ಎಸ್ ಎಲ್ ಭೈರಪ್ಪ  
ರಾಜ್ಯ

SL Bhyrappa: ಕಾದಂಬರಿ ಬರೆಯುವ ಮುನ್ನ ತಯಾರಿ ಹೇಗಿತ್ತು?: ಭೈರಪ್ಪನವರ ಸಂಶೋಧನೆ, ಅಧ್ಯಯನ, ಸ್ಥಳಗಳಿಗೆ ಭೇಟಿ...

ತಮ್ಮ ಭೇಟಿಗಳ ಸಮಯದಲ್ಲಿ, ಭೈರಪ್ಪ ಸ್ಥಳೀಯರೊಂದಿಗೆ ಮಾತನಾಡುತ್ತಿದ್ದರು, ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದರು.

ಬೆಂಗಳೂರು: ಲೇಖಕ, ಬರಹಗಾರ, ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು ವ್ಯಾಪಕ ಸಂಶೋಧಕರಾಗಿದ್ದರು ಮತ್ತು ಸಮಗ್ರ ಅಧ್ಯಯನಕಾರರಾಗಿದ್ದರು, ಅವರು ತಮ್ಮ ಕಾದಂಬರಿಗಳನ್ನು ಬರೆಯುವ ಮೊದಲು ವಿಷಯಕ್ಕೆ ಪೂರಕವಾದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಮತ್ತು ಸಾಕಷ್ಟು ತಯಾರಿ ಮಾಡಿಯೇ ಬರೆಯಲು ಸಜ್ಜಾಗುತ್ತಿದ್ದುದರಿಂದ ಅವರ ಜಗತ್ತಿಗೆ ಓದುಗರನ್ನು ಕರೆದೊಯ್ಯಲು ಸಾಧ್ಯವಾಯಿತು.

ಸ್ಥಳಗಳಿಗೆ ಖುದ್ದು ಭೇಟಿ

ಅವರು ತಮ್ಮ ಕಾದಂಬರಿಗಳ ವಸ್ತುವಿಗೆ ಪೂರಕವಾದ ವಿಷಯಗಳಿಗೆ ಸಂಬಂಧಿಸಿದ ಪ್ರದೇಶಗಳಿಗೆ ಭೇಟಿ ನೀಡುವುದು ವಿಶೇಷವಾಗಿತ್ತು ಇದು ಅವರ ಕೃತಿಗಳಿಗೆ ಅಧಿಕೃತ ಹಿನ್ನೆಲೆಯನ್ನು ನೀಡಲು ಸಹಾಯ ಮಾಡುತ್ತಿತ್ತು. ಅವರ ಹೆಚ್ಚಿನ ಮುಖ್ಯ ಕಾದಂಬರಿಗಳು ಸಂಶೋಧನೆ ಆಧಾರಿತವಾಗಿವೆ ಎಂದು ಬರಹಗಾರರೇ ಹೇಳುತ್ತಾರೆ.

ತಮ್ಮ ಭೇಟಿಗಳ ಸಮಯದಲ್ಲಿ, ಭೈರಪ್ಪ ಸ್ಥಳೀಯರೊಂದಿಗೆ ಮಾತನಾಡುತ್ತಿದ್ದರು, ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದರು. ಸ್ಥಳ, ಅದರ ಇತಿಹಾಸ ಮತ್ತು ಇತರ ವಿವರಗಳನ್ನು ಸ್ಥಳೀಯರ ದೃಷ್ಟಿಕೋನದಿಂದ ತಿಳಿದುಕೊಳ್ಳಲು ಬಯಸುತ್ತಿದ್ದರು. ವ್ಯಾಪಕ ಪ್ರಯಾಣ ಮತ್ತು ಸಂಶೋಧನೆಯೊಂದಿಗೆ, ಭೈರಪ್ಪ ಅವರು ತಮ್ಮ ಕಾದಂಬರಿಗಳಲ್ಲಿ ಅವರು ಸ್ಥಾಪಿಸಿದ ಜಗತ್ತಿಗೆ ಓದುಗರನ್ನು ಕರೆದೊಯ್ಯುವುದು ಅವರ ಬರಹದ ಶಕ್ತಿಯಾಗಿತ್ತು.

ಪೌರೋಹಿತ್ಯರು ಮತ್ತು ಸಂತರು ಸಂಸ್ಕೃತವನ್ನು ವ್ಯಾಪಕವಾಗಿ ಬಳಸುತ್ತಿದ್ದ 8 ನೇ ಶತಮಾನದ ಭಾರತಕ್ಕೆ ಓದುಗರನ್ನು ಕರೆದೊಯ್ಯುವ ಐತಿಹಾಸಿಕ ಕಾದಂಬರಿ 'ಸಾರ್ಥ'ಕ್ಕಾಗಿ, ಭೈರಪ್ಪ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸಿದ್ದರು ಮತ್ತು ಶ್ಲೋಕಗಳನ್ನು ಸಹ ಅರ್ಥಮಾಡಿಕೊಳ್ಳಲು ಬಯಸಿ, ಅದರ ಬಗ್ಗೆ ಅಧ್ಯಯನ ಮಾಡಿ ಬರೆದಿದ್ದರು. ಇದಕ್ಕಾಗಿ ಅವರು ಸಂಸ್ಕೃತ ವಿದ್ವಾಂಸ ಎಚ್.ವಿ. ನಾಗರಾಜ ರಾವ್ ಅವರೊಂದಿಗೆ ಸಾಯಂಕಾಲ ವಾಕ್ ಹೋಗುತ್ತಿರುವಾಗ ಚರ್ಚೆ ಮಾಡುತ್ತಿದ್ದರು. ಅದು ಕೂಡ ಅವರು ಚರ್ಚೆ ಮಾಡುತ್ತಿದ್ದುದು ಕನ್ನಡದಲ್ಲಲ್ಲ, ಸಂಸ್ಕೃತದಲ್ಲಿ.

ಪರ್ವ ಕಾದಂಬರಿ

ಅವರ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾದ ಅವರ 'ಪರ್ವ' ಕಾದಂಬರಿಯು ಮಹಾಭಾರತದ ಪಾತ್ರಗಳನ್ನು ಪೌರಾಣಿಕವಾಗಿ ವಿವರಿಸುತ್ತದೆ ಮತ್ತು ಕಥೆಯನ್ನು ಐತಿಹಾಸಿಕ ಘಟನೆಯಾಗಿ ಮರುಕಳಿಸುತ್ತದೆ. ಇದಕ್ಕಾಗಿ, ಅವರು ವ್ಯಾಸರು ಬರೆದ ಮೂಲ ಮಹಾಭಾರತ ಮಹಾಕಾವ್ಯದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದರು. ಕುರುಕ್ಷೇತ್ರ ಮತ್ತು ದ್ವಾರಕ ಸೇರಿದಂತೆ ಅದರಲ್ಲಿ ಉಲ್ಲೇಖಿಸಲಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವಿಷಯಗಳನ್ನು ಕಣ್ಣಾರೆ ಕಂಡು ಬರೆದಿದ್ದರು. ಅವರು ತಮ್ಮ 'ಯಾನ' ಪುಸ್ತಕ ಬರೆಯುವ ಮೊದಲು ಹಿಮಾಲಯಕ್ಕೆ ಭೇಟಿ ನೀಡಿ ಬಂದಿದ್ದರಂತೆ.

ಮಂದ್ರ ಕಾದಂಬರಿಗೆ 3 ವರ್ಷಗಳ ತಯಾರಿ, 2010 ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ

ಭೈರಪ್ಪ ಅವರು 1958 ರಲ್ಲಿ ಹುಬ್ಬಳ್ಳಿಯಲ್ಲಿದ್ದಾಗ ಸ್ವಲ್ಪ ಸಮಯದವರೆಗೆ ಸಂಗೀತವನ್ನು ಕಲಿತಿದ್ದರು, ಅಲ್ಲಿಂದ ಗುಜರಾತ್‌ಗೆ ಹೋದ ನಂತರ ಸಂಗೀತ ಕಲಿಕೆ ಮುಂದುವರೆಸಿದರು. 50 ವರ್ಷಗಳ ಸಂಗೀತ ಜ್ಞಾನವನ್ನು ಹೊಂದಿದ್ದರೂ, ಅವರು ತಮ್ಮ ಸಂಗೀತ ಕಾದಂಬರಿ 'ಮಂದ್ರ' ಗಾಗಿ ಮೂರು ವರ್ಷಗಳ ಕಾಲ ತಯಾರಿ ನಡೆಸಿದರು, ಅದು ಅವರಿಗೆ 2010 ರ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಇದನ್ನು ಅವರೇ ಒಂದು ಕಡೆ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸ್ಫೋಟಕ್ಕೂ ಮುನ್ನ ಮಸೀದಿ ಬಳಿ 3 ಗಂಟೆ ಪಾರ್ಕ್‌: ನಿರ್ಗಮಿಸಿದ ಕೆಲ ನಿಮಿಷದಲ್ಲೇ ಕಾರ್‌ ಬ್ಲಾಸ್ಟ್‌, ಶಂಕಿತ ಆತ್ಮಹತ್ಯಾ ಬಾಂಬರ್ ಚಿತ್ರ ಬಹಿರಂಗ..!

Delhi Red Fort blast- UAPA ಕೇಸು ದಾಖಲು, ಇಬ್ಬರ ಬಂಧನ, ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ: ಗಣ್ಯರ ಸಂತಾಪ

Bihar elections 2025: ಎರಡನೇ ಮತ್ತು ಕೊನೆಯ ಸುತ್ತಿನ ಮತದಾನ ಪ್ರಗತಿಯಲ್ಲಿ, ದೆಹಲಿ ಸ್ಫೋಟ ನಂತರ ಬಿಹಾರದಲ್ಲಿ ಕಟ್ಟೆಚ್ಚರ

Delhi Red Fort Blast: ಸ್ಥಳಕ್ಕೆ NIA-NSG ಭೇಟಿ; ಸಮಗ್ರ ತನಿಖೆ ಆರಂಭ, ಉನ್ನತ ಮಟ್ಟದ ಸಭೆ ಕರೆದ ಅಮಿತ್ ಶಾ

SCROLL FOR NEXT