ಭಗುಂಡೇಶ್ವರ ದೇವಾಲಯ, ಭಾಗಮಂಡಲ, ಮಡಿಕೇರಿ 
ರಾಜ್ಯ

ಭಾಗಮಂಡಲ, ತಲಕಾವೇರಿ ದೇವಾಲಯಗಳ ಭೂಮಿ ಒತ್ತುವರಿ ದೃಢ!

ಈ ಸಂಬಂಧ ಭೂ ದಾಖಲೆ ಇಲಾಖೆಯು, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು, ಮುಂದಿನ ಕ್ರಮಕ್ಕಾಗಿ ಕಾಯುತ್ತಿದೆ.

ಮಡಿಕೇರಿ: ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳ ಭೂಮಿಯನ್ನು ಕೇರಳದ ಉದ್ಯಮಿ ಸೇರಿದಂತೆ 40ಕ್ಕೂ ಹೆಚ್ಚು ಜನರು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಭೂ ದಾಖಲೆ ಇಲಾಖೆಯು, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು, ಮುಂದಿನ ಕ್ರಮಕ್ಕಾಗಿ ಕಾಯುತ್ತಿದೆ.

ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳ ಸುಮಾರು 156 ಎಕರೆಗೂ ಹೆಚ್ಚು ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಕೊಡಗು ಏಕೀಕರಣರಂಗ ಆರೋಪಿಸಿದ್ದು, ಈ ಸಂಬಂಧ ಲೋಕಾಯುಕ್ತಕ್ಕೆ ನೀಡಿದ ದೂರಿನ ಮೇರೆಗೆ ಸದರಿ ಅತಿಕ್ರಮಣ ಭೂಮಿಯ ಸಮೀಕ್ಷೆ ನಡೆಸಲಾಗಿದೆ.

ದೇವಾಲಯಗಳಿಗೆ ಸಂಬಂಧಿಸಿದ ಭೂಮಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪ 2012ರಲ್ಲಿಯೇ ಕೇಳಿಬಂದಿದ್ದು, ಆಗ ಈ ಪ್ರಕರಣದ ತನಿಖೆಗಾಗಿ ಆರಂಭದಲ್ಲಿ ಕಾರ್ಯಪಡೆ ರಚಿಸಲಾಯಿತು. ಅತಿಕ್ರಮಣವನ್ನು ಗುರುತಿಸಲು 2013 ರಲ್ಲಿ ಭೂ ಸಮೀಕ್ಷೆಯನ್ನು ನಡೆಸಲಾಯಿತು ಮತ್ತು ಒಟ್ಟು 71 ಅತಿಕ್ರಮಣಗಳನ್ನು ಗುರುತಿಸಲಾಯಿತು.

ಆದರೆ, ಏಕೀಕರಣರಂಗದ ಸದಸ್ಯರು ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಹೀಗಾಗಿಯೇ ಸಮೀಕ್ಷಾ ವರದಿ ಕಾಣೆಯಾಗಿದೆ. ಈ ಕೆಲವು ಆರ್‌ಟಿಸಿಗಳಲ್ಲಿ, ಭಗುಂಡೇಶ್ವರ ದೇವಾಲಯದ ಹೆಸರನ್ನು ಖಾಸಗಿ ವ್ಯಕ್ತಿಗಳ ಹೆಸರಿನೊಂದಿಗೆ ಸಂಯೋಜಿಸಲಾಗಿದೆ ಎಂದು ಆರೋಪಿಸಿದ್ದರು.

ನಂತರ ಕೊಡಗು ಏಕೀಕರಣ ರಂಗ ಸದಸ್ಯರು ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.

ಭಾಗಮಂಡಲ ಮತ್ತು ತಲಕಾವೇರಿ ದೇವಾಲಯ ಸಮಿತಿಗಳು ಭೂ ದಾಖಲೆಗಳ ಇಲಾಖೆಯ ಮೂಲಕ ಸಮೀಕ್ಷೆ ನಡೆಸಿ, ಅತಿಕ್ರಮಣದ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಜಿಲ್ಲಾಡಳಿತಕ್ಕೆ ಆದೇಶಿಸಿದರು.

ಇದೀಗ ಭೂ ದಾಖಲೆ ಇಲಾಖೆಯು ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದೆ ಮತ್ತು ವರದಿಯಲ್ಲಿ 50 ಎಕರೆಗೂ ಹೆಚ್ಚು ಭೂಮಿ ಒತ್ತುವರಿ ಮಾಡಲಾಗಿದೆ ಎಂದು ಹೇಳಿದೆ.

ವರದಿಯು ಮುಜರಾಯಿ ಭೂಮಿಯನ್ನು ಅತಿಕ್ರಮಣ ಮಾಡಿರುವ ಒಟ್ಟು 40 ವ್ಯಕ್ತಿಗಳನ್ನು ಗುರುತಿಸಿದೆ. ಆದರೂ ಹೆಚ್ಚಿನ ಅತಿಕ್ರಮಣಗಳನ್ನು ಗುರುತಿಸಲು 18 ಎಕರೆಗೂ ಹೆಚ್ಚು ಭೂಮಿಯ ಸರ್ವೆ ಕಾರ್ಯ ಇನ್ನೂ ಬಾಕಿ ಇದೆ. ಕೊಡಗು ಏಕೀಕರಣ ರಂಗ ಸದಸ್ಯರ ಪ್ರಯತ್ನಗಳ ನಂತರ ಅತಿಕ್ರಮಣಗಳನ್ನು ಗುರುತಿಸಲಾಗಿದೆ, ಅವರು ಸ್ಥಳೀಯ ನಿವಾಸಿಗಳು ಮತ್ತು ಕೇರಳದ ರೆಸಾರ್ಟ್ ಮಾಲೀಕರು ಅತಿಕ್ರಮಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಟಿಕೆಟ್‌: ಡಿಕೆ ಶಿವಕುಮಾರ್ ಘೋಷಣೆ

ಅನಂತ್‌ನಾಗ್‌: ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆ!

ಸ್ವದೇಶಿ ಮಂತ್ರ: Gmailನಿಂದ Zoho Mailಗೆ ಅಮಿತ್ ಶಾ ಶಿಫ್ಟ್; ಟ್ರಂಪ್‌ಗೆ ಠಕ್ಕರ್

26/11 ದಾಳಿಯ ನಂತರ ಪ್ರತೀಕಾರ ತಡೆದವರು ಯಾರು ಎಂಬುದನ್ನು ಕಾಂಗ್ರೆಸ್ ದೇಶಕ್ಕೆ ತಿಳಿಸಬೇಕು: ಪ್ರಧಾನಿ ಮೋದಿ

ಬೆಂಗಳೂರಿನ ಸಂಚಾರ ದಟ್ಟಣೆ ಜಾಗತಿಕ ಸವಾಲು: ಲಂಡನ್-ದೆಹಲಿ ಉದಾಹರಣೆ ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್

SCROLL FOR NEXT