ಕಾಡಸಿದ್ದೇಶ್ವರ ಶ್ರೀ 
ರಾಜ್ಯ

ವಿಜಯಪುರ ಬಳಿಕ ಇದೀಗ ಬಾಗಲಕೋಟೆ ಪ್ರವೇಶಕ್ಕೂ ಕಾಡಸಿದ್ದೇಶ್ವರ ಶ್ರೀಗಳಿಗೆ ನಿರ್ಬಂಧ!

ಮಹಾರಾಷ್ಟ್ರದಲ್ಲಿ ಬಸವ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಬಸವ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬಾಗಲಕೋಟೆಯ ಬೀಳಗಿ ತಾಲೂಕಿನಲ್ಲಿರೋ ಕನ್ನೇರಿ ಶ್ರೀಗಳಿಗೆ ಇದೀಗ ಜಿಲ್ಲಾಧಿಕಾರಿ ಸಂಗಪ್ಪ ನೋಟಿಸ್ ನೀಡಿದ್ದು ಬಾಗಲಕೋಟೆಗೆ ಪ್ರವೇಶ ಮಾಡದಂತೆ ಹಾಗೂ ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠಕ್ಕೆ ಬಾರದಂತೆ ನೋಟಿಸ್ ನೀಡಲಾಗಿದೆ.

ಜಿಲ್ಲಾಧಿಕಾರಿ ಹೊರಡಿಸಿದ ನೋಟಿಸ್​ ಅನ್ನು ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಮಠಕ್ಕೆ ಪೊಲೀಸರ ಜೊತೆ ತೆರಳಿದ ತಹಶೀಲ್ದಾರ ವಿನೋದ್ ಅವರು ಕನ್ಹೇರಿಯ ಕಾಡಸಿದ್ದೇಶ್ವರ ಶ್ರೀಗಳಿಗೆ ನೀಡಿದ್ದು ಮಠ ತೆರವು ಮಾಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಕಾನೂನು ಸವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಬಾಗಲಕೋಟೆ ತೊರೆದು ನಿಮ್ಮ ಮೂಲ ಜಾಗಕ್ಕೆ ತೆರಳಿ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಶ್ರೀಗಳಿಗೆ ನೋಟಿಸ್ ನೀಡಿದ್ದು ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ

ಶಿಕ್ಷಕರ ಕೊರತೆ ಎಂದು ದೂರಿದ್ದೇ ತಪ್ಪಾಯ್ತು ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತು!

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ