ಪ್ರಿಯಾಂಕ್ ಖರ್ಗೆ 
ರಾಜ್ಯ

ಡೀಪ್ ಟೆಕ್ ಸ್ಟಾರ್ಟ್‌ಅಪ್‌ ಉತ್ತೇಜಿಸಲು 1,200 ಕೋಟಿ ರೂ ಸಂಗ್ರಹ: ಸಚಿವ ಪ್ರಿಯಾಂಕ್ ಖರ್ಗೆ

ಡೀಪ್ ಟೆಕ್ ಸ್ಟಾರ್ಟ್‌ಅಪ್‌ ಉತ್ತೇಜಿಸಲು ಒಟ್ಟು 1,200 ಕೋಟಿ ರೂ.ಗಳಿಗೂ ಹೆಚ್ಚು ನಿಧಿಯನ್ನು ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ ವಿವಿಧ ಉದ್ಯಮಿಗಳು ಒಟ್ಟು 786.43 ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಬೆಂಗಳೂರು: ಡೀಪ್ ಟೆಕ್ ಸ್ಟಾರ್ಟ್‌ಅಪ್‌ ಉತ್ತೇಜಿಸಲು 1,200 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಹೇಳಿದ್ದಾರೆ.

ನಗರದ ಬಿಐಇಸಿಯಲ್ಲಿ ಗುರುವಾರ ಮುಕ್ತಾಯಗೊಂಡ 3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್'ನ ಸಮಾರೋಪದಲ್ಲಿ ಮಾತನಾಡಿದ ಅವರು, ಡೀಪ್ ಟೆಕ್ ಸ್ಟಾರ್ಟ್‌ಅಪ್‌ ಉತ್ತೇಜಿಸಲು ಒಟ್ಟು 1,200 ಕೋಟಿ ರೂ.ಗಳಿಗೂ ಹೆಚ್ಚು ನಿಧಿಯನ್ನು ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ ವಿವಿಧ ಉದ್ಯಮಿಗಳು ಒಟ್ಟು 786.43 ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ, ಉಳಿದ ಹಣವನ್ನು ಕರ್ನಾಟಕ ಸರ್ಕಾರ ಕೊಡುಗೆಯಾಗಿ ನೀಡಿದೆ ಎಂದು ಹೇಳಿದರು.

ಡೀಪ್ ಟೆಕ್ ಸ್ಟಾರ್ಟ್‌ಅಪ್‌'ಗಳಿಗೆ ಭಾರತದಲ್ಲಿ ಎಲ್ಲಿಯೂ ಸರ್ಕಾರ ಮತ್ತು ಖಾಸಗಿ ವಲಯ ಹೂಡಿಕೆಗೆ ಸಹಕರಿಸುವುದನ್ನು ನೀವು ನೋಡಿರುವುದಿಲ್ಲ. ದೇಶದ ಉಳಿದ ಭಾಗಗಳು ಕೂಡ ಈ ರೀತಿ ಮಾಡುವಂತೆ ನಾವು ಪ್ರೇರೇಪಿಸುತ್ತೇವೆ. ಜಗತ್ತಿನಲ್ಲಿ ಸಾಟಿಯಿಲ್ಲದ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತೇವೆ. ಈ ವೇದಿಕೆ ಸೃಷ್ಟಿಸಲು ದೇಣಿಗೆ ನೀಡಿದ ಉದ್ಯಮಿಗಳಿಗೆ ಧನ್ಯವಾದಗಳು. ಎಲಿವೇಟ್ ಕಾರ್ಯಕ್ರಮದಿಂದ 143 ಸ್ಟಾರ್ಟ್‌ಅಪ್‌ಗಳು ಪ್ರಯೋಜನ ಪಡೆದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭರತೋನ್ ಸರ್ವೀಸಸ್ ಮತ್ತು ಅಂಗಸಂಸ್ಥೆಗಳು, ಇನ್ನೋವೇಶನ್ಸ್ ಮತ್ತು ಡಿಎಕ್ಸ್‌ಬಯೋಟಿಕ್ಸ್ ಎಲ್‌ಎಲ್‌ಪಿ ಸ್ಟಾರ್ಟ್‌ಅಪ್‌ಗಳ ಮಾಲೀಕರನ್ನು ವೇದಿಕೆಯ ಮೇಲೆ ಕರೆತಂದು ಸನ್ಮಾನಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!