ಪ್ರತಿಭಟನಾ ಸ್ಥಳದಲ್ಲಿರುವ ಸಚಿವ ಶಿವಾನಂದ ಪಾಟೀಲ್. 
ರಾಜ್ಯ

ವಿಜಯಪುರದಲ್ಲಿ PPP ಮಾದರಿ ವೈದ್ಯಕೀಯ ಕಾಲೇಜು: ಪ್ರತಿಭಟನಾಕಾರರಿಗೆ ಸಚಿವ ಶಿವಾನಂದ್ ಪಾಟೀಲ್ ಸಾಥ್; ಹೆಚ್ಚಿದ ಬಲ

ರಾಜ್ಯದಲ್ಲಿಯೇ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಇಲ್ಲ. ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಅಂತಹ ಮಾದರಿಯ ವೈದ್ಯಕೀಯ ಕಾಲೇಜನ್ನೇಕೆ ತರಬೇಕು? ಇದು ಬಡವರನ್ನು ಶೋಷಿಸಲಿದ್ದು, ಬಡವರಿಗೆ ಪ್ರಯೋಜನವಾಗುವುದಿಲ್ಲ.

ವಿಜಯಪುರ: ಪಿಪಿಪಿ ಮಾದರಿಯಲ್ಲಿ ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಸರ್ಕಾರದ ಪ್ರಸ್ತಾವನೆಯನ್ನು ಹಲವಾರು ಸಂಘಟನೆಗಳು ತೀವ್ರವಾಗಿ ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಪ್ರತಿಭಟನಾಕಾರರಿಗೆ ಸಚಿವ ಶಿವಾನಂದ ಪಾಟೀಲ್ ಅವರು ಮಂಗಳವಾರ ಬೆಂಬಲ ನೀಡಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾದ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಸೋಮವಾರ ಪಾಟೀಲ್ ಭೇಟಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಈ ವಿಷಯದ ಕುರಿತು ಚರ್ಚಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಪಿಪಿಪಿ ಮಾದರಿಯಲ್ಲಿ ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರವನ್ನು ನಾವು ಬಲವಾಗಿ ವಿರೋಧಿಸಿದ್ದೇವೆಂದು ಹೇಳಿದರು.

ಅಂತಹ ವ್ಯವಸ್ಥೆಯು ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುವ ಬದಲು ಹೊರೆಯಾಗಿ ಪರಿಣಮಿಸಲಿದೆ. ರಾಜ್ಯದಲ್ಲಿಯೇ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಇಲ್ಲ. ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಅಂತಹ ಮಾದರಿಯ ವೈದ್ಯಕೀಯ ಕಾಲೇಜನ್ನೇಕೆ ತರಬೇಕು? ಇದು ಬಡವರನ್ನು ಶೋಷಿಸಲಿದ್ದು, ಬಡವರಿಗೆ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ತಮ್ಮ ಅವಧಿಯನ್ನು ಸ್ಮರಿಸಿದ ಪಾಟೀಲ್ ಅವರು, ನಮ್ಮ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಹೇಳಿದರು.

ಟ್ರಾಮಾ ಸೆಂಟರ್, ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ, 150 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ, ಆಯುಷ್ ಆಸ್ಪತ್ರೆ, ನರ್ಸಿಂಗ್ ಕಾಲೇಜುಗಳು, ಪ್ರಾದೇಶಿಕ ಆಯುಕ್ತರ ಕಚೇರಿ ಮತ್ತು 150 ಎಕರೆ ಭೂಮಿ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದನ್ನು ನಾನು ಖಚಿತಪಡಿಸಿದ್ದೇನೆ. ಈಗ, ಕೇವಲ 100 ಕೋಟಿ ರೂ. ಅನುದಾನದ ಅಗತ್ಯವಿದೆ. ಅದನ್ನು ಕೂಡ ಎರಡು ಹಂತಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸರಗೂರು: ಮಾನವ, ದನಗಳ ಕೊಂದಿದ್ದ ಹುಲಿ ಕೊನೆಗೂ ಸೆರೆ, ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?

'ಯುದ್ಧ ಭುಗಿಲೆದ್ದರೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ': ಆಫ್ಘಾನಿಸ್ತಾನ, ಪಾಕಿಸ್ತಾನ ಜೊತೆ ಶಾಂತಿ ಮಾತುಕತೆ ಮತ್ತೆ ವಿಫಲ

'vote chori': ರಾಜ್ಯದ 1.12 ಕೋಟಿ ಜನರಿಂದ 'ಕೈ' ಸಹಿ ಸಂಗ್ರಹ, ನ.10ಕ್ಕೆ ಹೈಕಮಾಂಡ್'ಗೆ ಸಲ್ಲಿಕೆ

ಜಾರ್ಜಿಯಾದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ನ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗಳ ಬಂಧನ, ಗಡೀಪಾರಿಗೆ ಸಿದ್ಧತೆ

ವಿಶ್ವಕಪ್ ಗೆಲುವು ಬೆನ್ನಲ್ಲೇ ಭಾರತ ತಂಡದ ಆಟಗಾರ್ತಿಯರ 'ಬ್ರಾಂಡ್ ವಾಲ್ಯೂ' ಭಾರಿ ಏರಿಕೆ! ಯಾರಿಗೆ ಎಷ್ಟು ಗೊತ್ತಾ?

SCROLL FOR NEXT