ಬೆಂಗಳೂರು: ವಿಲ್ಸನ್ ಗಾರ್ಡನ್ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಮೂವರು ಅಪರಿಚಿತ ಹಲ್ಲೆಕೋರರನ್ನು ಭಾನುವಾರ ಬಂಧಿಸಿಸಿದ್ದಾರೆ. ಆರೋಪಿಗಳಿಂದ ಎರಡು ಬಂದೂಕು, ಒಂದು ಮೊಬೈಲ್ ಫೋನ್, ಒಂದು ಬೆಳ್ಳಿ ಸರ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
'ನವೆಂಬರ್ 15 ರಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ, ಶಾಂತಿನಗರದ ಅಯ್ಯಪ್ಪ ದೇವಸ್ಥಾನದ ಬಳಿ ದೂರುದಾರರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಮೂವರು ಅಪರಿಚಿತರು ಅವರನ್ನು ಅಡ್ಡಗಟ್ಟಿ, ಆಯುಧದಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ ಕೂಲಂಕಷವಾಗಿ ವಿಚಾರಣೆ ನಡೆಸಲಾಗಿದೆ' ಎಂದು ಬೆಂಗಳೂರು ಕೇಂದ್ರ ಡಿಸಿಪಿ ಅಕ್ಷಯ್ ಎಂ ಹಾಕೆ ತಿಳಿಸಿದ್ದಾರೆ.
'ಆರೋಪಿಗಳು ದ್ವಿಚಕ್ರ ವಾಹನವನ್ನು ಕದ್ದಿದ್ದಾರೆ. ಮೂವರು ವ್ಯಕ್ತಿಗಳು ಸಾರ್ವಜನಿಕರಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ. ದೂರುದಾರರಿಂದ ಒಟ್ಟು ಎರಡು ಮೊಬೈಲ್ ಫೋನ್‌ಗಳು ಮತ್ತು ಬೆಳ್ಳಿ ಸರಯನ್ನು ಕಸಿದುಕೊಂಡಿದ್ದಾರೆ. ತನಿಖೆ ಮುಂದುವರೆದಿದೆ' ಎಂದು ಅವರು ಹೇಳಿದರು.
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಅಕ್ಷಯ್ ಎಂ ಹಾಕೆ ಅವರ ಮಾರ್ಗದರ್ಶನದಲ್ಲಿ, ಐಪಿಎಸ್ ಮತ್ತು ಹಲಸೂರುಗೇಟ್ ಉಪವಿಭಾಗದ ಕಾರ್ಯಕಾರಿ ಪೊಲೀಸ್ ಆಯುಕ್ತ ಸುಧೀರ್ ಎಸ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಫಾರೂಕ್ ಪಾಷಾ ಎಂಜಿ, ಸಬ್ ಇನ್ಸ್‌ಪೆಕ್ಟರ್ ದಾದಾ ಹಯಾತ್, ಎಎಸ್‌ಐ ಅಲ್ತಾಫ್ ಹುಸೇನ್ ಎನ್. ದಖಾನಿ ಮತ್ತು ಸಿಬ್ಬಂದಿ ಶಿವರಾಮ, ಹೆಡ್ ಕಾನ್ಸ್‌ಟೇಬಲ್ ವೆಂಕಟೇಶ್ ಮೂರ್ತಿ, ಹೆಡ್ ಕಾನ್ಸ್‌ಟೇಬಲ್ ಅತೀಕ್ ಅಹ್ಮದ್, ಹೆಡ್ ಕಾನ್ಸ್‌ಟೇಬಲ್ ಎ ವಜ್ರಪ್ಪ, ಹೆಡ್ ಕಾನ್ಸ್‌ಟೇಬಲ್ ನಿಜಲಿಂಗಪ್ಪ ಎಸ್. ತೊಂಡಿಕಟ್ಟಿ ಸೇರಿದಂತೆ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.