ಬೌರಿಂಗ್ ಎಲ್‌ಪಿಜಿ ಸರ್ವಿಸ್ ಸ್ಟೇಷನ್ ಮುಂಭಾಗ ಬ್ಯಾರಿಕೇಡ್ ಹಾಕಲಾಗಿದೆ. 
ರಾಜ್ಯ

LPG ಬಿಕ್ಕಟ್ಟು ತೀವ್ರ: ಬೆಂಗಳೂರಿನ ಆಟೋ ಚಾಲಕರ ಬದುಕು ಬೀದಿಗೆ!

ನಗರದಲ್ಲಿರುವ ಕೆಲವೇ ಎಲ್ ಪಿಜಿ ಬಂಕರ್ ಗಳಲ್ಲಿ ಒಂದಾಗಿರುವ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಸರ್ವೀಸ್ ಸ್ಟೇಷನ್ ನಲ್ಲಿ ಗುರುವಾರಯೂ ಪೂರೈಕೆ ಖಾಲಿಯಾಗಿದೆ. ಇಂದು ಕೂಡಾ ಪೂರೈಕೆ ಇರುವುದಿಲ್ಲ ಎಂದು ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಬೆಂಗಳೂರು ನಗರದಲ್ಲಿ ಆಟೋರಿಕ್ಷಾಗಳಿಗೆ ಗ್ಯಾಸ್ ಸಿಗದಂತಾಗಿದ್ದು, ಚಾಲಕರ ಬದುಕು ಬೀದಿಗೆ ಬೀಳುವಂತಾಗಿದೆ. ಪ್ರಯಾಣಿಕರು ಹೆಚ್ಚಾಗಿ CNG ಅಳವಡಿಸಿದ ಆಟೋರಿಕ್ಷಾಗಳನ್ನು ಅವಲಂಬಿಸಿದ್ದಾರೆ.

ನಗರದಲ್ಲಿರುವ ಕೆಲವೇ ಎಲ್ ಪಿಜಿ ಬಂಕರ್ ಗಳಲ್ಲಿ ಒಂದಾಗಿರುವ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಸರ್ವೀಸ್ ಸ್ಟೇಷನ್ ನಲ್ಲಿ ಗುರುವಾರಯೂ ಪೂರೈಕೆ ಖಾಲಿಯಾಗಿದೆ. ಇಂದು ಕೂಡಾ ಪೂರೈಕೆ ಇರುವುದಿಲ್ಲ ಎಂದು ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ ಪಿಜಿ ಬಿಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ಎಲ್‌ಪಿಜಿ ಆಟೋರಿಕ್ಷಾ ಚಾಲಕ ಸಜನ್, ಕೆಆರ್ ಪುರಂನಲ್ಲಿ ವಾಸಿಸುತ್ತಿದ್ದು, ಬನ್ನೇರುಘಟ್ಟದ ​​ಒಂದು ಬಂಕರ್‌ನಲ್ಲಿ ಎಲ್‌ಪಿಜಿ ಪೂರೈಕೆ ಇದೆ ಎಂದು ಬೆಳಗ್ಗೆ ಯಾರೋ ಹೇಳಿದರು. ಆದರೆ ಇಂಧನ ತುಂಬಿಸಲು ಕೆಆರ್ ಪುರಂನಿಂದ ಬನ್ನೇರುಘಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ, ವಿಶೇಷವಾಗಿ ಆ ಮಾಹಿತಿಯು ನಿಜವಾಗಿದ್ದರೂ, ನಾನು ತಲುಪುವ ಮೊದಲೇ ಪೂರೈಕೆ ಖಾಲಿಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಮತ್ತೋರ್ವ ಆಟೋ ಚಾಲಕ ಇಸ್ಮಾಯಿಲ್ ಮಾತನಾಡಿ, ನಾನು ಅಸಹಾಯಕನಾಗಿದ್ದೇನೆ. ಆಗಾಗ ನಮಗೆ ಎಲ್ ಪಿಜಿ ಬಂಕರ್ ಗಳ ಬಗ್ಗೆ ದೃಢೀಕರಿಸದ ವರದಿಗಳು ಬರುತ್ತವೆ. ಆದರೆ ಅಲ್ಲಿ ದೊಡ್ಡದಾದ ಕ್ಯೂ ಇರುತ್ತದೆ ಎಂಬುದು ಗೊತ್ತಿದೆ. ಆದಾಗ್ಯೂ ಕೆಲವು ಕಡೆ CNG ಲಭ್ಯವಿದ್ದರೂ ನಮಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ ಮಂಜುನಾಥ್ ಪ್ರಕಾರ, ಸುಮಾರು 80,000 ಆಟೋರಿಕ್ಷಾಗಳು ಎಲ್‌ಪಿಜಿ ಮತ್ತು ಸುಮಾರು 1,00,000 CNG ಆಟೋಗಳಿವೆ. ನಗರದಾದ್ಯಂತ ಬಹಳಷ್ಟು ಎಲ್‌ಪಿಜಿ ಬಂಕರ್‌ಗಳನ್ನು ಮುಚ್ಚುವ ಮತ್ತು ಸಿಎನ್‌ಜಿ ಬಂಕರ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿದೆ ಎಂಬ ಅಂಶದಿಂದ ಪರಿಸ್ಥಿತಿಯು ಹದಗೆಡುತ್ತಿದೆ ಎಂದು ಹೇಳಿದರು.

ತಮ್ಮ ಆಟೋಗಳಿಗೆ ಸಾಕಾಗಷ್ಟು ಪೂರೈಕೆಯನ್ನು ಹೊಂದಿದ್ದರೂ ಸಹ ಎಲ್‌ಪಿಜಿಯನ್ನು ಸಂಗ್ರಹಿಸುವ ಅನೇಕ ಚಾಲಕರು ಇದ್ದಾರೆ, ಇದರಿಂದಾಗಿ ಇತರರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ: ಇರಾನ್ ಪ್ರಮುಖ ಸೇತುವೆ ಧ್ವಂಸ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬನ್ನಿ; ಟೆಹ್ರಾನ್'ಗೆ ಟ್ರಂಪ್ ಎಚ್ಚರಿಕೆ

ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

"ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ": ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಮಂಗಳಾರತಿ!

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

IPL 2026: ಅಭಿಷೇಕ್, ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್; KKR ವಿರುದ್ಧ SRH ಭರ್ಜರಿ ಗೆಲುವು

SCROLL FOR NEXT