ಡಿಕೆ ಶಿವಕುಮಾರ್ 
ರಾಜ್ಯ

ಪುಣೆಯಿಂದ ನಿರ್ಗಮಿಸುವ ಕ್ವಾಂಟಮ್ ಟೆಕ್ ಕಂಪನಿಗಳಿಗೆ ಬೆಂಗಳೂರಿಗೆ ಸ್ವಾಗತ: ಡಿಸಿಎಂ ಡಿ.ಕೆ ಶಿವಕುಮಾರ್

ನಮ್ಮಲ್ಲಿ ಸಾಕಷ್ಟು ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳಿವೆ. ಅವರಿಗೆ ಬೇಕಾದುದನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರು: ಮಹಾರಾಷ್ಟ್ರವನ್ನು ತೊರೆಯಲು ಬಯಸುವ ಎಲ್ಲಾ ಕ್ವಾಂಟಮ್ ಟೆಕ್ ಕಂಪನಿಗಳಿಗೆ ಬೆಂಗಳೂರಿಗೆ ಸ್ವಾಗತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ, ನಮ್ಮಲ್ಲಿ ಸಾಕಷ್ಟು ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳಿವೆ ಎಂದು ಅವರು ಹೇಳಿದರು.

"ಅವರಿಗೆ ಬೇಕಾದುದನ್ನು ಒದಗಿಸಲು ನಾವು ಸಿದ್ಧರಿದ್ದೇವೆ" ಎಂದು ಡಿಕೆ ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ನಡೆಯುತ್ತಿರುವ ಕ್ವಾಂಟಮ್ ಇಂಡಿಯಾ ಬೆಂಗಳೂರು 2025ರ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಶೃಂಗಸಭೆಯನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿ(KSTePS), IISc ಕ್ವಾಂಟಮ್ ಟೆಕ್ನಾಲಜಿ ಇನಿಶಿಯೇಟಿವ್(IQTI) ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಜುಲೈ 26 ರಂದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು, ಪುಣೆಯಲ್ಲಿರುವ ಐಟಿ ಕಂಪನಿಗಳು ಬೆಂಗಳೂರು ಮತ್ತು ಹೈದರಾಬಾದ್‌ಗೆ "ಸ್ಥಳಾಂತರಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಾಗರಿಕ ಕಾಮಗಾರಿಗಳನ್ನು ಪರಿಶೀಲಿಸುವಾಗ ಅಜಿತ್ ಪವಾರ್ ಅವರು ನೀಡಿದ್ದ ಈ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಂಧನ ನ್ಯಾಯಸಮ್ಮತ: ಭಾರತಕ್ಕೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಆದೇಶ!

ಲಕ್ಷ ಕೋಟಿ ಹೂಡಿಕೆಯ Google AI ಹಬ್ ಆಂಧ್ರಕ್ಕೆ ಹೊಯ್ತು: ನಮ್ಮ ಸಚಿವರು ಜಾತಿ, ಜಾತಿ ಗಣತಿಯಲ್ಲಿ ಮಗ್ನ; ಉದ್ಯಮಿ ಪೈ ವ್ಯಂಗ್ಯ

Pak-Afghan ಕದನ ವಿರಾಮ ಅಂತ್ಯ ಬೆನ್ನಲ್ಲೇ ಸೇನಾ ನೆಲೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 7 ಪಾಕ್ ಸೈನಿಕರು ಬಲಿ!

ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಶಕ್ತಿ ಯೋಜನೆ; 'ನಕಲಿ' ಪ್ರಮಾಣಪತ್ರ ಹಂಚಿಕೊಂಡ್ರಾ CM?

'ಮತಗಳ್ಳತನ': ಆಳಂದ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಮೇಲೆ SIT ದಾಳಿ; Video

SCROLL FOR NEXT