ಬೆಂಗಳೂರು: ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೋಗೆ ವಾಲ್ಮಿಕಿ ಹೆಸರು ನಾಮಕರಣ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಎರಡೂ ಮೆಟ್ರೋವನ್ನು ನಡೆಸುತ್ತಿವೆ. ಹೀಗಾಗಿ ನಾನು ಅದನ್ನು ಶಿಫಾರಸು ಮಾಡುತ್ತೇನೆ. ಕೇಂದ್ರವು ಒಪ್ಪಿಕೊಳ್ಳಬೇಕು. ಏನಾಗುತ್ತದೆ ಎಂದು ಕಾದು ನೋಡಬೇಕು ಎಂದಿದ್ದಾರೆ.
ಪಠ್ಯಪುಸ್ತಕಗಳಲ್ಲಿ ವಾಲ್ಮೀಕಿ ಮತ್ತು ರಾಮಾಯಣವನ್ನು ಸೇರಿಸುವ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಅವರ ಸಲಹೆಯನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ವಾಲ್ಮೀಕಿ ಭವನ/ಸೌಧ ನಿರ್ಮಿಸಲು ಎರಡು ಎಕರೆ ಭೂಮಿಯನ್ನು ನೀಡಲಾಗಿದೆ ಎಂದು ಹೇಳಿದ ಅವರು, ಯೋಜನೆಗೆ ಅಗತ್ಯವಾದ ಹಣವನ್ನು ಮುಂದಿನ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಹೇಳಿದರು.
ವಾಲ್ಮೀಕಿಯವರ ಪ್ರತಿಮೆಯನ್ನು 2017 ರಲ್ಲಿ ಸ್ಥಾಪಿಸಲಾಯಿತು. ವಾಲ್ಮೀಕಿ ಹಾಗೂ ಕನಕದಾಸರಂತಹ ಮಹಾನ್ ಸಂತರು ಸಮಾಜಮುಖಿಯಾಗಿ ಬದುಕಿದವರು. ಅವರು ಬೋಧಿಸಿದಂತೆ ಮಾನವೀಯ ಮೌಲ್ಯಗಳನ್ನು ಅನುಸರಿದವರು ಎಂದರು.