ಸಾಂದರ್ಭಿಕ ಚಿತ್ರ  
ರಾಜ್ಯ

ಸುರಂಗ ರಸ್ತೆ DPR ಯೋಜನಾ ಅವಧಿ 24 ತಿಂಗಳುಗಳಿಗೆ ಇಳಿಕೆ: ತಜ್ಞರು ಹೇಳುವುದೇನು?

ಕರಡು ಡಿಪಿಆರ್ ಒಟ್ಟು ಯೋಜನೆಯ ಪೂರ್ಣಗೊಳಿಸುವ ಸಮಯವನ್ನು 61 ತಿಂಗಳುಗಳಿಗೆ ನಿಗದಿಪಡಿಸಿತ್ತು, ಅದರಲ್ಲಿ 33 ತಿಂಗಳುಗಳು ಸುರಂಗ ಮಾರ್ಗಕ್ಕೆ ಮೀಸಲಾಗಿದ್ದವು.

ಬೆಂಗಳೂರು: ನಗರದ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಗೆ(Tunnel Road project) ಆರಂಭದಲ್ಲಿ 33 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು, ಆದರೆ ಅಂತಿಮ ವಿವರವಾದ ಯೋಜನಾ ವರದಿಯಲ್ಲಿ (DPR) ಈಗ 24 ತಿಂಗಳುಗಳಿಗೆ ಕಡಿತಗೊಳಿಸಲಾಗಿದೆ.

ತಜ್ಞರು ಈ ಯೋಜನೆಯನ್ನು ಅವಾಸ್ತವಿಕ ಎಂದು ಕರೆಯುತ್ತಿದ್ದರೂ, ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಅಧಿಕಾರಿಗಳು ಹೇಳುವಂತೆ, ಆರು ಮಧ್ಯಮದಿಂದ ಸರಾಸರಿ ವೇಗದ ಟನಲ್ ಬೋರಿಂಗ್ ಯಂತ್ರಗಳ (TBM)ನ್ನು ಬಳಸುವ ಹಿಂದಿನ ಯೋಜನೆಗೆ ವಿರುದ್ಧವಾಗಿ, ಎಂಟು ಹೈ-ಸ್ಪೀಡ್ ಟನಲ್ ಬೋರಿಂಗ್ ಯಂತ್ರಗಳ (TBM ಗಳು) ನಿಯೋಜನೆಯಿಂದಾಗಿ ಕಡಿಮೆ ಸಮಯ ಸಾಕಾಗುತ್ತದೆ.

ಕರಡು ಡಿಪಿಆರ್ ಒಟ್ಟು ಯೋಜನೆಯ ಪೂರ್ಣಗೊಳಿಸುವ ಸಮಯವನ್ನು 61 ತಿಂಗಳುಗಳಿಗೆ ನಿಗದಿಪಡಿಸಿತ್ತು, ಅದರಲ್ಲಿ 33 ತಿಂಗಳುಗಳು ಸುರಂಗ ಮಾರ್ಗಕ್ಕೆ ಮೀಸಲಾಗಿದ್ದವು. ಅಂತಿಮ ಡಿಪಿಆರ್ ಒಟ್ಟಾರೆ ಯೋಜನೆಯ ಅವಧಿಯನ್ನು 50 ತಿಂಗಳುಗಳಿಗೆ ಇಳಿಸುತ್ತದೆ, 16.7 ಕಿ.ಮೀ. ಮೂಲಕ ಕೊರೆಯಲು ಕೇವಲ 24 ತಿಂಗಳುಗಳನ್ನು ನಿಗದಿಪಡಿಸಲಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(New Indian Express) ಜೊತೆ ಮಾತನಾಡಿದ ಬಿ-ಸ್ಮೈಲ್ ನಿರ್ದೇಶಕ ಬಿ.ಎಸ್. ಪ್ರಹಲ್ಲಾದ್, ಆರಂಭದಲ್ಲಿ ನಾವು ತಿಂಗಳಿಗೆ ಸರಾಸರಿ 90 ಮೀಟರ್ ಕತ್ತರಿಸುವ ವೇಗದೊಂದಿಗೆ ಆರು ಟಿಬಿಎಂಗಳನ್ನು ಯೋಜಿಸಿದ್ದೆವು, ಅದು ತುಂಬಾ ಸಮಯ ಹಿಡಿಯುತ್ತದೆ. ಅವಧಿಯನ್ನು ಕಡಿಮೆ ಮಾಡಲು, ನಾವು ಹೆಚ್ಚಿನ ಯಂತ್ರಗಳನ್ನು ಸೇರಿಸಲು ಮತ್ತು ಹೆಚ್ಚಿನ ವೇಗದ ಮಾದರಿಗಳಿಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದೇವೆ. ಪ್ರತಿ ಹೆಚ್ಚಿನ ವೇಗದ ಟಿಬಿಎಂ ತಿಂಗಳಿಗೆ ಕನಿಷ್ಠ 200 ಮೀಟರ್‌ಗಳನ್ನು ಕತ್ತರಿಸಬಹುದು, ಅಂದರೆ ವರ್ಷಕ್ಕೆ 2.4 ಕಿಲೋಮೀಟರ್‌ಗಳು ಎಂದರು.

ಹೆಚ್ಚಿನ ವೇಗದ ಟಿಬಿಎಂ ಎರಡು ವರ್ಷಗಳಲ್ಲಿ ಸರಿಸುಮಾರು 4 ಕಿಮೀ ಕತ್ತರಿಸಬಹುದು, ಅಗತ್ಯವಿರುವ ಒಟ್ಟು ಸುರಂಗ ಮಾರ್ಗವು 32 ಕಿಮೀಗಿಂತ ಸ್ವಲ್ಪ ಹೆಚ್ಚು ಇರುವುದರಿಂದ, ಎಂಟು ಯಂತ್ರಗಳು ಎರಡು ವರ್ಷಗಳಲ್ಲಿ ಅದನ್ನು ಪೂರ್ಣಗೊಳಿಸಬಹುದು ಎಂದರು.

ಆದರೆ ತಜ್ಞರು ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಸುರಂಗ ಮಾರ್ಗ ಕೊರೆಯುವ ಸಮಯದಲ್ಲಿ ಎದುರಾಗುವ ಬಂಡೆ ಅಥವಾ ಮೇಲ್ಮೈಯ ಪ್ರಕಾರವನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಬೆಂಗಳೂರಿನ ಹಿಂದಿನ ಅನುಭವದ ಆಧಾರದ ಮೇಲೆ, ವಿಶೇಷವಾಗಿ ಮೆಟ್ರೋ ಸುರಂಗ ಮಾರ್ಗದಲ್ಲಿ, ಅನಿರೀಕ್ಷಿತ ಸವಾಲುಗಳು ಸಾಮಾನ್ಯವಾಗಿದೆ. ಸರ್ಕಾರದ ಅಸಮರ್ಥತೆ ಮತ್ತು ಭೂಸ್ವಾಧೀನದಲ್ಲಿನ ವಿಳಂಬ ಕೂಡ ಗಮನವಹಿಸಬೇಕು ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT