ಸಾಂದರ್ಭಿಕ ಚಿತ್ರ  
ರಾಜ್ಯ

ಸಬ್-ರಿಜಿಸ್ಟ್ರಾರ್ ಕಚೇರಿ ಕರ್ಮಕಾಂಡ: ಬಡ್ತಿ ಸಿಕ್ಕಿದರೂ ದಶಕ ಕಾಲ ಹಳೆ ಹುದ್ದೆಯಲ್ಲಿಯೇ ಮುಂದುವರಿಕೆ!

ಸಬ್-ರಿಜಿಸ್ಟ್ರಾರ್ ಹುದ್ದೆಯು ವರ್ಗ ಸಿ ಆಗಿದ್ದು, ಪ್ರಧಾನ ಕಚೇರಿ ಸಹಾಯಕ (HQA, ಸಹಾಯಕ ಆಯುಕ್ತರಿಗೆ ಸಮಾನವಾದ ಶ್ರೇಣಿ) ವರ್ಗ ಎ ಹುದ್ದೆಯಾಗಿದ್ದು, ಇದು ಉತ್ತಮ ವೇತನ ಶ್ರೇಣಿಯನ್ನು ಹೊಂದಿದೆ.

ಬೆಂಗಳೂರು: ಕಳೆದ ಒಂದು ದಶಕದಿಂದ ಕರ್ನಾಟಕದಾದ್ಯಂತ ಹಲವಾರು ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ವಿಚಿತ್ರ ಪರಿಸ್ಥಿತಿ ತಲೆದೋರಿದೆ. ಆಡಳಿತಾತ್ಮಕ ಹುದ್ದೆಗಳಿಗೆ ಬಡ್ತಿ ಪಡೆದ ನಂತರವೂ ತಮ್ಮ ಹೊಸ ಹುದ್ದೆಗಳ ಹೆಚ್ಚಿನ ಸಂಬಳವನ್ನು ಪಡೆಯುತ್ತಿದ್ದರೂ ಸಬ್-ರಿಜಿಸ್ಟ್ರಾರ್‌ಗಳು ತಮ್ಮ ಮೂಲ ಹುದ್ದೆಗಳನ್ನು ತೊರೆಯಲು ನಿರಾಕರಿಸುತ್ತಿದ್ದಾರೆ.

ಸ್ಟ್ಯಾಂಪ್ಸ್ ಮತ್ತು ನೋಂದಣಿ ಇಲಾಖೆಯು ಈ ವಾರ ಅವರನ್ನು ಬಹಳ ಹಿಂದೆಯೇ ವರ್ಗಾವಣೆ ಮಾಡಲಾದ ಹುದ್ದೆಗಳಲ್ಲಿ ಮಾತ್ರ ಕೆಲಸ ಮಾಡಲು ಆದೇಶಿಸುವ ಮೂಲಕ ಪರಿಸ್ಥಿತಿಗೆ ಇತಿಶ್ರೀ ಹಾಡಲು ಮುಂದಾಗಿದೆ.

ಸಬ್-ರಿಜಿಸ್ಟ್ರಾರ್ ಹುದ್ದೆಯು ವರ್ಗ ಸಿ ಆಗಿದ್ದು, ಪ್ರಧಾನ ಕಚೇರಿ ಸಹಾಯಕ (HQA, ಸಹಾಯಕ ಆಯುಕ್ತರಿಗೆ ಸಮಾನವಾದ ಶ್ರೇಣಿ) ವರ್ಗ ಎ ಹುದ್ದೆಯಾಗಿದ್ದು, ಇದು ಉತ್ತಮ ವೇತನ ಶ್ರೇಣಿಯನ್ನು ಹೊಂದಿದೆ.

2014 ರಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಸಹಾಯಕರಾಗಿ ಬಡ್ತಿ ಪಡೆದ ನಾಲ್ಕು ಸಬ್-ರಿಜಿಸ್ಟ್ರಾರ್‌ಗಳು ತಮ್ಮ ಹಿಂದಿನ ಹುದ್ದೆಯಲ್ಲಿಯೇ ಕೆಲಸ ಮುಂದುವರಿಸಿದ್ದರು, ಅವರು ಗುಂಪು ಎಯ ಸಂಬಳವನ್ನು ಪಡೆಯುತ್ತಾ ಸಿ ಗುಂಪಿನ ಕೆಲಸ ಮುಂದುವರಿಸಿದ್ದರು. ಇದರಿಂದ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಭಾರೀ ನಷ್ಟವಾಗಿದೆ. ಕೊನೆಗೂ ಅದನ್ನು ಸರಿಪಡಿಸಲಾಗುತ್ತಿದೆ ಎಂದು ಮೂಲವೊಂದು TNIE ಪ್ರತಿನಿಧಿಗೆ ತಿಳಿಸಿದ್ದಾರೆ.

ಮೊನ್ನೆ ಮಾರ್ಚ್ 21 ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಒಂದು ದಶಕದ ಹಿಂದೆ ಬಡ್ತಿ ಪಡೆದ ಸಬ್-ರಿಜಿಸ್ಟ್ರಾರ್‌ಗಳು ತಮ್ಮ ಆದೇಶಗಳನ್ನು ಪಾಲಿಸುವಂತೆ ಆದೇಶಿಸಿದೆ. ಹೆಚ್.ಸಿ. ಲೋಕೇಶ್ ಎಂಬುವವರು ರಾಜರಾಜೇಶ್ವರಿ ನಗರ ಕಚೇರಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುವ ಬದಲು ಗಾಂಧಿ ನಗರ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಕೆಲಸಕ್ಕೆ ವರದಿ ಮಾಡಿಕೊಳ್ಳಬೇಕಾಗಿತ್ತು; ಸಿ.ವಿ. ಸುಮನಾ ಅವರು ಮಹದೇವಪುರ ಸಬ್-ರಿಜಿಸ್ಟ್ರಾರ್ ಕಚೇರಿಯ ಬದಲಿಗೆ ಕಂದಾಯ ಭವನದ ಐಜಿಆರ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕಿತ್ತು. ಮಧುಮಾಲತಿ ಅವರು ಚಾಮರಾಜಪೇಟೆಯ ಬದಲಿಗೆ ಜಯನಗರದ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ವರದಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಹಿಂದಿನ ಆದೇಶದಲ್ಲಿ, ಕೆ.ಜಿ. ಚಿಕ್ಕಪೆದಣ್ಣ ಅವರನ್ನು ಕೆ.ಆರ್. ಪುರ ಎಸ್.ಆರ್ ಕಚೇರಿಯಿಂದ ರಾಮನಗರದ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ವರ್ಗಾಯಿಸಲಾಗಿತ್ತು.

ನೋಂದಣಿ ಮಹಾನಿರ್ದೇಶಕ ಮತ್ತು ಮುದ್ರಾಂಕ ಆಯುಕ್ತ ಕೆ.ವಿ. ದಯಾನಂದ ಅವರು ನಾಲ್ವರು ವ್ಯಕ್ತಿಗಳನ್ನು ಇತ್ತೀಚೆಗೆ ಅವರ ಬಡ್ತಿ ಪಡೆದ ಹುದ್ದೆಗಳಲ್ಲಿ ಮಾತ್ರ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.

ಸರ್ಕಾರಿ ವ್ಯವಸ್ಥೆಯೊಳಗೆ ಒಂದು ದಶಕದ ಕಾಲ ಈ ರೀತಿ ಕೆಲಸ ಮಾಡಲು ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ, ವಿಶ್ವಾಸಾರ್ಹ ಮೂಲವೊಂದು, ಪ್ರಭಾವಿ ವ್ಯಕ್ತಿಗಳನ್ನು ಬಳಸಿಕೊಂಡು ಇಲಾಖೆಯ ಮೇಲೆ ಸಾಕಷ್ಟು ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅವರ ವಿರುದ್ಧ ಯಾರಿಗೂ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಸಬ್ ರಿಜಿಸ್ಟ್ರಾರ್‌ಗಳು ಪ್ರತಿದಿನ ಲಂಚ ಗಳಿಸಬಹುದಾಗಿತ್ತು. ಆದ್ದರಿಂದ, ಬಡ್ತಿ ಪಡೆದರೂ ಅವರು ಆ ಹುದ್ದೆಯಿಂದ ಹಿಂದೆ ಸರಿಯಲು ನಿರಾಕರಿಸುತ್ತಿದ್ದರು ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT