ಬೆಳಗಾವಿ: ಭಾರೀ ಕುತೂಹಲ ಕೆರಳಸಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ಪುನಶ್ಚೇತನ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ.
15 ನಿರ್ದೇಶಕರ ಆಯ್ಕೆಗೆ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಷೇರುದಾರ ರೈತರು ಉತ್ಸಾಹದಿಂದ ಭಾಗವಹಿಸಿದ್ದರು.
ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಪ್ಯಾನೆಲ್ನಿಂದ ಸ್ಫರ್ಧಿಸಿದ್ದ ಎಲ್ಲ 15 ಅಭ್ಯರ್ಥಿಗಳು ಗೆಲುವು ಸಾಧಿಸಿದರು.
ಮತದಾನ ಪ್ರಕ್ರಿಯೆ ವೇಳೆ ಮತದಾನ ಕೇಂದ್ರದ ಹೊರಗೆ ರೈತರ ಗುಂಪೊಂದು ಪ್ರತಿಭಟನೆ ನಡೆಸಿ, ರಾಜಕೀಯ ನಾಯಕರ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು.
ಕಾರ್ಖಾನೆಯನ್ನು ಉಳಿಸಿ" ಎಂದು ಹೆಬ್ಬಾಳ್ಕರ್ ಅವರನ್ನು ಒತ್ತಾಯಿಸುವ ಘೋಷಣೆಗಳನ್ನು ಕೂಗಿದರು. ಈ ವೇಳೆ ಹೆಬ್ಬಾಳ್ಕರ್ ಅವರ ಬೆಂಬಲಿಗರು ಪ್ರತಿಭಟನಾಕಾರರೊಂದಿಗೆ ಘರ್ಷಣೆಗಿಳಿದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಈ ನಡುವೆ ಮತದಾನ ಮಾಡಿದ ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಲಪ್ರಭಾ ರೈತರ ಜೀವನಾಡಿ. ಪ್ರಸ್ತುತ ನಾವು ಅಧಿಕಾರದಲ್ಲಿದ್ದೇವೆ, ಆದರೆ, ಕಾರ್ಖಾನೆಯನ್ನು ಪುನಃಸ್ಥಾಪಿಸಲಾಗುತ್ತಿದ್ದು. ಇಲ್ಲಿ ಖಾಸಗೀಕರಣದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಫಲಿತಾಂಶ ಬಳಿಕ ಪ್ರತಿಕ್ರಿಯಿಸಿದ ಅವರು, ರೈತರು ಮತ್ತು ಕಾರ್ಮಿಕರ ಮೇಲಿನ ನಂಬಿಕೆಗೆ ಧನ್ಯವಾದಗಳನ್ನು ಅರ್ಪಿಸಿದರು,
ಎಂಎಲ್‌ಸಿ ಹಟ್ಟಿಹೊಳಿ ಅವರು ಮಾತನಾಡಿ, ಕಾರ್ಖಾನೆಯ ಪುನಶ್ಚೇತನ ಮತ್ತು ಪಾಲುದಾರರಲ್ಲಿ ವಿಶ್ವಾಸವನ್ನು ಮತ್ತೆ ಗಳಿಸುವುದು ನಮ್ಮ ಪ್ಯಾನೆಲ್'ನ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಕಾರ್ಖಾನೆಯಲ್ಲಿ ಆರ್ಥಿಕ ಸಮಸ್ಯೆ ಮತ್ತು ಖಾಸಗೀಕರಣದ ಪ್ರಯತ್ನಗಳ ಆರೋಪಗಳ ಬೆನ್ನಲ್ಲೇ ಈ ಚುನಾವಣೆಗಳು ಸಾಕಷ್ಟು ಕುತೂಹಲ ಕೆರಳಿತ್ತು.