ವರ್ತೂರು ಬಳಗೆರೆ ರಸ್ತೆಯಲ್ಲಿ ಬಂಗಾಳಿ ವಲಸೆ ಕಾರ್ಮಿಕರ ಜೋಪಡಿ ಮನೆಗಳು 
ರಾಜ್ಯ

ಬೆಂಗಳೂರು: ಬಂಗಾಳಿ ವಲಸೆ ಕಾರ್ಮಿಕರಿಗೆ ಪೊಲೀಸರಿಂದ ಕಿರುಕುಳ, ಸುಲಿಗೆ ಆರೋಪ

ರಾಷ್ಟ್ರ ರಾಜಧಾನಿಯ ಬಳಿ ನಡೆಯುತ್ತಿರುವ ಘಟನೆಗಳು ಅಂತರ್ಜಾಲದ ಮೂಲಕ ಬಹಿರಂಗವಾಗುತ್ತಿದ್ದಂತೆ, ಬೆಂಗಳೂರಿನ ಬಂಗಾಳಿ ವಲಸಿಗರು ಸಹ ತೀವ್ರ ಆತಂಕಗೊಂಡಿದ್ದಾರೆ.

ಬೆಂಗಳೂರು: ಗುರುಗ್ರಾಮ್‌ನಲ್ಲಿ ಬಂಗಾಳಿ ವಲಸೆ ಕಾರ್ಮಿಕರನ್ನು ಬಂಧಿಸಲಾಗುತ್ತಿದೆ ಅಥವಾ ಭಯದಿಂದ ಪಲಾಯನ ಮಾಡುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಬಂಗಾಳಿ ವಲಸೆ ಕಾರ್ಮಿಕರು ಹೆಚ್ಚಾಗಿರುವ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲೂ ವಾತಾವರಣ ದಿನದಿಂದ ದಿನಕ್ಕೆ ಉದ್ವಿಗ್ನವಾಗುತ್ತಿದೆ.

ರಾಷ್ಟ್ರ ರಾಜಧಾನಿಯ ಬಳಿ ನಡೆಯುತ್ತಿರುವ ಘಟನೆಗಳು ಅಂತರ್ಜಾಲದ ಮೂಲಕ ಬಹಿರಂಗವಾಗುತ್ತಿದ್ದಂತೆ, ಬೆಂಗಳೂರಿನ ಬಂಗಾಳಿ ವಲಸಿಗರು ಸಹ ತೀವ್ರ ಆತಂಕಗೊಂಡಿದ್ದು, ತಮ್ಮ ಜೀವನೋಪಾಯ ಮುಂದುವರಿಸುವ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರು ಪೊಲೀಸರು ತಮಗೆ ಕಿರುಕಳ ನೀಡುತ್ತಿದ್ದು, ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

"ಮೊಣಕಾಲು ಮಟ್ಟದ ನೀರಿನಲ್ಲಿ ನಿಂತು ಮೊಸಳೆ ಜೊತೆ ಹೋರಾಡುವಂತಿದೆ" ನಮ್ಮ ಬದುಕು ಎಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದ ರೆಹಮಾನ್(ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾರೆ.

ರೆಹಮಾನ್ ಒಂದು ದಶಕದ ಹಿಂದೆ ನಗರಕ್ಕೆ ಬಂದಿದ್ದು, ಸಣ್ಣ ಮೊಬೈಲ್ ರಿಪೇರಿ ಮತ್ತು ಫೋಟೋಕಾಪಿ ಅಂಗಡಿ ನಡೆಸುತ್ತಿದ್ದಾರೆ. ನೆರೆಹೊರೆಯ ಪ್ರತಿಯೊಂದು ಸಣ್ಣ ಅಂಗಡಿಯಿಂದ ಪೋಲಿಸರು ಹಣ ಸಂಗ್ರಹಿಸುತ್ತಾರೆ. ಈ ಮಾಸಿಕ ಲಂಚವನ್ನು ನೀಡಲು ನಿರಾಕರಿಸಿದಾಗ ವರ್ತೂರು ಪೊಲೀಸ್ ಠಾಣೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಲಂಚದ ಮೊತ್ತವು 300 ರೂ.ಗಳಿಂದ 3,000-4,000 ರೂ.ಗಳವರೆಗೆ ಇರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರಿಗಳು ಮಧ್ಯರಾತ್ರಿ ತಮ್ಮ ಮನೆಗೆ ನುಗ್ಗಿ, ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ತಮ್ಮ ಕಿರಿಯ ಸಹೋದರ(21 ವರ್ಷ ವಯಸ್ಸಿನವರು)ನನ್ನು ಕರೆದೊಯ್ದಿದ್ದಾರೆ ಮತ್ತು 75,000 ರೂ. ನೀಡದಿದ್ದರೆ ಅವರನ್ನು ಇತರ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರೆಹಮಾನ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ತನ್ನ ಕುಟುಂಬದೊಂದಿಗೆ ಜೀವನೋಪಾಯ ನಡೆಸಲು ಹೆದರುತ್ತಿರುವ ರೆಹಮಾನ್, ತನ್ನ ಸಹೋದರನನ್ನು ಬಿಡುಗಡೆ ಮಾಡಿಸಲು ಕಷ್ಟಪಟ್ಟು ಸಂಪಾದಿಸಿದ ಹಣ ಖರ್ಚು ಮಾಡಬೇಕಾಯಿತು ಎಂದಿದ್ದಾರೆ. ಅಲ್ಲದೆ ಈ ಸಂಬಂಧ ಅವರು ಮಂಗಳವಾರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ರೆಹಮಾನ್ ಪ್ರಕರಣದಂತೆ ಹಲವು ಪ್ರಕರಣಳಿವೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಲ್ಸುಂಡಾ ಎಂಬ ಹಳ್ಳಿಯ ನಿವಾಸಿ ಮಾಬುಲ್ ಶೇಖ್, ಜನವರಿ 2025 ರಲ್ಲಿ ಸಿಸಿಬಿಗೆ ದೂರು ನೀಡಿದ್ದಾರೆ. ಒಂದು ದಿನ, ಸಿಸಿಬಿ ಅವರ ಫೋನ್ ಮತ್ತು ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸಿಸಿಬಿ ಕಚೇರಿಗೆ ಭೇಟಿ ನೀಡಿದಾಗ, ಅವರ ಭಾಷೆಯ ಕಾರಣದಿಂದಾಗಿ ಅವರನ್ನು ಬಾಂಗ್ಲಾದೇಶಿ ಎಂದು ಆರೋಪಿಸಲಾಯಿತು ಎಂದು ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT