ಆಸ್ಪತ್ರೆಯಲ್ಲಿ ಡಿಕೆ ಶಿವಕುಮಾರ್ 
ರಾಜ್ಯ

RCB ಅಭಿಮಾನಿಗಳು ಗೇಟ್‌ ಮುರಿದರು, ಹೀಗಾಗಿ ಕಾಲ್ತುಳಿತ ಸಂಭವಿಸಿತು: ಡಿ.ಕೆ ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರು: RCB ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ಗಳನ್ನು ಮುರಿದರು. ಹೀಗಾಗಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ.

"ಅವರು ಗೇಟ್‌ಗಳನ್ನು ಮುರಿದಿದ್ದಾರೆ. ಹೀಗಾಗಿ ಕಾಲ್ತುಳಿತ ಸಂಭವಿಸಿದೆ ಎಂದು ನಾನು ಭಾವಿಸುತ್ತೇನೆ. ನಾನು ಪೊಲೀಸ್ ಆಯುಕ್ತರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.... ಸಾವಿನ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. ಎಲ್ಲರೂ ಶಾಂತವಾಗಿರಲು ನಾವು ಮನವಿ ಮಾಡುತ್ತೇವೆ" ಎಂದು ಶಿವಕುಮಾರ್ ಹೇಳಿದ್ದಾರೆ.

ದುರಂತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕಿತ್ಸೆ ನಡೆಯುತ್ತಿರುವ ಆಸ್ಪತ್ರೆಗಳಿಗೆ ಭೇಟಿ, ಗಾಯಾಳುಗಳ ಆರೋಗ್ಯ ವಿಚಾರಿಸುತ್ತೇನೆ ಎಂದು ಹೇಳಿದರು.

"ಅಲ್ಲಿ ಭಾರಿ ಜನಸಂದಣಿ ಇತ್ತು. ನಾವು ಅದನ್ನು ವಿಮಾನ ನಿಲ್ದಾಣದಿಂದಲೇ ನೋಡಿದ್ದೇವೆ. ಆದ್ದರಿಂದ ನಾವು ಮೆರವಣಿಗೆಯನ್ನು ರದ್ದುಗೊಳಿಸಿದೆವು ಮತ್ತು ಅವರನ್ನು (ತಂಡವನ್ನು) ಮುಚ್ಚಿದ ವಾಹನದಲ್ಲಿ ಕರೆತಂದಿದ್ದೇವೆ. ಕನಿಷ್ಠ ವಿಧಾನಸೌಧದಿಂದ ಮೆರವಣಿಗೆ ನಡೆಸಲು ಮನವಿ ಮಾಡಲಾಗಿತ್ತು. ಮಳೆ ಬಂದಿದ್ದರಿಂದ ಜನಸಂದಣಿ ನಿಯಂತ್ರಣಕ್ಕೆ ಬಾರದಾಯಿತು. ಆದ್ದರಿಂದ ನಾವು ಆ ಮೆರವಣಿಗೆಯನ್ನು ರದ್ದುಗೊಳಿಸಿದ್ದೇವೆ. ಕ್ರೀಡಾಂಗಣದಲ್ಲಿ ಸಹ ಮೆರವಣಿಗೆಗೆ ವ್ಯವಸ್ಥೆ ಮಾಡಲಾಗಿತ್ತು ಮತ್ತು ಒಂದು ಗಂಟೆಯ ಕಾರ್ಯಕ್ರಮ ಇತ್ತು. ಆದರೆ ನಾವು ಅದನ್ನು 10-15 ನಿಮಿಷಗಳಲ್ಲಿ ಮುಗಿಸಲು ಸೂಚಿಸಿದ್ದೇವೆ" ಎಂದು ಡಿಸಿಎಂ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

'ಅವರು ರಕ್ತದ ರುಚಿ ನೋಡಿದ್ದಾರೆ': PCB ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಪ್ರಧಾನಿ ಸೋದರಿಯರ ಗಂಭೀರ ಆರೋಪ

T20 World Cup 2026: ಭಾರತದ ವಿರುದ್ಧ ಪಂದ್ಯ ಆಡಲು 'Actual Hero' ಕಾರಣ; ವರಸೆ ಬದಲಿಸಿದ ಪಾಕಿಸ್ತಾನ!

ಜೇವರ್ಗಿ-ಬಳ್ಳಾರಿ ಮಾರ್ಗ ಸೇರಿ ರಾಜ್ಯದ 6 ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಅನುಮೋದನೆ

SCROLL FOR NEXT