ಪುಷ್ಪ ಪ್ರದರ್ಶನ 
ರಾಜ್ಯ

ಕಬ್ಬನ್‌ ಪಾರ್ಕ್‌ Flower show; ಎಷ್ಟು ದಿನ..? ಶುಲ್ಕವೆಷ್ಟು..?

ಫಲಪುಷ್ಪ ಪ್ರದರ್ಶನಕ್ಕೆ 20ರಿಂದ 25 ಸಾವಿರ ಹೂವು ಕುಂಡಗಳ ಬಳಕೆ ಮಾಡಲಾಗಿದೆ. ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟ್ಯಾಂಡ್, ಬಾಲಭವನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ.

ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ 10 ವರ್ಷಗಳ ಹಿಂದೆ ಕೈಬಿಟ್ಟಿದ್ದ ಪುಷ್ಪ ಪ್ರದರ್ಶನ ಇದೀಗ ಮತ್ತೆ ಆರಂಭವಾಗಿದೆ.

ಪುಷ್ಪ ಪ್ರದರ್ಶನ ನ.27ರಿಂದ ಆರಂಭವಾಗಿದ್ದು. ಡಿ.7ರವರೆಗೆ ಇರಲಿದೆ. ಇದರಂತೆ ಒಟ್ಟು 11 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ.

ಈ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗುರುವಾರ ಚಾಲನೆ ನೀಡಿದರು.

ಈ ವೇಳೆ ಮಾಡತನಾಡಿದ ಅವರು. ಸಾವಯವ ತ್ಯಾಜ್ಯವನ್ನು ಮರುಬಳಕೆ ಮಾಡಿ. ಫಲ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿರುವ ಪುಷ್ಪಗಳನ್ನು ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕೆಂದು ಹೇಳಿದರು.

ತೋಟಗಾರಿಕೆ ಇಲಾಖೆಯು ವಿಶೇಷವಾಗಿ ಮಕ್ಕಳಿಗಾಗಿ ಹೂವಿನ ಪ್ರದರ್ಶನವನ್ನು ಆಯೋಜಿಸುತ್ತಿದೆ. ಪ್ರತಿಯೊಬ್ಬರೂ ಈ ಹೂವಿನ ಪ್ರದರ್ಶನದಿಂದ ಅಗತ್ಯವಾದ ಪಾಠವನ್ನು ಕಲಿಯಬೇಕು ಮತ್ತು ಅನುಸರಿಸಬೇಕು. ನಮ್ಮ ಜೀವನಶೈಲಿ ನೈಸರ್ಗಿಕವಾಗಿ ನಡೆಸಿರೆ, ಅದು ಎಲ್ಲರಿಗೂ ಒಳ್ಳೆಯದು. ಈ ಪುಷ್ಪ ಪ್ರದರ್ಶನಕ್ಕೆ ಎಲ್ಲರೂ ಭೇಟಿ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ‘ಹೂಗಳ ಹಬ್ಬ-2025, ಕಲೆ ಸಂಸ್ಕೃತಿಯ ಸಮಾಗಮ’ದಲ್ಲಿ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್‌) 25 ಕಿರು ಆಹಾರ ಸಂಸ್ಕರಣಾ ಮಳಿಗೆಗಳನ್ನು ತೆರೆದಿದೆ.

ಫಲಪುಷ್ಪ ಪ್ರದರ್ಶನಕ್ಕೆ 20ರಿಂದ 25 ಸಾವಿರ ಹೂವು ಕುಂಡಗಳ ಬಳಕೆ ಮಾಡಲಾಗಿದೆ. ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟ್ಯಾಂಡ್, ಬಾಲಭವನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ತನಕ ವೀಕ್ಷಣೆಗೆ ಅವಕಾಶ ಇರಲಿದೆ. ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.

ಕಬ್ಬನ್‌ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶದಲ್ಲಿ ಕೇವಲ ಹೂವುಗಳಲ್ಲದೆ, ಈ ಬಾರಿ ಪ್ಯಾರಾಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್ ವತಿಯಿಂದ ಆಯೋಜಿಸಲಾಗಿರುವ ಆರ್ಮಿ ರೈಫಲ್ಸ್ ಹಾಗೂ ಶಸ್ತ್ರಾಸ್ತ್ರ ಪ್ರದರ್ಶನವು ಹೂವಿನ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.

ಪ್ರದರ್ಶನಕ್ಕೆ ಸುಮಾರು 20 ಸಾವಿರ ಹೂಗಳನ್ನು ಬಳಕೆ ಮಾಡಲಾಗಿದೆ. ಹೂವುಗಳಿಂದ ಹಂಪಿ ರಥ, ಟ್ರ್ಯಾಕ್ಟರ್‌, ಜಿಂಕೆ, ಕೋಳಿ, ಮೀನು, ಚಿಟ್ಟೆ, ಕರ್ನಾಟಕ ಭೂಪಟಗಳ ಕಲಾಕೃತಿ ರಚಿಸಲಾಗಿದೆ. ಸೇಬು ಸೇರಿದಂತ ನಾನಾ ಹಣ್ಣುಗಳು ಹೂವಿನಿಂದ ಮೈದಳೆದಿವೆ.

ವಿವಿಧ ತರಕಾರಿಯಿಂದ ತಯಾರಿಸಿದ ಆನೆ ಕಲಾಕೃತಿಗಳು ನೋಡುಗರ ಗಮನಸೆಳೆಯುಧಿತ್ತಿವೆ. ಪ್ಯಾರಾಚೂಟ್‌ ರೆಜಿಮೆಂಟ್‌ ಟ್ರೈನಿಂಗ್‌ ಸೆಂಟರ್‌ ವತಿಯಿಂದ ಆಯೋಜಿಸಿರುವ ಆರ್ಮಿ ರೈಫಲ್ಸ್‌ ಹಾಗೂ ಶಸ್ತಾ್ರಸ್ತ್ರ ಪ್ರದರ್ಶನವು ಹೂವಿನ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಬಳಿಕ ರಾಷ್ಟ್ರಪತಿಗಳ ಭೇಟಿಯಾದ ಅಮಿತ್ ಶಾ; ಹೆಚ್ಚಿದ ಕುತೂಹಲ, ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ?

ಶತಮಾನದ ಭೀಕರ ಭೂಕಂಪಕ್ಕೆ ನಲುಗಿದ Venezuela: 235 ಮಂದಿ ಸಾವು; ಸಾವಿರಾರು ಜನರು ನಾಪತ್ತೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಯುದ್ಧದಲ್ಲೂ ಮಕ್ಕಳ ರಕ್ಷಣೆ ಅಗತ್ಯ, ಶಾಲೆಗಳ ಗುರಿಯಾಗಿಸುವವರ ವಿರುದ್ಧ ಇಡೀ ವಿಶ್ವ ಒಗ್ಗೂಡಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಆಗ್ರಹ..!

'Happy Birthday... Please Resign'; ಧರ್ಮೇಂದ್ರ ಪ್ರಧಾನ್‌ಗೆ ವಿನೂತನವಾಗಿ ಶುಭ ಹಾರೈಸಿದ Cockroach Janta Party

RSS ಗಲಿಬಿಲಿಗೊಂಡರೆ BJP ಏಕೆ ಬುಸುಗುಡುತ್ತೆ: ಬಾಲ ಯಾರ ಕೈಯ್ಯಲ್ಲಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ