ಯು.ಟಿ. ಖಾದರ್ 
ರಾಜ್ಯ

ತಪ್ಪಿನ ಅರಿವಾಗಿ ಮನವಿ ಮಾಡಲಿ, ನಂತರ ಅಮಾನತು ಅವಧಿ ಕಡಿಮೆ ಮಾಡುತ್ತೇನೆ: ಸ್ಪೀಕರ್ ಯು.ಟಿ ಖಾದರ್

ಹರಿದ ಕಾಗದಗಳನ್ನು ನನ್ನ ಮೇಲೆ ಎಸೆದು ಕುರ್ಚಿಗೆ ಅಗೌರವ ತೋರಿದ್ದರು. ಅವರ ಕುರ್ಚಿಯ ಮೇಲೆ ಹತ್ತಿ ನಿಂತು ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ್ದರು. ಅಶಿಸ್ತಿನ ವರ್ತನೆ ಮತ್ತು ಸ್ಪೀಕರ್ ಕುರ್ಚಿಗೆ ಅಗೌರವ ತೋರಿದ್ದಕ್ಕಾಗಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.

ಬೆಂಗಳೂರು: ತಪ್ಪಿನ ಅರಿವಾಗಿ ಮನವಿ ಮಾಡಲಿ. ನಂತರ 18 ಬಿಜೆಪಿ ಶಾಸಕರ ಆರು ತಿಂಗಳ ಅಮಾನತು ಅವಧಿಯನ್ನು ಕಡಿಮೆ ಮಾಡುತ್ತೇನೆಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಶನಿವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿದ ಕಾಗದಗಳನ್ನು ನನ್ನ ಮೇಲೆ ಎಸೆದು ಕುರ್ಚಿಗೆ ಅಗೌರವ ತೋರಿದ್ದರು. ಅವರ ಕುರ್ಚಿಯ ಮೇಲೆ ಹತ್ತಿ ನಿಂತು ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ್ದರು. ಅಶಿಸ್ತಿನ ವರ್ತನೆ ಮತ್ತು ಸ್ಪೀಕರ್ ಕುರ್ಚಿಗೆ ಅಗೌರವ ತೋರಿದ್ದಕ್ಕಾಗಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ನಿಯಮ 348 ರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಶಾಸಕರ ಮೇಲಿನ ಕೋಪ ಅಥವಾ ದ್ವೇಷದಿಂದ ಅವರನ್ನು ಅಮಾನತುಪಡಿಸಿಲ್ಲ. 18 ಶಾಸಕರು ಮನವಿ ಮಾಡಿಕೊಂಡರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಶಾಸಕರ ಅಮಾನತ್ತಿನ ನಿರ್ಧಾರದಲ್ಲಿ ಯಾವ ಒತ್ತಡವೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿರುತ್ತಾರೆ ಎಂಬುದು ಗೊತ್ತಿದೆ. ಅದಕ್ಕೆ ತಕ್ಕಂತೆ ಶಾಸಕರು ನಡೆದುಕೊಳ್ಳಬೇಕಲ್ಲವೇ? ಬಿಜೆಪಿ ಶಾಸಕರು ಎರಡನೇ ಬಾರಿ ಈ ರೀತಿ ನಡೆದುಕೊಂಡಿರುವುದು. ಸಚಿವರ ಹನಿಟ್ರ್ಯಾಪ್‌ ಸಂಬಂಧ ಸದನದಲ್ಲಿ ಉಂಟಾದ ಗದ್ದಲದಿಂದ ಸದನದ ಪೀಠದ ಆದೇಶವನ್ನು ಲೆಕ್ಕಿಸದೆ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡಿ ಅಶಿಸ್ತಿನಿಂದ, ಅಗೌರವದಿಂದ ನಡೆದುಕೊಂಡಿದ್ದರಿಂದ ಆರು ತಿಂಗಳ ಅವಧಿಗೆ ಅಮಾನತುಪಡಿಸಲಾಗಿದೆ. ಸದಸ್ಯರು ಮುಂದೆ ಈ ರೀತಿಯ ವರ್ತಿಸದಿರಲು ಇದು ಎಚ್ಚರಿಕೆ ಗಂಟೆಯಾಗಿದೆ.

ತಾವು ತಪ್ಪು ಮಾಡಿದ್ದೇವೆ ಎಂಬ ಭಾವನೆಯಾದರೂ ಅವರಿಗೆ ಬರಬೇಕಿತ್ತಲ್ಲವೇ? ಸ್ವಲ್ಪವಾದರೂ ತಮ್ಮ ತಪ್ಪಿನ ಅರಿವು ಇರಬೇಕಿತ್ತಲ್ಲವೇ? ಮತ್ತೆ ಕಲಾಪ ಪ್ರಾರಂಭವಾದ ನಂತರವೂ ಅದೇ ವರ್ತನೆ ಮುಂದುವರಿಸಿದರು. ಸದನದಲ್ಲಿ ಹೀಗೆ ಮಾಡುವ ಶಾಸಕರು ಮುಂದೆ ಜಿಲ್ಲಾಮಟ್ಟದ ಸಭೆಗಳಲ್ಲೂ ಇದೇ ರೀತಿ ವರ್ತಿಸಿದರೆ ಹೇಗೆ?

ಕಾನೂನು ಹೋರಾಟ ಮಾಡುವುದು ಶಾಸಕರಿಗೆ ಬಿಟ್ಟ ವಿಚಾರ. ಈಗ ಆರು ತಿಂಗಳ ಅವಧಿಗೆ ಅಮಾನತ್ತಾಗಿದೆ. ಇದೇ ರೀತಿ ಮುಂದುವರಿದರೆ ಮುಂದೆ ಒಂದು ವರ್ಷ ಅಮಾನತ್ತಾಗಬೇಕಾಗುತ್ತದೆ ಎಂಬುದು ಅರ್ಥವಾಗಬೇಕು. ಹನಿಟ್ರ್ಯಾಪ್‌ ವಿಚಾರದಲ್ಲಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಏಕಾಏಕಿ ಮಾತನಾಡಲು ಮುಂದಾದಾಗಲೂ ಅವಕಾಶ ನೀಡಿದ್ದೇನೆ. ಸಚಿವರು ಉತ್ತರಿಸಿದರು. ಗೃಹ ಸಚಿವರು, ಸಿಎಂ ಸಹ ದೂರು ಬಂದ ಮೇಲೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಹೀಗಿದ್ದೂ ಕಲಾಪಕ್ಕೆ ಅಡ್ಡಿ ಪಡಿಸುವುದು ಎಷ್ಟು ಸರಿ? ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT