ಸ್ಟೇಡಿಯಂ ಬಳಿ ಜಮಾಯಿಸಿದ್ದ ಅಭಿಮಾನಿಗಳು 
ರಾಜ್ಯ

ಬೆಂಗಳೂರು ಕಾಲ್ತುಳಿತ: RCB, ರಾಜಕಾರಣಿಗಳ ನಡುವೆ ಸಿಲುಕಿ ಕೈ ಚೆಲ್ಲಿದ ಪೊಲೀಸರು; ಎಚ್ಚರಿಕೆ ವಹಿಸಿದ್ದರೆ ದುರಂತ ತಪ್ಪಿಸಬಹುದಿತ್ತು!

ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ಮತ್ತು ಸಮನ್ವಯತೆಯೊಂದಿಗೆ ಅಭಿಮಾನಿಗಳ ಉತ್ಸಾಹ ಕಡಿಮೆಯಾದ ನಂತರ ಆಚರಣೆ ಮಾಡಬಹುದಿತ್ತು.

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದು, 64 ಮಂದಿ ಗಾಯಗೊಂಡ ದುರಂತದಲ್ಲಿ ಬೆಂಗಳೂರು ಸಿಟಿ ಪೊಲೀಸರನ್ನು ಪ್ರೀಮಿಯರ್ ಕ್ರಿಕೆಟ್ ಕ್ಲಬ್ (RCB) ಮತ್ತು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದವರು ಹೈಜಾಕ್ ಮಾಡಿರುವುದಾಗಿ ನಂಬಲಾರ್ಹ ಮೂಲಗಳು TNIEಗೆ ತಿಳಿಸಿವೆ.

ಸ್ಟೇಡಿಯಂ ಹೊರಗಡೆ ಜನದಟ್ಟಣೆ ನಿರ್ವಹಿಸುವಲ್ಲಿ ವಿಫಲವಾಗಿದ್ದಕ್ಕಾಗಿ ಬೆಂಗಳೂರು ನಗರ ಪೊಲೀಸರ ವಿರುದ್ಧ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಕಾಲ್ತುಳಿತದಲ್ಲಿ ಮೃತಪಟ್ಟವರು ಇಬ್ಬರು ಅಪ್ರಾಪ್ತರು ಸೇರಿದಂತೆ ಬಹುತೇಕ ಎಲ್ಲರೂ ಯುವಕರೇ.

ಸರ್ಕಾರ ಮತ್ತು ಪೊಲೀಸರು ಎಚ್ಚರಿಕೆ ವಹಿಸಿದ್ದರೆ ದುರಂತ ತಪ್ಪಿಸಬಹುದಾಗಿತ್ತು. ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ಮತ್ತು ಸಮನ್ವಯತೆಯೊಂದಿಗೆ ಅಭಿಮಾನಿಗಳ ಉತ್ಸಾಹ ಕಡಿಮೆಯಾದ ನಂತರ ಆಚರಣೆ ಮಾಡಬಹುದಿತ್ತು.

ಬುಧವಾರ ಬೆಳಗ್ಗೆ ಸಂಭ್ರಮಾಚರಣೆ ಬಗ್ಗೆ RCB ಪೋಸ್ಟ್ : ಬುಧವಾರ ಬೆಳಗ್ಗೆ ಸಂಭ್ರಮಾಚರಣೆಯನ್ನು ಆರ್ ಸಿಬಿ ಘೋಷಿಸಿದ್ದರಿಂದ ಸ್ಟೇಡಿಯಂ ಕಾರ್ಯಕ್ರಮಕ್ಕೆ ಅನುಮತಿಯ ಪ್ರಶ್ನೆ ಎಲ್ಲಿ ಬರುತ್ತದೆ? ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಕುರಿತು ಹೆಚ್ಚೆಚ್ಚು ಪೋಸ್ಟ್ ಮಾಡಲಾಗುತಿತ್ತು. ಈಗ ಜನರೆಲ್ಲರೂ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಸಾರ್ವಜನಿಕ ಭಾವನೆಗಳಿಗೆ ಬೆಲೆಕೊಟ್ಟು ಸರ್ಕಾರ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಎಚ್ಚರಿಕೆಯ ಸಲಹೆ ಹೊರತಾಗಿಯೂ ಅವರು ಮುಂಬರುವ ಅನಾಹುತವನ್ನು ನಿರೀಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉನ್ನತ ಪೊಲೀಸ್ ಅಧಿಕಾರಿಯ ಸಲಹೆ ನಿರ್ಲಕ್ಷ್ಯ: ಆರ್ ಸಿಬಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬುಧವಾರ 7-01ಕ್ಕೆ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ಫೋಸ್ಟ್ ಮಾಡುತ್ತಿದ್ದಂತೆಯೇ ಹಿರಿಯ ಅಧಿಕಾರಿಯೊಬ್ಬರು ಅಧಿಕಾರದ ಉನ್ನತ ಸ್ಥಾನದಲ್ಲಿರುವ ರಾಜಕಾರಣಿಯೊಬ್ಬರಿಗೆ ಎಚ್ಚರಿಕೆ ನೀಡಿದ್ದರು. ಸಂಭ್ರಮಾಚರಣೆಯನ್ನು ವಿಳಂಬ ಮಾಡಿ, ಭಾನುವಾರ ಆಚರಿಸುವುದು ಒಳ್ಳೇಯದು ಎಂದು ಹೇಳಿದ್ದರು. ಆದರೆ, ಅದನ್ನು ನಿರ್ಲಕ್ಷಿಸಲಾಯಿತು.

ನಂತರ ಪೊಲೀಸರು ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆಗೆ ಅನುಮತಿ ನಿರಾಕರಿಸಿದರು. ಆದರೆ, ಒತ್ತಡದ ಹಿನ್ನೆಲೆಯಲ್ಲಿ ಸ್ಟೇಡಿಯಂ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರು. ರಾಜಕಾರಣಿಗಳಿಗೆ ಪೊಲೀಸರ ಮಾತು ಹಿಡಿಸಲಿಲ್ಲ ಎಂದು ಮೂಲಗಳು ಹೇಳಿವೆ.

ಪ್ರಯಾಣ ನಿರ್ಬಂಧ, ಸಲಹೆಗಳು ನಾಪತ್ತೆ:

ಬೆಂಗಳೂರು ಸಂಭ್ರಮಾಚರಣೆ ಕುರಿತು ಆರ್ ಸಿಬಿ ಬುಧವಾರ ಬೆಳಗ್ಗೆ ಮಾಡಿದ ಫೋಸ್ಟ್ ನಿಂದ ರಾಜಕೀಯ ನಾಯಕರು ಚರ್ಚಿಸಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕಾಲ್ತುಳಿತಕ್ಕೆ ಕಾರಣರಾಗಿದ್ದಾರೆ ಎಂದು ಮೂಲಗಳು ಹೇಳುತ್ತವೆ. RCB ಮತ್ತು ರಾಜಕೀಯ ನಾಯಕರ ನಡುವೆ ಸಿಕ್ಕಿಬಿದ್ದ ಪೊಲೀಸರು ಏಕೆ ಕೈ ಚೆಲ್ಲಿದರು? ಎಂದು ಪ್ರಶ್ನೆಯಾಗಿದೆ. ವಾಡಿಕೆಯಂತೆ ನೀಡಲಾಗುತ್ತಿದ್ದ ನಗರದಲ್ಲಿನ ಪ್ರಯಾಣ ನಿರ್ಬಂಧ ಮತ್ತು ಕಡ್ಡಾಯ ಸಲಹೆಗಳು ಬುಧವಾರ ಬೆಂಗಳೂರು ನಗರ ಪೊಲೀಸ್ ಸೋಶಿಯಲ್ ಮೀಡಿಯಾದಲ್ಲಿ ಕಂಡುಬರಲಿಲ್ಲ.

ಸ್ಟೇಡಿಯಂ ಬಳಿ ಮೂವರು DCP ಗಳಿದ್ದರು: ಸ್ಟೇಡಿಯಂ ಬಳಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆದರೆ, ಅವರು ಕೂಡಾ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮೂರು ಡಿಸಿಪಿಗಳು, ಒಬ್ಬರು ಹೆಚ್ಚುವರಿ ಪೊಲೀಸ್ ಕಮಿಷನರ್ ಅವರನ್ನು ಬುಧವಾರ ಸ್ಟೇಡಿಯಂ ಬಳಿ ನಿಯೋಜಿಸಲಾಗಿತ್ತು. ಆದಾಗ್ಯೂ, ಕಾಲ್ತುಳಿತ ಸಂಭವಿಸಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.

ಕಾರ್ಯಕ್ರಮಕ್ಕೆ ಫ್ರೀ ಪಾಸ್ ಸುದ್ದಿ ಕೇಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರತೊಡಗಿದ್ದಾರೆ. ಕಾಲ್ತುಳಿತ ವೇಳೆ ಸ್ಟೇಡಿಯಂ ಬಳಿ ನಿಯೋಜಿತರಾದ ಪೊಲೀಸರು ಕೆಳಗೆ ಬಿದ್ದ ಜನರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದಾರೆ. ವಿಧಾನಸೌಧದ ಬಳಿ ಸಿಎಂ ಮತ್ತು ಉಪ ಮುಖ್ಯಮಂತ್ರಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪೊಲೀಸರು ಮುಖ್ಯ ಗಮನ ಹರಿಸಿದ್ದರು ಎನ್ನಲಾಗಿದೆ.

ಸಮನ್ವಯದ ಕೊರತೆ: ಸರ್ಕಾರ, ಆರ್ ಸಿಬಿ ಮ್ಯಾನೇಜ್ ಮೆಂಟ್ ಮತ್ತು ಈವೆಂಟ್ ಆಯೋಜಕರ ನಡುವೆ ಸಮನ್ವಯದ ಕೊರತೆ ಇತ್ತು. ಕಾರ್ಯಕ್ರಮ ಮುಂದೂಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ ನಿರ್ಲಕ್ಷಿಸಿ, ಸೂಕ್ತ ಯೋಜನೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದರು. ಅನೇಕ ವಿದೇಶಿ ಆಟಗಾರರು ಅಂದೇ ಹೊರಡಬೇಕಾಗಿದ್ದರಿಂದ ಮ್ಯಾನೇಜ್ ಮೆಂಟ್ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ರಾಜಕಾರಣಿಗಳ ಒತ್ತಡ ಕೂಡಾ ಹೆಚ್ಚಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT