ಕೃತಿಯನ್ನು ಸಚಿವ ಎಂಬಿ.ಪಾಟೀಲ್ ಅವರಿಗೆ ನೀಡಿದ ಅಧಿಕಾರಿ. 
ರಾಜ್ಯ

ಬಸವಣ್ಣನವರ ವಚನಗಳ ಇಂಗ್ಲಿಷ್‌ಗೆ ಅನುವಾದಿಸಿದ DYSP: ಸಚಿವ ಎಂ.ಬಿ ಪಾಟೀಲ್ ಮೆಚ್ಚುಗೆ

ಬಸವಣ್ಣನವರ ವಚನಗಳನ್ನು ಕನ್ನಡ ಬಲ್ಲವರಿಗೆ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಅರ್ಥೈಸಬೇಕೆಂಬ ಉದ್ದೇಶದಿಂದ ನಗರದ ಉಪಬಿಭಾಗದ ಡಿವೈಎಸ್‌ಪಿ. ಬಸವರಾಜ್ ಎಲಿಗಾರ ಅವರು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ.

ವಿಜಯಪುರ: ದಯೆಯೆ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ, ದಯೆ ಬೇಕು ಸಕಲ ಪ್ರಾಣಿಗಳೆಲ್ಲರಲಿ, ದಯೆಯೆ ಧರ್ಮದ ಮೂಲವಯ್ಯ, ಕೂಡಲ ಸಂಗಮದೇವನಂತಲ್ಲದೊಲ್ಲನಯ್ಯಾ. ಬಸವಣ್ಣನವರ ವಚನ ಕೇಳಲು ಕಿವಿಗೆ ಎಷ್ಟು ಇಂಪಾಗಿರುತ್ತದೆ ಅಲ್ಲವೇ... ಈ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕೂ ಚೆಂದವಾಗಿರುತ್ತದೆ.

ಬಸವಣ್ಣನವರ ಈ ವಚನಗಳನ್ನು ಯಥಾವತ್ತಾಗಿ ಇಂಗ್ಲಿಷನಲ್ಲಿ ಕೇಳಿದರೆ ಹೇಗಿರುತ್ತದೆ. ಅನುವಾದ ಮಾಡಿರುವವರಾದಾರೂ ಯಾರು? ಇಲ್ಲಿದೆ ಮಾಹಿತಿ...

ಬಸವಣ್ಣನವರ ವಚನಗಳನ್ನು ಕನ್ನಡ ಬಲ್ಲವರಿಗೆ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಅರ್ಥೈಸಬೇಕೆಂಬ ಉದ್ದೇಶದಿಂದ ನಗರದ ಉಪಬಿಭಾಗದ ಡಿವೈಎಸ್‌ಪಿ. ಬಸವರಾಜ್ ಎಲಿಗಾರ ಅವರು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಯಲಿಗಾರ್ ಅವರು ಇತ್ತೀಚೆಗೆ ಸಚಿವ ಎಂ. ಬಿ. ಪಾಟೀಲರಿಗೆ ನೀಡಿದರು. ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ವಿಜಯಪುರ ನಗರದ DYSPಯಾಗಿ ಕರ್ತವ್ಯ ನಿರ್ಹಿಸುತ್ತಿರುವ ಪೊಲೀಸ್ ಅಧಿಕಾರಿ ಶ್ರೀ ಬಸವರಾಜ ಯಲಿಗಾರ್ ಅವರು ಕಾಯಕಯೋಗಿ ಬಸವಣ್ಣನವರ ವಚನಗಳನ್ನು ಇಂಗ್ಲಿ ಷ್ ಭಾಷೆಗೆ ಅನುವಾದಿಸಿರುವುದು ಅರ್ಥಪೂರ್ಣ ಸಂಗತಿ ಎಂದು ಹೇಳಿದ್ದಾರೆ.

ಪರಮ ಪೂಜ್ಯ ಡಾ. ರುದ್ರಮುನಿ ಶಿವಾಚಾರ್ಯರು, ಪುರವರ ಹಿರೇಮಠ ಆಲಮಟ್ಟಿ ಶ್ರೀಗಳ ಸಮ್ಮುಖದಲ್ಲಿ ಶ್ರೀ ಯಲಿಗಾರ ಅವರ ‘My Me is Thee’ ಕೃತಿ ಕೈಯಲ್ಲಿ ಹಿಡಿದಾಗ ಮನಸು ಸಂತೋಷದಿಂದ ತುಂಬಿತು. ಬಸವಣ್ಣನವರ ತತ್ವಗಳು ಯುಗಯುಗಾಂತರಕ್ಕೂ ‘ಮಹಾಬೆಳಕು’ ಎಂಬುದು ನಿರ್ವಿವಾದ. ಇಂತಹ ಅನುವಾದಗಳು ವಚನಗಳನ್ನು ವಿಶ್ವದಾದ್ಯಂತ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕೃತಿ ಕೇವಲ ಅನುವಾದವಲ್ಲ, ಅದು ಬಸವಣ್ಣನವರ ದಿವ್ಯ ದರ್ಶನದ ಪ್ರತಿಬಿಂಬ. ಶ್ರೀ ಬಸವರಾಜ ಯಲಿಗಾರ್ ಅವರ ಈ ಸಾಧನೆಗೆ ಹೃದಯಪೂರ್ವಕ ಅಭಿನಂದನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬಸವರಾಜ್ ಅವರು ಸಂತ ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗೆ' ತತ್ತ್ವ ಪದವನ್ನು ಅರ್ಥ ಸಹಿತ ಇಂಗ್ಲಿಷ್ ಗೆ ಅನುವಾದ ಮಾಡಿದ್ದರು.

ಸಾಮಾನ್ಯವಾಗಿ ಹಿರಿಯ ಸಾಹಿತಿಗಳು, ನಿವೃತ್ತ ಪ್ರೊಫೆಸರ್‌ಗಳ ಸಾಹಿತ್ಯ ಹಾಗೂ ಅನುವಾದಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆ ಮಾಡುವ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ರಚನಾ ಸಮಿತಿ, ಡಿವೈಎಸ್‌ಪಿ ಬಸವರಾಜ್ ಅವರು ಅನುವಾದ ಮಾಡಿರುವ ಸೋರುತಿಹುದು ಮನೆಯ ಮಾಳಿಗೆ ಅನುವಾದಿತ ಸಾಹಿತ್ಯವನ್ನು ಬೆಂಗಳೂರು ವಿಶ್ವವಿದ್ಯಾಲಯದ ಬಿಎ ಆಪ್ಷನಲ್ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆ‌ ಮಾಡಿತ್ತು. ಮೊದಲ ಪ್ರಯತ್ನ ಯಶಸ್ವಿಯಾದ ಬೆನ್ನಲ್ಲೇ ಬಸವಣ್ಣನವರ ವಚನಗಳನ್ನು ಅನುವಾದ ಮಾಡಿದ್ದಾರೆ.

ಬಸವಣ್ಣನವರ ಷಟಸ್ಥಲ ವಚನಗಳಲ್ಲಿ 952 ವಚನಗಳನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ. ಪುಸ್ತಕದಲ್ಲಿ ಮೇಲೆ ಕನ್ನಡ ವಚನ, ಕೆಳಗೆ ಇಂಗ್ಲಿಷ್ ಅನುವಾದವಿದೆ. ಕನ್ನಡ ಬಾರದವರಿಗೆ ವಚನಗಳನ್ನು ತಲುಪಿಸಲು ಯಲಿಗಾರ್ ಅವರು ಅನುವಾದದ ಕಾರ್ಯವನ್ನು ಕೈಗೆತ್ತಿಕೊಂಡು ಮುಗಿಸಿದ್ದಾರೆ.

ಈಗಿನ ಪೀಳಿಗೆ ಇಂಗ್ಲಿಷ್ ಮಾಧ್ಯಮದತ್ತ ವಾಲುತ್ತಿರುವುದರಿಂದ ಕನ್ನಡದ ಎಲ್ಲಾ ಸಂತರು, ಶರಣರು, ಹಾಗೂ ವಚನಕಾರರ ಸಾಹಿತ್ಯ ಇಂಗ್ಲಿಷ್ ಭಾಷೆಯಲ್ಲೂ ಲಭ್ಯವಾಗಬೇಕು ಎನ್ನುವುದು ಅವರ ಉದ್ದೇಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT