ಗ್ರೇಟರ್ ಬೆಂಗಳೂರು ಪ್ರಾಧಿಕಾರ  
ರಾಜ್ಯ

ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ 500 ಕಾರ್ಪೊರೇಟರ್‌ಗಳು; ಶೇ 50 ರಷ್ಟು ವಾರ್ಡ್‌ಗಳು ಮಹಿಳೆಯರಿಗೆ ಮೀಸಲು

ನಿನ್ನೆ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪ್ರತಿ ನಿಗಮದ ಅಡಿಯಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಪ್ರತಿ ವಾರ್ಡ್‌ನಲ್ಲಿನ ಸರಾಸರಿ ಜನಸಂಖ್ಯೆಯನ್ನು ಪರಿಗಣಿಸಿದ ನಂತರ ರಚಿಸಲಾಗುತ್ತದೆ.

ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ತೆರೆ ಎಳೆದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ದಾರಿಮಾಡಿಕೊಟ್ಟಿದೆ. ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಈ ದಿನವನ್ನು "ಐತಿಹಾಸಿಕ" ಎಂದು ಬಣ್ಣಿಸಿದರು.

ಮೊನ್ನೆ ಸೋಮವಾರ, ಸರ್ಕಾರ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ಹೊಸ ಘಟಕದ ಅಡಿಯಲ್ಲಿ ಐದು ಸಿಟಿ ಕಾರ್ಪೊರೇಷನ್ ಗಳ ಚುನಾವಣೆಗೆ ನಿಯಮಗಳನ್ನು ರೂಪಿಸಿತ್ತು. ಪ್ರತಿ ನಿಗಮವು 150 ವಾರ್ಡ್‌ಗಳವರೆಗೆ ಒಳಗೊಂಡಿರುತ್ತದೆ. ಇಡೀ ನಗರಕ್ಕೆ 500 ಕಾರ್ಪೊರೇಟರ್‌ಗಳು ಇರಬಹುದು ಎಂದು ಡಿಸಿಎಂ ಹೇಳಿದರು. ವಾರ್ಡ್‌ಗಳಲ್ಲಿ ಶೇ. 50 ರಷ್ಟು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದರು.

ನಿನ್ನೆ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪ್ರತಿ ನಿಗಮದ ಅಡಿಯಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಪ್ರತಿ ವಾರ್ಡ್‌ನಲ್ಲಿನ ಸರಾಸರಿ ಜನಸಂಖ್ಯೆಯನ್ನು ಪರಿಗಣಿಸಿದ ನಂತರ ರಚಿಸಲಾಗುತ್ತದೆ. ಒಂದು ವಾರ್ಡ್‌ನ ಜನಸಂಖ್ಯೆಯು ಸುಮಾರು 20,000ಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಶೇಕಡಾ 25ರಷ್ಟು ಇರಬೇಕು.

ವಾರ್ಡ್‌ಗಳ ಸಂಖ್ಯೆಯನ್ನು ನಿರ್ಧರಿಸುವಾಗ 150 ಕ್ಕಿಂತ ಹೆಚ್ಚು ವಾರ್ಡ್‌ಗಳು ಇರಬಾರದು ಎಂಬ ಷರತ್ತನ್ನು ಪರಿಗಣಿಸಬೇಕು. 2023 ರ ಚುನಾವಣೆಯ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ನಗರದ ಜನಸಂಖ್ಯೆಯು ಸುಮಾರು 1.44 ಕೋಟಿ ಎಂದು ಅಂದಾಜಿಸಲಾಗಿದೆ.

ನವೆಂಬರ್ ಅಂತ್ಯದ ವೇಳೆಗೆ, ವಾರ್ಡ್ ವಿಂಗಡಣೆ ಮತ್ತು ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿ ಎರಡೂ ಪೂರ್ಣಗೊಳ್ಳಲಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲಾಗಿದೆ. ಸರ್ಕಾರವು ಅಧಿಸೂಚನೆ ಮೂಲಕ ವಾರ್ಡ್ ವಿಂಗಡಣೆ ಆಯೋಗವನ್ನು ಸ್ಥಾಪಿಸಿತು, ಜಿಬಿಎ ಮುಖ್ಯ ಆಯುಕ್ತರು ಅದರ ಅಧ್ಯಕ್ಷರಾಗಿ, ಐವರು ಆಯುಕ್ತರಲ್ಲಿ ಹಿರಿಯ ಆಯುಕ್ತರು ಸದಸ್ಯರಾಗಿ ಮತ್ತು ಜಿಬಿಎಯ ವಿಶೇಷ ಆಯುಕ್ತರು (ಆಡಳಿತ, ಕಂದಾಯ ಮತ್ತು ಐಟಿ) ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಜಿಬಿಎ ಮತ್ತು ಹೊಸ ನಿಗಮಗಳು ಜಾರಿಗೆ ಬಂದಿವೆ. ಸರ್ಕಾರವು ಸಂವಿಧಾನದ 74 ನೇ ತಿದ್ದುಪಡಿಯನ್ನು ಬದಲಾಯಿಸಿಲ್ಲ ಎಂದು ಹೇಳಿದರು.

ಪ್ರಗತಿ ಪರಿಶೀಲನೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ

74 ನೇ ತಿದ್ದುಪಡಿಯು ಸ್ಥಳೀಯ ಆಡಳಿತಗಳಿಗೆ ತನ್ನ ಹಣಕಾಸು ನಿರ್ವಹಿಸಲು ಅಧಿಕಾರ ನೀಡುತ್ತದೆ. ಒಂದು ನಿಗಮದಿಂದ ಇನ್ನೊಂದು ನಿಗಮಕ್ಕೆ ಆದಾಯದ ವರ್ಗಾವಣೆಯ ಸಾಧ್ಯತೆಯ ಕುರಿತಾದ ಪ್ರಶ್ನೆಗೆ, ಇದು ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಆಗುವುದಿಲ್ಲ. ನಿಗಮಕ್ಕೆ ಹಣದ ಅಗತ್ಯವಿದ್ದರೆ, ಸರ್ಕಾರವು ಹಣವನ್ನು ಹಂಚಿಕೆ ಮಾಡುತ್ತದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು. ಜಿಬಿಎ ಪ್ರಗತಿ ಪರಿಶೀಲನೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಬೇಕಾಗುತ್ತದೆ ಎಂದರು.

ಹೊಸ ನಿಗಮಗಳು ಹಿಂದಿನ ಬಿಬಿಎಂಪಿ ಅಡಿಯಲ್ಲಿ ಬರುವ ಆಯಾ ವಲಯ ಕಚೇರಿಗಳಿಂದ ಕಾರ್ಯನಿರ್ವಹಿಸುತ್ತವೆಯಾದರೂ, ನವೆಂಬರ್ 1 ರಂದು ನಿಗಮ ಕಚೇರಿಗಳಿಗೆ ಗುರುತಿಸಲಾದ ಸ್ಥಳಗಳಲ್ಲಿ ಭೂಮಿ ಪೂಜೆ ನಡೆಯಲಿದೆ.

2ರಿಂದ 5 ಎಕರೆ ಲಭ್ಯವಿರುವ ಭೂಮಿಯಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ನಿರ್ಮಾಣ ಕಾರ್ಯವನ್ನು ನಿರ್ವಹಿಸುವ ಏಜೆನ್ಸಿಗಳು ರಚನೆಯನ್ನು ಹಾಕುವಾಗ ಪರಂಪರೆ ಮತ್ತು ವೆಚ್ಚವನ್ನು ಪರಿಗಣಿಸಲು ಸೂಚಿಸಲಾಗುತ್ತದೆ ಎಂದರು.

ಚುನಾವಣೆಗಳಿಗೆ ನಿಯಮಗಳನ್ನು ರೂಪಿಸುವುದು, ನಗರ ವಾರ್ಡ್‌ಗಳಲ್ಲಿ ಚುನಾವಣೆಗೆ ಸ್ಪರ್ಧಿಸುವವರಿಗೆ 5 ಲಕ್ಷ ರೂಪಾಯಿ ವೆಚ್ಚದ ಮಿತಿಯನ್ನು ನಿಗದಿಪಡಿಸುವುದು ಮತ್ತು ಚುನಾವಣೆಯ ಸಮಯದಲ್ಲಿ ನಕಲಿ ಮತದಾರರ ಬಗ್ಗೆ ದೂರುಗಳಿದ್ದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಇತ್ಯಾದಿಗಳನ್ನು ಅಧಿಸೂಚನೆಯಲ್ಲಿ ಒಳಗೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಮಫಲಕವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಬದಲಾಯಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಂಗಳವಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

SCROLL FOR NEXT