ಕೃತ್ತಿಕಾ ಮತ್ತು ಮಹೇಂದ್ರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾಂಟ್ರ್ಯಾಕ್ಟ್ ವೈದ್ಯರಾಗಿದ್ದಾರೆ. Photo | Special Arrangement
ರಾಜ್ಯ

ಬೆಂಗಳೂರು ಶಾಕಿಂಗ್: ಇಂಜೆಕ್ಷನ್ ಚುಚ್ಚಿ ಪತ್ನಿಯನ್ನೇ ಕೊಂದ ವೈದ್ಯ; ಪ್ರಕರಣ ಬಯಲಾಗಿದ್ದೇ ರೋಚಕ!

ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದ್ದು, ಸ್ವಂತ ಪತಿಯೇ ತನ್ನ ಪತ್ನಿಯನ್ನು ಇಂಜೆಕ್ಷನ್ ನೀಡಿ ಕೊಂದು ಹಾಕಿರುವ ಭೀಕರ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಇಂಜೆಕ್ಷನ್​ ನೀಡಿ ವೈದ್ಯೆ ಪತ್ನಿಯನ್ನೇ ಕೊಂದು ಸಹಜ ಸಾವು ಎಂದು ಬಿಂಬಿಸಿ ಕುಟುಂಬಸ್ಥರನ್ನು ನಂಬಿಸಿದ್ದ ಖತರ್ನಾಕ್​ ವೈದ್ಯ​ನನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು.. ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದ್ದು, ಸ್ವಂತ ಪತಿಯೇ ತನ್ನ ಪತ್ನಿಯನ್ನು ಇಂಜೆಕ್ಷನ್ ನೀಡಿ ಕೊಂದು ಹಾಕಿರುವ ಭೀಕರ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ನಡೆದಿದೆ. ಕೃತಿಕಾ ಎಂಬ ಮಹಿಳೆಯನ್ನು ಡಾಕ್ಟರ್ ಮಹೇಂದ್ರ ಎಂಬುವವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವೃತ್ತಿಯಲ್ಲಿ ಜನರಲ್ ಸರ್ಜನ್ ಆಗಿರುವ ಡಾ.ಮಹೇಂದ್ರರೆಡ್ಡಿ ಬಂಧಿತ ಆರೋಪಿಯಾಗಿದ್ದು, ಪತ್ನಿಗೆ ಅನಾರೋಗ್ಯ ಸಮಸ್ಯೆ ಇರುವ ಕಾರಣ ಈತ ಕೊಲೆ ಮಾಡಿದ್ದಾನೆ ಎಂಬ ಆಘಾತಕಾರಿ ವಿಷಯ ತನಿಖೆ ವೇಳೆ ಗೊತ್ತಾಗಿದೆ.

ಮೂಲಗಳ ಪ್ರಕಾರ, 2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಅವರಿಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು. ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು.

ಆದರೆ, ಮದುವೆ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿ ಮಹೇಂದ್ರ ರೆಡ್ಡಿಗೆ ಗೊತ್ತಾಗಿತ್ತು. ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನ ಮಹೇಂದ್ರರೆಡ್ಡಿ ಇಂಜೆಕ್ಷನ್ ನೀಡಿ ಕೊಂದಿದ್ದ. ಆದರೆ ಅದನ್ನು ಸಹಜ ಸಾವು ಎಂದು ಬಿಂಬಿಸಿದ್ದ.

ಸಹಜ ಸಾವು ಎಂಬಂತೆ ಬಿಂಬಿಸಿದ್ದ ಖತರ್ನಾಕ್ ವೈದ್ಯ

ವೈದ್ಯ ಮಹೇಂದ್ರ ರೆಡ್ಡಿ ತನ್ನ ವೈದ್ಯಕೀಯ ಬುದ್ದಿ ಬಳಸಿ ಕೊಲೆ ಮಾಡಿದ ಬಳಿಕ ನ್ಯಾಚುರಲ್ ಡೆತ್ ಆಗಿದೆ ಎಂದು ಎಲ್ಲರನ್ನು ನಂಬಿಸಿದ್ದ. ಇದನ್ನು ಸಹಜ ಸಾವು ಎಂದೇ ಕುಟುಂಬದವರು ನಂಬಿದ್ದರು.

ದೂರು ನೀಡಿದ್ದ ತಂದೆ

ಕೃತಿಕಾ ಸಾವಿಗೆ ಸಂಬಂಧಿಸಿದಂತೆ ಆಕೆಯ ತಂದೆ ಮುನಿರೆಡ್ಡಿ ಎಂಬುವವರು ಪೊಲೀಸ್ ದೂರು ದಾಖಲಿಸಿದ್ದರು. ಕೃತಿಕಾ ಮುನಿ ರೆಡ್ಡಿ ಅವರ ಕಿರಿಯ ಮಗಳಾಗಿದ್ದು, ತನ್ನ ಅಳಿಯನೇ ಮಗಳನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದರು.

ಮದುವೆಯ ನಂತರ ಮಹೇಂದ್ರ ಕೃತಿಕಾಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಮನೆಯ ಸಣ್ಣ ನಿರ್ಧಾರಗಳಿಗೂ ಸಹ ತನ್ನ ತಂದೆಯ ಒಪ್ಪಿಗೆಯನ್ನು ಪಡೆಯಬೇಕೆಂದು ಮತ್ತು ವೈಯಕ್ತಿಕ ಖರ್ಚುಗಳನ್ನು ಆಕೆಯೇ ಭರಿಸಬೇಕೆಂದು ಒತ್ತಾಯಿಸುತ್ತಿದ್ದ ಎಂದು ದೂರುದಾರರು ಆರೋಪಿಸಿದ್ದಾರೆ.

ಆಸ್ಪತ್ರೆ ಕಟ್ಟಿಸಿಕೊಡಿ ಎಂದು ಕೇಳಿದ್ದ ಅಳಿಯ ಮಹೇಂದ್ರ ರೆಡ್ಡಿ

ಇನ್ನು ಮದುವೆಯ ನಂತರ ಮಹೇಂದ್ರ ದೊಡ್ಡ ಆಸ್ಪತ್ರೆಯ ನಿರ್ಮಾಣಕ್ಕೆ ಹಣಕಾಸು ನೆರವು ಒದಗಿಸುವಂತೆ ಮುನಿರೆಡ್ಡಿ ಅವರನ್ನು ಕೇಳಿದ್ದರಂತೆ. ಆಸ್ಪತ್ರೆ ನಿರ್ಮಾಣಕ್ಕೆ ಬೇಕಾಗುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದು ದಂಪತಿಗಳ ವೈದ್ಯಕೀಯ ಅಭ್ಯಾಸಕ್ಕಾಗಿ ಮಾರತಹಳ್ಳಿಯಲ್ಲಿ 'Skin & Scalpel' ಎಂಬ ಕ್ಲಿನಿಕ್ ಅನ್ನು ಸ್ಥಾಪಿಸಿದ್ದಾಗಿ ಮುನಿ ರೆಡ್ಡಿ ಹೇಳಿದರು.

ಸತತ ಅರವಳಿಕೆ ಮದ್ದು ನೀಡಿದ್ದ ಅಳಿಯ

ಅಂತೆಯೇ 'ಏಪ್ರಿಲ್ 21, 2025 ರಂದು, ಮಹೇಂದ್ರ, ಕೃತಿಕಾಗೆ ತಮ್ಮ ನಿವಾಸದಲ್ಲಿ ಇಂಟ್ರಾವೆನಸ್ (IV) ಔಷಧಿಯನ್ನು ನೀಡಿ, ಅದು ಹೊಟ್ಟೆಯ ಅಸ್ವಸ್ಥತೆಗೆ ಎಂದು ಹೇಳಿದ್ದ. ಮರುದಿನ, ಆಕೆಗೆ ವಿಶ್ರಾಂತಿ ಬೇಕು ಎಂದು ಹೇಳಿ ಆಕೆಯ ನಮ್ಮ ಮನೆಯಲ್ಲಿ ಬಿಟ್ಟು, ನಂತರ ಆ ರಾತ್ರಿ ಮತ್ತೊಂದು IV ಡೋಸ್ ನೀಡಲು ಬಂದಿದ್ದ. ಏಪ್ರಿಲ್ 23 ರಂದು, ಕೃತಿಕಾ IV ಸೈಟ್‌ನಿಂದ ನೋವಿನ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಮಹೇಂದ್ರ ಆಕೆಗೆ ವಾಟ್ಸಾಪ್ ಮೂಲಕ ಅದನ್ನು ತೆಗೆಯದಂತೆ ಸೂಚಿಸಿದನು ಎಂದು ಮುನಿರೆಡ್ಡಿ ಹೇಳಿದ್ದಾರೆ.

ಅಲ್ಲದೆ 'ಆ ರಾತ್ರಿ ಮತ್ತೊಂದು ಡೋಸ್ ನೀಡುವುದಾಗಿ ಹೇಳಿದನು. ಅದೇ ದಿನ ರಾತ್ರಿ 9.30 ರ ಸುಮಾರಿಗೆ, ಔಷಧಿ ನೀಡಲು ಅವಳ ಕೋಣೆಗೆ ಹೋಗಿ ಮತ್ತೊಂದು ಡೋಸ್ ಔಷಧ ನೀಡಿದ್ದ. ಮರುದಿನ, ಏಪ್ರಿಲ್ 24 ರಂದು ಬೆಳಿಗ್ಗೆ, ಕೃತಿಕಾ ಸಂಪೂರ್ಣ ನಿತ್ರಾಣಳಾಗಿದ್ದಳು'.

'ಈ ವೇಳೆ ಕುಟುಂಬಸ್ಥರೆಲ್ಲರೂ ಭೀಯಭೀತರಾಗಿದ್ದೆವು. ಆಗ ಮಹೇಂದ್ರ ರೆಡ್ಡಿ ವೈದ್ಯನಾಗಿದ್ದರೂ ಆಕೆಗೆ ಸಿಪಿಆರ್ ಮಾಡಲಿಲ್ಲ. ಬಳಿಕ ಕೃತಿಕಾಳ ಪರಿಸ್ಥಿತಿ ನೋಡಿ ನಾವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿ ಅದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು' ಎಂದು ಮುನಿ ರೆಡ್ಡಿ ಆರೋಪಿಸಿದರು.

ಮರಣೋತ್ತರ ಪರೀಕ್ಷೆ ಬೇಡ ಎಂದಿದ್ದ ಮಹೇಂದ್ರ

ಇನ್ನು ಕೃತಿಕಾಳ ಮರಣದ ನಂತರ, ಮಹೇಂದ್ರ ಮತ್ತು ಅವರ ಕುಟುಂಬವು ಮರಣೋತ್ತರ ಪರೀಕ್ಷೆ ಬೇಡ ಎಂದು ಹೇಳಿತ್ತು. ಮರಣೋತ್ತರ ಪರೀಕ್ಷೆ ನಡೆಸದಂತೆ ಮಾವ ಮುನಿರೆಡ್ಡಿ ಅವರ ಮನವೊಲಿಸಿದ್ದರು. ಆದರೆ ಕೃತಿಕಾ ಅವರ ಅಕ್ಕ, ರೇಡಿಯಾಲಜಿಸ್ಟ್ ಡಾ. ನಿಕಿತಾ ರೆಡ್ಡಿ ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದರು. ವಿವರವಾದ ತನಿಖೆಗೆ ಒತ್ತಾಯಿಸಿದರು. ನಂತರ ಅವರು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ದೂರು ದಾಖಲಿಸಿದರು ಎನ್ನಲಾಗಿದೆ.

ಬಯಲಾಗಿದ್ದೇ ರೋಚಕ

ಕೃತಿಕಾ ಅವರ ಸಾವು ಸಹಜವಲ್ಲ.. ಅಸಹಜ ಎಂದು ತನಿಖೆಯಿಂದ ದೃಢಪಟ್ಟಿತ್ತು. FSL ವರದಿಯಿಂದ ಇದೊಂದು ಕೊಲೆ ಎಂಬುದು ದೃಢಪಡಿದೆ. ಎಫ್ ಎಸ್ ಎಲ್ ವರದಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

ಕೊಲೆಯಾದ 6 ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಪತ್ನಿ ಕೃತಿಕಾ ರೆಡ್ಡಿ ಕೂಡ ವೈದ್ಯೆಯಾಗಿದ್ದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮದುವೆಯಾದ 11 ತಿಂಗಳ ಬಳಿಕ ಪತಿ ಪತ್ನಿಯ ಹತ್ಯೆಗೆ ಸ್ಕೆಚ್ ಹಾಕಿದ್ದನು. ಅದರಂತೆ ಹುಷಾರಿಲ್ಲದೇ ಮನೆಯಲ್ಲಿ ಮಲಗಿದ್ದ ಕೃತಿಕಾಗೆ ಮಹೇಂದ್ರ ಒಂದು ಇಂಜೆಕ್ಷನ್ ನೀಡಿದ್ದರು. ಆ ಇಂಜೆಕ್ಷನ್ ನಿಂದ ಕೃತಿಕಾ ಮೃತಪಟ್ಟಿದ್ದರು. ಮೊದಲು ಕುಟುಂಬದವರಿಗೆ ಈ ಬಗ್ಗೆ ಗೊತ್ತಿರಲಿಲ್ಲ. ನನ್ನ ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂದು ಪೋಷಕರು ನಂಬಿದ್ದರು.

ಹುಷಾರಿಲ್ಲದೆ ತವರುಮನೆಯಲ್ಲಿ ವೈದ್ಯೆ ಡಾ.ಕೃತಿಕಾರೆಡ್ಡಿ ಮಲಗಿದ್ದ ವೇಳೆ ಅಲ್ಲಿಗೆ ಬಂದಿದ್ದ ಈತ ಆಕೆಗೆ ಐವಿ ಇಂಜೆಕ್ಷನ್ ಮೂಲಕ ಎರಡು ದಿನ ಒಂದಷ್ಟು ಔಷಧ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ನಂತರ ಪೊಲೀಸರು ತನಿಖೆ ನಡೆಸಿದಾಗ ಸಾವಿನ ರಹಸ್ಯ ಬಯಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ, 'ಮರಳುತ್ತಿದ್ದೇವೆ' ಎಂದ CEO

'ಆಪರೇಷನ್ ಸಿಂಧೂರ' ವೇಳೆ ಭಾರತ 'ಇನ್ನಷ್ಟು ಹಾನಿ ಮಾಡಬಹುದಿತ್ತು': ರಾಜನಾಥ್ ಸಿಂಗ್

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

ತೆಲಂಗಾಣದ ಪ್ರಮುಖ ರಸ್ತೆಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್, ಗೂಗಲ್ ಹೆಸರು: ಸರ್ಕಾರಿ ನಿರ್ಧಾರ!

Shocking: ಸಫಾರಿ ತರಬೇತುದಾರನ ಮೇಲೆ ಕರಡಿ ಭೀಕರ ದಾಳಿ, ಬೆಚ್ಚಿಬಿದ್ದ ಪ್ರವಾಸಿಗರು!

SCROLL FOR NEXT