ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ online desk
ರಾಜ್ಯ

ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ: ಶೀಘ್ರದಲ್ಲೇ ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಮಾತುಕತೆ

ವಿಧಾನಸಭೆಯಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ಎಂಬಿ. ಪಾಟೀಲ್ ಅವರು ಉತ್ತರ ನೀಡಿದರು.

ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸುವ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂಬ ಸರ್ಕಾರದ ನಿಲುವು ಕುರಿತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ಎಂಬಿ. ಪಾಟೀಲ್ ಅವರು ಉತ್ತರ ನೀಡಿದರು.

ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಅದರಿಂದಾಗಿ ಆ ಸಂಸ್ಥೆಯೇ ಭೂಸ್ವಾಧೀನ ಮಾಡಿಕೊಂಡು, ರನ್‌ ವೇ ನಿರ್ಮಿಸಬೇಕು. ಬೇಕಾದಲ್ಲಿ ರಾಜ್ಯ ಸರಕಾರ ಆರ್ಥಿಕ ನೆರವು ಹೊರತುಪಡಿಸಿ ಉಳಿದ ನೆರವು ನೀಡಲಿದೆ ಎಂದು ಹೇಳಿದರು.

ರಾಜ್ಯವು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದ್ದರೂ, ಅವುಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಹಸ್ತಾಂತರಿಸಬೇಕಾಗಿರುವುದರಿಂದ, ಕೇಂದ್ರದ ವಿಮಾನ ನಿಲ್ದಾಣಗಳ ಹಣಗಳಿಸುವ ಯೋಜನೆಯ ವಿರುದ್ಧ ರಾಜ್ಯ ಪ್ರತಿಭಟಿಸುತ್ತಿದೆ ಎಂದು ತಿಳಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ವಿಮಾನನಿಲ್ದಾಣವನ್ನು ಖಾಸಗಿ ಸಂಸ್ಥೆಗೆ ನಿರ್ವಹಣೆಗೆ ಮಾತ್ರ ನೀಡಲಾಗಿದೆ. ಹೀಗಾಗಿ ರಾಜ್ಯ ಸರಕಾರವೂ ರನ್‌ ವೇ ನಿರ್ಮಿಸಬಹುದು. ಇಲ್ಲವಾದರೆ ಅಗತ್ಯ ಭೂಮಿ ಒದಗಿಸಬೇಕು. ಇದು ನೂರಾರು ಜನರ ಜೀವನದ ಪ್ರಶ್ನೆ. ಹೀಗಾಗಿ ರಾಜ್ಯ ಸರಕಾರ ನಿಲುವು ಬದಲು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

140 ಕೋಟಿ ಭಾರತೀಯರ ಆಶೀರ್ವಾದ ನನ್ನ ದೊಡ್ಡ ಶಕ್ತಿ: Narendra Modi

ಓಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ, 3 ಭಾರತೀಯರು ನಾಪತ್ತೆ: ಅಮೆರಿಕದ ರಾಜತಾಂತ್ರಿಕರಿಗೆ ಭಾರತ ಸಮನ್ಸ್

ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಶಿವಕುಮಾರ್: Metro ವಿಸ್ತರಣೆ, ಡಬಲ್ ಡೆಕ್ಕರ್ ಸೇರಿ ಹಲವು ಯೋಜನೆಗಳ ಅನುಮತಿಗೆ ಮನವಿ!

'ಜೈಲಿನಲ್ಲಿ ಕ್ರಿಮಿನಲ್ ಗಂಡ, ಬಾಯ್‌ಫ್ರೆಂಡ್ ಜತೆ ಹೆಂಡತಿ ಸುತ್ತಾಟ' ಪೋಸ್ಟ್: ಕೆರಳಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪೊಲೀಸರಿಗೆ ದೂರು!

ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ ಬಿಡೋ ಪ್ರಶ್ನೆಯೇ ಇಲ್ಲ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

SCROLL FOR NEXT