ಬೆಂಗಳೂರು: ಕೆನಡಾದ ಕ್ಯಾಲೆಬ್ ಫ್ರೀಸನ್ ಎಂಬ ಯುವಕ ಬೆಂಗಳೂರಿನ ಸ್ವಚ್ಛತೆ ಬಗ್ಗೆ ಟೀಕೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚೆತ್ತುಕೊಂಡಿದ್ದು, ಮೆಜೆಸ್ಟಿಕ್ ಪ್ರದೇಶದ ಫುಟ್‌ಪಾತ್‌ಗಳನ್ನು ಸ್ವಚ್ಛಗೊಳಿಸಿದ್ದಾರೆ.
ಗುರುವಾರ, ಕ್ಯಾಲೆಬ್ ಫ್ರೀಸನ್, ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸ್ಟಾರ್‌ಬಕ್ಸ್‌ಗೆ 2.4 ಕಿಮೀ ನಡೆದುಕೊಂಡು ಹೋಗುವ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಈ ವಿಡಿಯೋದಲ್ಲಿ ತೆರೆದ ಒಳಚರಂಡಿಗಳು, ಕಟ್ಟಿದ ತಂತಿ ಮತ್ತು ಕೊಚ್ಚೆಯಿಂದ ಜನರು ಸುರಕ್ಷಿತವಾಗಿ ನಡೆದು ಹೋಗಲು ಕಷ್ಟವಾಗಿತ್ತು. GBA ಈ ವಿಡಿಯೋಗೆ ಪ್ರತಿಕ್ರಿಯಿಸಿ, ಮೆಜೆಸ್ಟಿಕ್ ಸುತ್ತಲಿನ ಫುಟ್‌ಪಾತ್‌ಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಿತು.
ಒಂದು ದಿನದೊಳಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈ ಪ್ರದೇಶವನ್ನು ಸ್ವಚ್ಛಗೊಳಿಸಲು ಮತ್ತು ದುರಸ್ತಿ ಮಾಡಲು ಕ್ರಮ ಕೈಗೊಂಡಿತು. ಶನಿವಾರದ ವೇಳೆಗೆ, ಬೆಂಗಳೂರು ಕೇಂದ್ರ ನಗರ ಆಯುಕ್ತ ರಾಜೇಂದ್ರ ಚೋಳನ್ ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂಸೇವಕರೊಂದಿಗೆ ಸೇರಿಕೊಂಡರು. ನಂತರ ಸಾಂಕೇತಿಕವಾಗಿ ನವೀಕರಿಸಿದ ಪಾದಚಾರಿ ಮಾರ್ಗದಲ್ಲಿ ಕುಳಿತು ಊಟ ಮಾಡುತ್ತಿರುವುದು ಕಂಡುಬಂದಿತು.
ಈ ಘಟನೆ ವರದಿಯಾದ ನಂತರ ಅನೇಕರು ಸಾಮಾಜಿಕ ಮಾಧ್ಯಮಗಳ ಮೂಲಕ ನಗರದ ಇತರ ಭಾಗಗಳಲ್ಲಿ ಕ್ಯಾಲೆಬ್ ತನ್ನ ನಡಿಗೆಯನ್ನು ಮುಂದುವರಿಸಲು ವಿನಂತಿಸಿದರು, ವರ್ಷಗಳ ಕಾಲ ನಾಗರಿಕರು ದೂರುಗಳನ್ನು ಸಲ್ಲಿಸಿದರು ಕ್ರಮಕೈಗೊಳ್ಳುವಲ್ಲಿ ಸಂಬಂಧಪಟ್ಟವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರ.
ಬನ್ನೇರುಘಟ್ಟ ರಸ್ತೆಯಲ್ಲಿ ನಡೆಯಲು ನಾನು ನಿಮಗೆ ಹಣ ನೀಡಬಹುದೇ? ಎಂದು ಸೂರಜ್ ಕ್ಲಾರ್ಕ್ ಪ್ರಸಾದ್ ಎಂಬುವರು ಪ್ರಶ್ನಿಸಿದ್ದಾರೆ. 1942 ರ ಅಂಗ್ರೆಜೊ ಭಾರತ್ ಛೋಡೋದಿಂದ 2025 ರವರೆಗೆ ಬಿಳಿಯರನ್ನು ನಡೆಯುವಂತೆ ಮಾಡಿದರು. ನಾಗರಿಕ ಪ್ರಜ್ಞೆ ಇಲ್ಲದಿದ್ದರೆ ನಾವು ಪ್ರಗತಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ.
“ಬೆಂಗಳೂರು ಅಧಿಕಾರಿಗಳು ಕೆಲಸ ಮಾಡಲು ನೀವೇ ಕಾರಣ, ದಯವಿಟ್ಟು ಕುಂದಲಹಳ್ಳಿ ಗೇಟ್‌ನಿಂದ ಪಾಣತ್ತೂರು ಮೂಲಕ ORR ಗೆ ದ್ವಿಚಕ್ರ ವಾಹನದಲ್ಲಿ ಹೋಗಿ. ನಗರದ ಉಳಿದ ಭಾಗವು 2025 ರಲ್ಲಿ ವಾಸಿಸುತ್ತಿರಬಹುದು ಆದರೆ ಈ ರಸ್ತೆ ಮಧ್ಯಕಾಲೀನದಲ್ಲಿದೆ ಎಂದು ಪಿಯೂಷ್ ಪ್ರಭಾಕರ್ ಎಂಬುವರು ಬರೆದಿದ್ದಾರೆ.
ಇನ್ನೂ ಕೆಲವರು ಸರ್ಜಾಪುರ ರಸ್ತೆ, ಹೊರ ವರ್ತುಲ ರಸ್ತೆ ಮತ್ತು ಗೇರ್ ಸ್ಕೂಲ್ ರಸ್ತೆಯಲ್ಲಿ ಸಂಚರಿಸಿ ವಿಡಿಯೋ ಮಾಡುವಂತೆ ಸೂಚಿಸಿದರು, ಇಲ್ಲಿ ಮೂಲಭೂತ ಪಾದಚಾರಿ ಮಾರ್ಗಗಳು ಸಹ ಇಲ್ಲ, ಹೀಗಾಗಿ ಕ್ಯಾಲೆಬ್ ಅಲ್ಲಿ ಸಂಚರಿಸಿ ಸಮಸ್ಯೆ ಗುರುತಿಸಬೇಕೆಂದು ಒತ್ತಾಯಿಸಿದರು. ಅನೇಕ ಬೆಂಗಳೂರಿಗರಿಗೆ ಈ ಘಟನೆಯು ನೋವುಂಟು ಮಾಡಿದೆ. ಸ್ಥಳೀಯರು ದೂರು ನೀಡಿದರೇ ಅಧಿಕಾರಿಗಳು ಮಾತು ಕೇಳುವುದಿಲ್ಲ, ವಿದೇಶಿಯರ ನಡಿಗೆ ವೈರಲ್ ಆದರ ನಂತರ ಅಧಿಕಾರಿಗಳು ರಾತ್ರೋರಾತ್ರಿ ಕಾರ್ಯನಿರ್ವಹಿಸುವಂತೆ ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದೆ.