ಲೋಕಾಯುಕ್ತ 
ರಾಜ್ಯ

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 5 ಸಚಿವರು ಸೇರಿ 67 ಶಾಸಕರ ಪಟ್ಟಿ ಬಿಡುಗಡೆ

ರಾಜ್ಯದ ಐದು ಸಚಿವರು ಸೇರಿ 67 ಶಾಸಕರು, 28 ವಿಧಾನಪರಿಷತ್ ಸದಸ್ಯರು(ಎಂಎಲ್​​ಸಿ) ಇದುವರೆಗೂ 2024-25ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ.

ಬೆಂಗಳೂರು: ಕರ್ನಾಟಕ ಲೋಕಾಯುಕ್ತ, ಆಸ್ತಿ ವಿವರ ಸಲ್ಲಿಸದ ರಾಜ್ಯದ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಡಳಿರೂಢ ಕಾಂಗ್ರೆಸ್, ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್​​​ನ ಒಟ್ಟು 67 ಶಾಸಕರು ಇದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22(1) ಮತ್ತು (2)ರ ಪ್ರಕಾರ ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಬೇಕು.

ಆದರೆ ರಾಜ್ಯದ ಐದು ಸಚಿವರು ಸೇರಿ 67 ಶಾಸಕರು, 28 ವಿಧಾನಪರಿಷತ್ ಸದಸ್ಯರು(ಎಂಎಲ್​​ಸಿ) ಇದುವರೆಗೂ 2024-25ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ. ಹೀಗಾಗಿ ಲೋಕಾಯುಕ್ತ, ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಆಸ್ತಿ ವಿವರ ಸಲ್ಲಿಸದ ಸಚಿವರು

ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಸಚಿವ ಕೆ ಎಚ್‌.ಮುನಿಯಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಸತಿ, ವಕ್ಸ್ ಮತ್ತು ಅಲ್ಪ ಸಂಖ್ಯಾತ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್, ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ.

ಆಸ್ತಿ ವಿವರ ಸಲ್ಲಿಸದ ಶಾಸಕರು

ಕೆ.ಎನ್ ರಾಜಣ್ಣ, ಲಕ್ಷ್ಮಣ ಸವದಿ, ಖನೀಜ್ ಫಾತಿಮಾ, ಜನಾರ್ದನ ರೆಡ್ಡಿ, ವಿನಯ ಕುಲಕರ್ಣಿ, ಬಿ ಕೆ ಸಂಗಮೇಶ್ವರ್, ನಯನಾ ಮೊಟಮ್ಮ, ಬಿ. ಸುರೇಶ್ ಗೌಡ, ಕೆ.ಗೋಪಾಲಯ್ಯ, ಸಿ.ಪಿ.ಯೋಗೇಶ್ವರ, ಎಚ್.ಡಿ ರೇವಣ್ಣ ಹಾಗೂ ಸಿ. ಪುಟ್ಟರಂಗಶೆಟ್ಟಿ ಸೇರಿದಂತೆ 67 ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran conflict: ತೈಲ ಸಾಗಣೆ ನಿಂತರೆ ಇದೂವರೆಗೆ ನಡೆಸಿದ್ದಕ್ಕಿಂತ 20 ಪಟ್ಟು ಹೆಚ್ಚು ದಾಳಿ: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

US-Iran war ಎಫೆಕ್ಟ್: ಪಾಕಿಸ್ತಾನದಲ್ಲಿ ಇಂಧನ ಸಂಕಷ್ಟ; ಶಾಲೆಗಳು 2 ವಾರ ಬಂದ್, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

ಆಹಾರ, ಶೂ, ಸಮವಸ್ತ್ರ ಎಲ್ಲಾ ಸೌಲಭ್ಯಗಳಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ: ಸರ್ಕಾರ ವಿಷಾದ

'ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದ್ದೇನೆ ಎಂದು ಬಹಿರಂಗಪಡಿಸುವುದಿಲ್ಲ, ಬೆಂಗಳೂರಿನಲ್ಲಿ ಶಾಸಕರಿಗೆ ಡಿನ್ನರ್ ಮೀಟಿಂಗ್ ಏರ್ಪಡಿಸಿದ್ದೇನೆ': ಡಿ ಕೆ ಶಿವಕುಮಾರ್-Video

ಹೆಜ್ಬೊಲ್ಲಾಹ್‌ ಹೆಡೆಮುರಿ ಕಟ್ಟಿದ ಇಸ್ರೇಲ್; ದಕ್ಷಿಣ ಲೆಬನಾನ್ ನಲ್ಲಿದ್ದ ಉಗ್ರ ಸಂಘಟನೆ ಮುಖ್ಯಸ್ಥನ ಭೀಕರ ಹತ್ಯೆ!

SCROLL FOR NEXT