ಪೋಟಿ ಉನ್ನಿಕೃಷ್ಣನ್  
ರಾಜ್ಯ

Sabarimala gold theft: ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ SIT ತನಿಖೆ; ಗೋವರ್ಧನ್ ಒಡೆತನದ ಜ್ಯುವೆಲ್ಲರಿಯಿಂದ ಕದ್ದ ಚಿನ್ನ ವಶ!

ಉದ್ಯಮಿ ಗೋವರ್ಧನ್ ಅವರ ಒಡೆತನದ ರೊದ್ದಂ ಆಭರಣ ಅಂಗಡಿಯಿಂದ ವಿಶೇಷ ತನಿಖಾ ತಂಡ ಹಲವಾರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ. 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಗೋವರ್ಧನ್ ಒಪ್ಪಿಕೊಂಡಿದ್ದಾರೆ.

ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇರಳ ಪೊಲೀಸರ ವಿಶೇಷ ತನಿಖಾ ತಂಡ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಪರಿಶೀಲನೆ ನಡೆಸಿದೆ.

ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಂಗಳೂರಿನ ಶ್ರೀರಾಂಪುರ ವ್ಯಾಪ್ತಿಯಲ್ಲಿರುವ ಆರೋಪಿ ಅರ್ಚಕ ಪೋಟಿ ಉನ್ನಿಕೃಷ್ಣನ್ ನಿವಾಸ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರ್ಸ್ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲಿಸಿದ್ದಾರೆ.

ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಗಳಿಂದ 475 ಗ್ರಾಂ ಚಿನ್ನದ ಪ್ಲೇಟ್ ಕದ್ದ ಆರೋಪದಡಿ ಪೋಟಿ ಉನ್ನಿಕೃಷ್ಣನ್ ಅವರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದರು. ಕದ್ದ ಚಿನ್ನವನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಅವರಿಗೆ ಮಾರಾಟ ಮಾಡಿದ ಆರೋಪದಡಿ ದಾಳಿ ಮುಂದುವರೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.

ಉದ್ಯಮಿ ಗೋವರ್ಧನ್ ಅವರ ಒಡೆತನದ ರೊದ್ದಂ ಆಭರಣ ಅಂಗಡಿಯಿಂದ ವಿಶೇಷ ತನಿಖಾ ತಂಡ ಹಲವಾರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ. 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಗೋವರ್ಧನ್ ಒಪ್ಪಿಕೊಂಡಿದ್ದಾರೆ.

ಶಬರಿಮಲೆಯಲ್ಲಿ ಕಳ್ಳತನ ಆದ ಚಿನ್ನ ಎನ್ನುವುದು ಗೊತ್ತಿರದ ಕಾರಣ ನಾನು ಚಿನ್ನ ಖರೀದಿ ಮಾಡಿದ್ದೆ. ಕದ್ದಿದ್ದ ಚಿನ್ನ ಎಂದು ಗೊತ್ತಿದ್ದರೆ ಖರೀದಿ ಮಾಡುತ್ತಿರಲಿಲ್ಲ ಎಂದು ಗೋವರ್ಧನ್ ಕೇರಳ ಎಸ್ಐಟಿ ಮುಂದೆ ಹೇಳಿಕೊಂಡಿದ್ದಾನೆ. ಇದನ್ನು ಕೇಳಿದ ಅಧಿಕಾರಿಗಳು ಮುಂದೇನಾದರೂ ಅಗತ್ಯವಿದ್ದರೆ ತನಿಖೆಗೆ ಕರೆದಾಗ ಬರಬೇಕಾಗುತ್ತದೆ ಎಂದು ಹೇಳಿ ಹೊರಟಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2nd PUC result ಪ್ರಕಟ: ಈ ಬಾರಿ ದಾಖಲೆಯ ಫಲಿತಾಂಶ, ಶೇ. 12 ರಷ್ಟು ಹೆಚ್ಚಳ; ದಿಶಾ ರಾಜ್ಯಕ್ಕೆ ಫಸ್ಟ್

Video: ಕದನ ವಿರಾಮಕ್ಕೆ ಮಧ್ಯಸ್ಥಿಕೆ; ಪಾಕಿಸ್ತಾನ ನಂಬಿಕೆಗೆ ಅರ್ಹವಲ್ಲ- ಅಮೆರಿಕ ಒಪ್ಪಿಕೊಂಡಿದ್ದೇ ಆಶ್ಚರ್ಯ ಎಂದ ಇಸ್ರೇಲ್

IPL 2026: ಅರ್ಧಶತಕ ಗಳಿಸುತ್ತಿದ್ದಂತೆ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಕನ್ನಡಿಗ ಕೆಎಲ್ ರಾಹುಲ್! Video

ಬಾರಾಮತಿ ಉಪ ಚುನಾವಣೆ: ಸುನೇತ್ರಾ ಪವಾರ್‌ ಅವಿರೋಧ ಆಯ್ಕೆ ನಿಶ್ಚಿತ; ಕಣದಿಂದ ಹಿಂದೆ ಸರಿದ ಕಾಂಗ್ರೆಸ್

ಹಿಂದೂಗಳು ಕನಿಷ್ಟ 2 ರಿಂದ 3 ಮಕ್ಕಳ ಹೊಂದಬೇಕು: ಪಾಕ್ ಮೂಲದ Seema Haider ಹೇಳಿಕೆ, video

SCROLL FOR NEXT