ಸಾಂದರ್ಭಿಕ ಚಿತ್ರ 
ರಾಜ್ಯ

ಜಾತಿ ಜನಗಣತಿಗಾಗಿ ಒಕ್ಕಲಿಗ ಸಮುದಾಯದಿಂದ ಸ್ವಯಂಸೇವಕರ ನಿಯೋಜನೆ!

ಒಕ್ಕಲಿಗ ಮಠಾಧೀಶರ ಆಶ್ರಯದಲ್ಲಿ ಈ ಯೋಜನೆ ಸಂಘಟಿಸಲಾಗುತ್ತಿದೆ. ಕೆಲವು ಸಣ್ಣ ಉಪಜಾತಿಗಳು ಹೆಚ್ಚು ಶಿಕ್ಷಣ ಪಡೆದಿಲ್ಲ, ಹೀಗಾಗಿ ನ್ಯಾಯಸಮ್ಮತತೆ ಹಾಗೂ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸ್ವಯಂಸೇವಕರ ಅಗತ್ಯವಿದೆ.

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಾದ್ಯಂತ ಜಾತಿ ಜನಗಣತಿ ನಡೆಯುತ್ತಿದ್ದು, ತಮ್ಮ ಸಮುದಾಯದ ಜನರ ಸಂಖ್ಯೆಯನ್ನು ನಿಖರವಾಗಿ ಎಣಿಸಲು ಒಕ್ಕಲಿಗರು ಸಾವಿರಾರು ಸ್ವಯಂಸೇವಕರನ್ನು ಸಜ್ಜುಗೊಳಿಸುತ್ತಿದೆ ಮತ್ತು ನಿಯೋಜಿಸುತ್ತಿದೆ.

ನಮ್ಮ ಸಮುದಾಯದ ಜನರ ಎಣಿಕೆ ಸಂಖ್ಯೆಗಳು ತಪ್ಪಾಗಿವೆ... ನಾವು 62 ಲಕ್ಷ ಅಲ್ಲ. ನಾವು ಕನಿಷ್ಠ 75 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಎಂದು ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಂ. ನಾಗರಾಜ್ ಸಭೆಯಲ್ಲಿ ಹೇಳಿದರು.

ಕಾಂತರಾಜ್ ಆಯೋಗದ ಹಿಂದಿನ ಅಂದಾಜಿನಲ್ಲಿನ ದೋಷಗಳನ್ನು ಉಲ್ಲೇಖಿಸಿ, ಪ್ರತಿ ಒಕ್ಕಲಿಗರ ಮನೆಯನ್ನು ಎಣಿಸುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಮಟ್ಟದ ಸ್ವಯಂಸೇವಕರ ತಂಡವನ್ನು ನಿಯೋಜಿಸಲಾಗುವುದು ಸಮಿತಿ ಸಂಚಾಲಕ ಆಡಿಟರ್ ನಾಗರಾಜ್ ತಿಳಿಸಿದ್ದಾರೆ.

ನಾವು ಒಂದು ಆಂದೋಲನವನ್ನು ಪ್ರಾರಂಭಿಸುತ್ತಿದ್ದೇವೆ. ಪ್ರತಿ ಹಳ್ಳಿಯಲ್ಲಿ ಇಬ್ಬರು ತರಬೇತಿ ಪಡೆದ ಸ್ವಯಂಸೇವಕರು ಪ್ರತಿ ಕುಟುಂಬವನ್ನು ಭೇಟಿ ಮಾಡುತ್ತಾರೆ. ಎಲ್ಲಾ 69 ಜನಗಣತಿ ಮುಖ್ಯಸ್ಥರಿಗೆ ಸ್ವಯಂ ಸೇವಕರು ಮಾಹಿತಿ ಭರ್ತಿ ಮಾಡಲು ಸಹಾಯ ಮಾಡುತ್ತಾರೆ. ಈ ಬಾರಿ, ಸರ್ಕಾರ ನಮ್ಮನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಒಕ್ಕಲಿಗ ಮಠಾಧೀಶರ ಆಶ್ರಯದಲ್ಲಿ ಈ ಯೋಜನೆ ಸಂಘಟಿಸಲಾಗುತ್ತಿದೆ. ಕೆಲವು ಸಣ್ಣ ಉಪಜಾತಿಗಳು ಹೆಚ್ಚು ಶಿಕ್ಷಣ ಪಡೆದಿಲ್ಲ, ಹೀಗಾಗಿ ನ್ಯಾಯಸಮ್ಮತತೆ ಹಾಗೂ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸ್ವಯಂಸೇವಕರ ಅಗತ್ಯವಿದೆ ಎಂದು ಸಮುದಾಯದ ನಾಯಕರು ವಿವರಿಸುತ್ತಾರೆ.

ಕರ್ನಾಟಕ ಒಕ್ಕಲಿಗ ಕ್ರಿಯಾ ಸಮಿತಿಯಂತಹ ಕೆಲವು ಸಣ್ಣ ಗುಂಪುಗಳು, ಒಕ್ಕಲಿಗ ಕಲ್ಯಾಣ ವೇದಿಕೆಯ ಸಹಭಾಗಿತ್ವದಲ್ಲಿ ಜನಗಣತಿಯ ಕುರಿತು ಜಾಗೃತಿ ಮೂಡಿಸುತ್ತಿವೆ. ಒಕ್ಕಲಿಗ ಕ್ರಿಯಾ ಸಮಿತಿಯು ಹೆಬ್ಬಾಳದ ಕೆಂಪತಹಳ್ಳಿಯಲ್ಲಿ ನಡೆದ ಸಮುದಾಯ ಪ್ರಮುಖ ಸಭೆಯೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು.

ಒಕ್ಕಲಿಗರ ಸಂಘ ಮಾತ್ರ 25 ಲಕ್ಷಕ್ಕೂ ಹೆಚ್ಚು ಸದಸ್ಯರ ವಿಳಾಸ ಡೇಟಾವನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತದೆ. ಕರ್ನಾಟಕದ ಬಹುಪಾಲು ಒಕ್ಕಲಿಗರು ವಾಸಿಸುವ ಚಿತ್ರದುರ್ಗದ ದಕ್ಷಿಣದಲ್ಲಿರುವ ಎಲ್ಲಾ 16 ಜಿಲ್ಲೆಗಳನ್ನು ಒಳಗೊಳ್ಳಲು ಇದನ್ನು ಬಳಸಿಕೊಳ್ಳಬೇಕು ಎಂದು ಎಂ ನಾಗರಾಜ್ ತಿಳಿಸಿದ್ದಾರೆ.

ಒಕ್ಕಲಿಗ ಕ್ರಿಯಾ ಸಮಿತಿಯ ಅಧ್ಯಕ್ಷ ಕೆಜಿ ಕುಮಾರ್, ಸದಸ್ಯರು ತಮ್ಮ ಉಪ-ಜಾತಿಯನ್ನು ಲೆಕ್ಕಿಸದೆ ತಮ್ಮನ್ನು ಒಕ್ಕಲಿಗ ಎಂದು ಮಾತ್ರ ಗುರುತಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. 84 ಮಾನ್ಯತೆ ಪಡೆದ ಉಪ-ಗುಂಪುಗಳಿವೆ, ಹೀಗಾಗಿ ನಾವು ಒಂದೇ ಧ್ವನಿಯಲ್ಲಿ ಮಾತನಾಡಬೇಕು. ನಮ್ಮ ಶಕ್ತಿ ನಮ್ಮ ಏಕತೆಯಲ್ಲಿದೆ ಎಂದು ಅವರು ಹೇಳಿದರು.

ಒಕ್ಕಲಿಗರ ಒಗ್ಗಟ್ಟಿನ ಎಣಿಕೆಯಿಂದಾಗಿ ಪ್ರಾತಿನಿಧ್ಯ ಮತ್ತು ಸಂಪನ್ಮೂಲ ಹಂಚಿಕೆ ಎರಡರಲ್ಲೂ ಸಮತೋಲನವನ್ನು ಗಮನಾರ್ಹವಾಗಿ ಬದಲಾಯಿಸಬಹುದು. ಕಳೆದ ಕೆಲವು ವರ್ಷಗಳಿಂದ, ಒಕ್ಕಲಿಗರು ಮತ್ತು ಇತರ ಪ್ರಬಲ ಸಮುದಾಯವಾದ ಲಿಂಗಾಯತರು ಜನಗಣತಿ ಮತ್ತು ಮೀಸಲಾತಿ ಕುರಿತು ಸಮನ್ವಯ ಸಭೆಗಳನ್ನು ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕಾ ಮೇಲೆ ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕ: ಸುಂಕಾಸ್ತ್ರ ಕ್ರಮಕ್ಕೆ ಟ್ರಂಪ್ ಸಮರ್ಥನೆ

ನಿಮ್ಮ-ಭಾರತ ಸಂಬಂಧಕ್ಕೆ ನಮ್ಮ ತಕರಾರಿಲ್ಲ ಆದರೆ, ನಮ್ಮ ಬಾಂಧವ್ಯ ಗಟ್ಟಿಗೊಳಿಸೋಣ: ರಷ್ಯಾಗೆ ಪಾಕ್ ಮನವಿ

ಎರಡು ಗಂಟೆ ಮಳೆ - 20 ಕಿ.ಮೀ. ಟ್ರಾಫಿಕ್ ಜಾಮ್: ಮಿಲೇನಿಯಮ್ ಸಿಟಿ ನಗರಾಭಿವೃದ್ಧಿ ಟ್ರಿಪಲ್ ಎಂಜಿನ್ ಮಾದರಿ: BJP ಕಾಲೆಳೆದ ಕಾಂಗ್ರೆಸ್!

'ಸ್ವಾತಂತ್ರ್ಯ ಹೋರಾಟದಲ್ಲಿ ಯಾರ ಮನೆ ನಾಯಿ ಭಾಗವಹಿಸಿತ್ತೆಂದು ಬಹಿರಂಗ ಪಡಿಸಲಿ: ರಾಜ್ಯ ಸರ್ಕಾರದಲ್ಲಿ ಬಚ್ಚಲುಬಾಯಿ ಮಂತ್ರಿಗಳು!'

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ "ಐತಿಹಾಸಿಕ ನಿರ್ಧಾರ"; ಐದು ಪಾಲಿಕೆಗೆ ಆಯುಕ್ತರ ನೇಮಕ

SCROLL FOR NEXT