ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ, ಕೊಲೆ ಕೇಸ್ ಗಳು ಹೆಚ್ಚಳ: ಇದರ ಹಿಂದಿರುವ ನಿಜವಾದ ಕಾರಣವೇನು? ತಜ್ಞರು ಏನಂತಾರೆ

ಇತ್ತೀಚೆಗೆ ಹಬ್ಬದ ಸಮಯದಲ್ಲಿ ಬಾಡೂಟ ಮಾಡದ ಕಾರಣಕ್ಕಾಗಿ ಕಾರ್ಮಿಕನೊಬ್ಬ ತನ್ನ ಸಹೋದ್ಯೋಗಿಯನ್ನು ಹೊಡೆದು ಕೊಂದಿದ್ದನು. ಮತ್ತೊಂದು ರೋಡ್ ರೇಜ್ ಕೇಸ್ ನಲ್ಲಿ ಡಿಲಿವರಿ ಎಕ್ಸಿಕ್ಯೂಟಿವ್ ತನ್ನ ದ್ವಿಚಕ್ರ ವಾಹನವನ್ನು ಕಾರಿಗೆ ಡಿಕ್ಕಿ ಹೊಡೆದ ನಂತರ ಕೊಲೆಯಾಗಿದ್ದರು.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ತಾಳ್ಮೆ ಎಂಬುದೇ ಇಲ್ಲ. ಸುಲಭವಾಗಿ ಬಗೆಹರಿಸಬಹುದಾದ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡ ಜಗಳಗಳಾಗಿ ಬದಲಾಗುತ್ತಿದ್ದು, ಕೊಲೆಯಲ್ಲಿ ಅಂತ್ಯವಾಗುತ್ತಿದೆ.

ಕಳೆದ 2.8 ವರ್ಷಗಳಲ್ಲಿ ರಾಜ್ಯ 293 ಕೊಲೆ ಪ್ರಕರಣಗಳು ಮತ್ತು 766 ಕೊಲೆಯತ್ನ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಇವೆಲ್ಲವೂ ಹಠಾತ್ ಪ್ರಚೋದನೆಗಳಿಂದ ಉಂಟಾಗಿವೆ. ಸಿನಿಮಾಗಳ ಪ್ರಭಾವದಿಂದ ಹಿಂಸಾಚಾರ ಸಾಮಾನ್ಯವಾಗುತ್ತಿರುವುದರಿಂದ ಜನರು ಸಹನೆ ಕಳೆದುಕೊಳ್ಳುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಾಡೂಟಕ್ಕೆ ಕೊಲೆ: ಇತ್ತೀಚೆಗೆ ಹಬ್ಬದ ಸಮಯದಲ್ಲಿ ಬಾಡೂಟ ಮಾಡದ ಕಾರಣಕ್ಕಾಗಿ ಕಾರ್ಮಿಕನೊಬ್ಬ ತನ್ನ ಸಹೋದ್ಯೋಗಿಯನ್ನು ಹೊಡೆದು ಕೊಂದಿದ್ದನು. ಮತ್ತೊಂದು ರೋಡ್ ರೇಜ್ ಕೇಸ್ ನಲ್ಲಿ ಡಿಲಿವರಿ ಎಕ್ಸಿಕ್ಯೂಟಿವ್ ತನ್ನ ದ್ವಿಚಕ್ರ ವಾಹನವನ್ನು ಕಾರಿಗೆ ಡಿಕ್ಕಿ ಹೊಡೆದ ನಂತರ ಕೊಲೆಯಾಗಿದ್ದರು.

ರಾಜ್ಯಾದ್ಯಂತ 77 ಕೊಲೆ ಪ್ರಕರಣಗಳು ದಾಖಲು:

ಅಧಿಕೃತ ಮಾಹಿತಿಯ ಪ್ರಕಾರ ಈ ವರ್ಷದ ಸೆಪ್ಟೆಂಬರ್ ವರೆಗೆ ಹಠಾತ್ ಪ್ರಚೋದನೆಯಿಂದ ರಾಜ್ಯಾದ್ಯಂತ 77 ಕೊಲೆ ಪ್ರಕರಣಗಳು ಮತ್ತು 104 ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ. 2024 ರಲ್ಲಿ 104 ಕೊಲೆ ಪ್ರಕರಣಗಳು ಮತ್ತು 274 ಕೊಲೆಯತ್ನ ಪ್ರಕರಣಗಳು ದಾಖಲಾಗಿದ್ದರೆ, 2023 ರಲ್ಲಿ ಈ ಅಂಕಿಅಂಶಗಳು ಕ್ರಮವಾಗಿ 112 ಮತ್ತು 253 ರಷ್ಟಿದ್ದವು.

ಪ್ರಚೋದನೆಗಳಿಗೆ ಇವೇ ಕಾರಣನಾ?

ಒತ್ತಡ, ಹಣಕಾಸಿನ ತೊಂದರೆ ಮತ್ತು ಮದ್ಯದ ಅಮಲು ಜನರು ಸಣ್ಣಪುಟ್ಟ ಪ್ರಚೋದನೆಗಳಿಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಶಸ್ತ್ರಾಸ್ತ್ರಗಳ ಸುಲಭ ಲಭ್ಯತೆಯು ಇಂತಹ ಜಗಳಗಳು ಹೆಚ್ಚಾಗಿ ಮಾರಕವಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇವು ಪೂರ್ವಯೋಜಿತ ಕೊಲೆಗಳಲ್ಲ ಎಂದು ಅವರು ಹೇಳಿದರು. "ಕೆಲವು ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ಅಂಶಗಳು ಸಹ ಕಾರಣವಾಗಿವೆ ಎಂದು ವೈಟ್‌ಫೀಲ್ಡ್ ಡಿಸಿಪಿ ಕೆ. ಪರಶುರಾಮ ಟಿಎನ್‌ಐಇಗೆ ತಿಳಿಸಿದರು.

Ego ದಿಂದ ಕೊಲೆ ಸಂಖ್ಯೆಯಲ್ಲಿ ಹೆಚ್ಚಳ:

ಇಂದು ಹೆಚ್ಚಿನ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದು, ಆಕ್ರಮಣಕಾರಿಯಾಗಿ ತ್ವರಿತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಹೆಚ್ಚಿನ ವ್ಯಕ್ತಿಗಳು ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ. ಕೆಲವರು ಕುಡಿದಿರಬಹುದು, ಇತರರು ಪರಿಸ್ಥಿತಿಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಅವರ ಉನ್ಮಾದದ ​​ವರ್ತನೆ ಹೆಚ್ಚಾಗಿ ಹಠಾತ್ ಪ್ರಚೋದನೆಗೆ ಕಾರಣವಾಗುತ್ತದೆ. ರಸ್ತೆ ಪುಂಡಾಟ ಪ್ರಕರಣಗಳಲ್ಲಿ ಇಗೋ( Ego) ಪ್ರಮುಖ ಪಾತ್ರ ವಹಿಸುತ್ತದೆ . ಯಾರಾದರೂ ತಮ್ಮ ಕುಟುಂಬ ಅಥವಾ ಪ್ರೀತಿಪಾತ್ರರ ಮುಂದೆ ಅವಮಾನಿತರಾದಾಗ, ಅದು ಅವರ ಇಗೋ ಪ್ರಚೋದಿಸಿ, ವಾದಗಳಿಗೆ ಕಾರಣವಾಗುತ್ತದೆ, ಇದು ದೈಹಿಕ ಜಗಳಗಳಿಗೆ ಬೆಳೆಯುತ್ತದೆ, ಕೆಲವೊಮ್ಮೆ ಸಾವಿಗೆ ಕಾರಣವಾಗುತ್ತದೆ ಎಂದು ಅಧಿಕಾರಿ ಹೇಳಿದರು.

ನಿಮ್ಹಾನ್ಸ್ ನಿರ್ದೇಶಕಿ ಏನಂತಾರೆ?

ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹಠಾತ್ ಪ್ರಚೋದನೆಗೆ ಹಲವಾರು ಅಂಶಗಳು ಕಾರಣವಾಗಿವೆ ಎಂದು TNIE ಗೆ ತಿಳಿಸಿದರು. "ಸುದ್ದಿ ವರದಿ, ಸಾಮಾಜಿಕ ಮಾಧ್ಯಮ ಮತ್ತಿತರ ಸೂಕ್ಷ್ಮ( sensational)ವಿಷಯಗಳ ಮೂಲಕ ಜನರು ಬಹಳಷ್ಟು ಹಿಂಸಾಚಾರಕ್ಕೆ ಒಳಗಾಗುತ್ತಾರೆ. ಸಿನಿಮಾ ಹಾಗೂ OTT ವೇದಿಕೆಗಳಲ್ಲಿನ ಕಾರ್ಯಕ್ರಮಗಳಲ್ಲಿ ಹಿಂಸೆಯೂ ಸಾಮಾನ್ಯವಾಗಿದೆ. ಇದು ಅಸಹನೆ ಮತ್ತು ಅಸಹಿಷ್ಣುತೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಅವರು ಹೇಳಿದರು.

ಕೋಪವು ವೈಯಕ್ತಿಕ ದುಃಖದ ಅಭಿವ್ಯಕ್ತಿಯಾಗಿದೆ. ಜನರು ತಮ್ಮ ದುಃಖವನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸಲು ಮತ್ತು ತಮ್ಮ ಕೋಪವನ್ನು ನಿಯಂತ್ರಿಸಲು ಕಲಿಯಬೇಕು. ಮಾನಸಿಕ ಆರೋಗ್ಯವು ಅದನ್ನೇ ಸೂಚಿಸುತ್ತದೆ. ಮಾನಸಿಕ ಆರೋಗ್ಯವು ಒಬ್ಬರ ಆಲೋಚನೆಗಳು, ಭಾವನೆಗಳು ಮತ್ತು ಭಾವನೆಗಳನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದೆ ಎಂದು ಅವರು ತಿಳಿಸಿದರು.

Homicide, not murder: ಈ ಪ್ರಕರಣಗಳಲ್ಲಿ ಹೆಚ್ಚಿನವು ಆರಂಭದಲ್ಲಿ ಕೊಲೆ ಎಂದು ದಾಖಲಾಗುತ್ತವೆ. ಆದಾಗ್ಯೂ, ತನಿಖೆಯ ನಂತರ, ಹಠಾತ್ ಪ್ರಚೋದನೆಯಿಂದಾಗಿ ಕೊಲೆ ನಡೆದಿದೆ ಎಂದು ಕಂಡುಬಂದರೆ, ಆರೋಪವನ್ನು ಕೊಲೆಗೆ ಸಮನಾಗದ ಅಪರಾಧಿ ಎಂದು ಬದಲಾಯಿಸಲಾಗುತ್ತದೆ. ಎರಡು ಅಪರಾಧಗಳ ನಡುವೆ ಬಹಳ ವ್ಯತ್ಯಾಸವಿದೆ.

ಹಠಾತ್ ಪ್ರಚೋದನೆಯ ಪ್ರಕರಣಗಳಲ್ಲಿ ಕೊಲೆಯನ್ನು ಸಾಬೀತುಪಡಿಸುವುದು ಕಷ್ಟಕರವಾಗಿರುತ್ತದೆ. ಏಕೆಂದರೆ ಸಾಮಾನ್ಯವಾಗಿ ಅಂತಹ ಕೃತ್ಯಗಳ ಹಿಂದೆ ಯಾವುದೇ ಪಿತೂರಿ ಅಥವಾ ಉದ್ದೇಶವಿರುವುದಿಲ್ಲ. ಜಗಳದ ಸಮಯದಲ್ಲಿ, ಒಬ್ಬ ವ್ಯಕ್ತಿಯು ಕೊಲ್ಲುವ ಉದ್ದೇಶವಿಲ್ಲದೆ ಇನ್ನೊಬ್ಬರ ಮೇಲೆ ಹಲ್ಲೆ ಮಾಡಬಹುದು.ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿ ಇಂತಹ ಕೊಲೆಗಳು ನಡೆಯಬಹುದು ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ 'ರಾಜಾತಿಥ್ಯ': ಇಬ್ಬರು ಅಧಿಕಾರಿಗಳು ಅಮಾನತು; ಮುಖ್ಯ ಅಧೀಕ್ಷಕ ಎತ್ತಂಗಡಿ; ತನಿಖೆಗೆ ಸಮಿತಿ ರಚನೆ

ಜೈಲಿನ ಕೈದಿಗಳಿಗೆ 'ರಾಜಾತಿಥ್ಯ'ಕ್ಕೆ ಖಂಡನೆ: ಸಿಎಂ ಮನೆಗೆ ಮುತ್ತಿಗೆ ಯತ್ನ; ಅನೇಕ ಬಿಜೆಪಿ ನಾಯಕರು ಪೊಲೀಸ್​ ವಶಕ್ಕೆ

Tirumala: 'ನಂದಿನಿ ಬೇಡ' ಎಂದಿದ್ದ TTDಗೆ ಉಂಡೇ ನಾಮ ತಿಕ್ಕಿದ್ದ ಖಾಸಗಿ ಡೈರಿ, 'ಹಾಲನ್ನೇ ಬಳಸದೇ ತುಪ್ಪ ತಯಾರಿಕೆ'.. ಭಕ್ತರಿಗೆ ಕಲಬೆರಕೆ ಲಡ್ಡು ಪ್ರಸಾದ!

360 ಕೆಜಿ ಸ್ಫೋಟಕ, ಶಸ್ತ್ರಾಸ್ತ್ರಗಳು ಪತ್ತೆ ಪ್ರಕರಣ: ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಸೇರಿ ಇಬ್ಬರ ಬಂಧನ

20 ವರ್ಷಗಳ ದುರ್ಬಲ ಆಡಳಿತದಿಂದ ಮುಕ್ತಿ: ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆ ಖಚಿತ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT