ಮೈಸೂರು: ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ವಿಚಾರಕ್ಕೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದ ವಿವಿಧೆಡೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಅಭಿಮಾನಿಗಳು, ಕಾರ್ಯಕರ್ತರು ಪೂಜೆ ಸಲ್ಲಿಸಿ ದೇವರ ಮೊರೆ ಹೋಗಿದ್ದಾರೆ.
ಸೋಮವಾರ ಡಿಕೆಶಿ ಅಭಿಮಾನಿಗಳ ಹಲವು ಚಟುವಟಿಕೆಗಳು ಗಮನ ಸೆಳೆದವು, ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳು ವಿಶೇಷ ಪೂಜೆ ಸಲ್ಲಿಸಿದರು.
ಡಿ,ಕೆ ಶಿವಕುಮಾರ್ ಅವರ ಉನ್ನತ ಹುದ್ದೆಗೆ ಏರಲು ಪ್ರಾರ್ಥನೆ ಸಲ್ಲಿಸಿ ಶಬರಿಮಲೆಗೆ ತೆರಳಿದರು, ಅವರ ರಾಜಕೀಯ ಯಶಸ್ಸಿಗೆ ತಾವು ಅಯ್ಯಪ್ಪ ದೇವಾಲಯಕ್ಕೆ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದರು.
ಅಖಿಲ ಕರ್ನಾಟಕ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಮಾನಿ ಬಳಗ ರಾಘವೇಂದ್ರ ಅವರು, "ನಮ್ಮ ಪ್ರಾರ್ಥನೆಗಳು ರಾಜಕೀಯ ಒತ್ತಡವಲ್ಲ, ಆದರೆ ಲಕ್ಷಾಂತರ ಬೆಂಬಲಿಗರು ಅವರಲ್ಲಿ ಭರವಸೆ ಇರಿಸಿದ್ದಾರೆ ಎಂದು ಹೇಳಿದರು.
ಈ ಮಧ್ಯೆ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಬ್ಯಾನರ್ ಅಡಿಯಲ್ಲಿ ಒಕ್ಕಲಿಗ ಸಮುದಾಯದ ಸದಸ್ಯರು ಮತ್ತು ಹಲವಾರು ಕನ್ನಡ ಕಾರ್ಯಕರ್ತರು 101 ಗಣಪತಿ ದೇವಸ್ಥಾನದಲ್ಲಿ ಜಮಾಯಿಸಿ ತೆಂಗಿನಕಾಯಿ ಒಡೆದರು.
ಸಂಘದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅವರು ಪೂಜಾ ಕೈಂಕರ್ಯಗಳು ರಾಜಕೀಯವಲ್ಲ, ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಮುಖ್ಯಮಂತ್ರಿಯಾಗುವುದನ್ನು ನೋಡುವ ಬಯಕೆ ಎಂದು ಹೇಳಿದರು. "ಡಿಕೆ ಶಿವಕುಮಾರ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿದ್ದಾರೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಔಪಚಾರಿಕ ಘೋಷಣೆ ಮಾಡುವ ಸಮಯ ಬಂದಿದೆ" ಎಂದು ಅವರು ಹೇಳಿದರು.