಿಳಾ ಆಯೋಗ ಮಧ್ಯಪ್ರವೇಶ

ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ಶಶಿಧರ್ ಕೂಸುಂಬೆ ಅವರು ಹೆಂಡತಿಯೇ ಗಂಡನನ್ನು ನದಿಗೆ ತಳ್ಳಿದ್ದಾಳೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಭಾಗಿತ್ವದೊಂದಿಗೆ ಯುವತಿಯ ಮಾಹಿತಿ ಕಲೆ ಹಾಕಿದ್ದಾರೆ. ಆಗ ನವ ವಿವಾಹಿತೆ ಗದ್ದೆಮ್ಮಳಿಗೆ ಇನ್ನೂ 16 ವರ್ಷವೂ ತುಂಬಿಲ್ಲ. ಅಪ್ರಾಪ್ತೆಯನ್ನು ಮದುವೆ ಮಾಡಿಕೊಂಡು ತಾತಪ್ಪ, ಆರೋಪ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ ಕೇಸ್‌ನಡಿ ತಾತಪ್ಪ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ಮಾಡಿದ್ದಾರೆ. ಇನ್ನು ಸಂತ್ರಸ್ತೆ ಗದ್ದೆಮ್ಮಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹ ಮಾಡಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಿಹಾರ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಶೇ.50ರಷ್ಟು ಸಚಿವರಿಗೆ ಕೊಕ್..?

ಕಫ್ ಸಿರಪ್ ನ ಬಗ್ಗೆ ಕೇಂದ್ರ ಸರ್ಕಾರ ಯೂ-ಟರ್ನ್: ಮಧ್ಯ ಪ್ರದೇಶ, ರಾಜಸ್ತಾನ, ತಮಿಳು ನಾಡು ಬ್ಯಾನ್

KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಮತ್ತೆ ವಿವಾದದ ಕಿಡಿಹೊತ್ತಿಸಿದ ಮಾಜಿ ಸಚಿವ ರಾಜಣ್ಣ

2013-18ರ ಸಿದ್ದರಾಮಯ್ಯ ಬೇರೆ, ಈಗಿನ ಸಿದ್ದುನೇ ಬೇರೆ; ನಾಯಕನಾದವನಿಗೆ ಹೇಳಲಾಗದ ಒತ್ತಡ ಇರುತ್ತದೆ: ರಾಜಣ್ಣ ಹೊಸ ಬಾಂಬ್

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

SCROLL FOR NEXT