ಕೇರಳಂ ಮೂಲದ ಶರಣ್ಯ ನಾಪತ್ತೆ TNIE
ರಾಜ್ಯ

ಕೊಡಗು: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಕೇರಳ ಮೂಲದ ಮಹಿಳೆ ನಾಪತ್ತೆ!

ಕೊಡಗಿನ ಅತಿ ಎತ್ತರದ ಬೆಟ್ಟ ತಡಿಯಾಂಡಮೋಳ್ ಗೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಶರಣ್ಯಳನ್ನು ಪತ್ತೆಹಚ್ಚಲು ಸ್ಥಳೀಯರ ಜೊತೆ ಸೇರಿ ಪೊಲೀಸರು ಮತ್ತು ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಡಿಕೇರಿ: ಕೊಡಗಿನ ಅತಿ ಎತ್ತರದ ಬೆಟ್ಟ ತಡಿಯಾಂಡಮೋಳ್ ಗೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಕೇರಳ ಮೂಲದ ಶರಣ್ಯ (36) ನಾಪತ್ತೆಯಾಗಿದ್ದಾರೆ. ಶರಣ್ಯಳನ್ನು ಪತ್ತೆಹಚ್ಚಲು ಸ್ಥಳೀಯರ ಜೊತೆ ಸೇರಿ ಪೊಲೀಸರು ಮತ್ತು ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದ ನಂತರ ಬೆಳಗಿನ ಸಮಯದಲ್ಲಿ ಚಾರಣಿಗರ ಗುಂಪು ತಡಿಯಾಂಡಮೋಲ್ ನಲ್ಲಿ ಟ್ರೆಕ್ಕಿಂಗ್ ಪ್ರಾರಂಭಿಸಿತು.

ತಡಿಯಾಂಡಮೋಲ್ ಶಿಖರದ ತಪ್ಪಲಿಗೆ ಏಕಾಂಗಿಯಾಗಿ ಶರಣ್ಯ ಬಂದಿದ್ದರು. ಇನ್ನು ಈ ಪ್ರದೇಶದಲ್ಲಿ ಕಾಡಾನೆಗಳ ಸಂಚಾರ ಇರುವುದರಿಂದ, ಶಿಖರದ ತಪ್ಪಲಿನಲ್ಲಿರುವ ಚೆಕ್ ಪೋಸ್ಟ್‌ನಲ್ಲಿರುವ ಅರಣ್ಯಾಧಿಕಾರಿಗಳು ಶರಣ್ಯರನ್ನು ಇತರ ಸಹ ಚಾರಣಿಗರೊಂದಿಗೆ ಸೇರಿ ಒಟ್ಟಿಗೆ ಟ್ರೆಕ್ಕಿಂಗ್ ನಡೆಸುವಂತೆ ಕೇಳಿಕೊಂಡರು. ಇನ್ನು ಸಂಜೆ ನಂತರ ಇತರ ಚಾರಣಿಗರು ಶಿಖರದಿಂದ ಹಿಂತಿರುಗಿದರು. ಶರಣ್ಯ ನಾಪತ್ತೆಯಾಗಿದ್ದಾರೆ. ಚೆಕ್ ಪೋಸ್ಟ್‌ನಲ್ಲಿರುವ ಅರಣ್ಯಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಮಹಿಳೆಯ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

ಶುಕ್ರವಾರ ಮುಂಜಾನೆ ಮತ್ತೆ ಶೋಧ ಕಾರ್ಯಾಚರಣೆ ಪುನರಾರಂಭವಾಯಿತು. ಸ್ಥಳೀಯರೊಂದಿಗೆ ಪೊಲೀಸರ ಎರಡು ತಂಡಗಳು ಮತ್ತು ಅರಣ್ಯ ಇಲಾಖೆಯ ಮೂರು ತಂಡಗಳು ಸೇರಿದಂತೆ ಒಟ್ಟು ಐದು ತಂಡಗಳು ಈ ಪ್ರದೇಶವನ್ನು ಪರಿಶೀಲಿಸುತ್ತಿವೆ. ನಾಪತ್ತೆಯಾಗಿರುವ ಮಹಿಳೆಯನ್ನು ಪತ್ತೆಹಚ್ಚಲು ಡ್ರೋನ್‌ ಮತ್ತು ಶ್ವಾನ ದಳವನ್ನು ಸಹ ಬಳಸಲಾಗಿದೆ ಎಂದು ಮಡಿಕೇರಿ ಡಿಸಿಎಫ್ ಅಭಿಷೇಕ್ ದೃಢಪಡಿಸಿದರು.

ನಾವು ಎಲ್ಲಾ ಸಂಭಾವ್ಯ ಸ್ಥಳಗಳಲ್ಲಿ ಹುಡುಕುತ್ತಿದ್ದೇವೆ. ತಡಿಯಂಡಮೋಳ್ ನ ಚಾರಣ ಮಾರ್ಗವು ಕಠಿಣವಾದದ್ದಲ್ಲ. ಒಬ್ಬರು ಎರಡು ಮೂರು ಗಂಟೆಗಳಲ್ಲಿ ಸುಲಭವಾಗಿ ಹಿಂತಿರುಗುವ ಮಾರ್ಗ ಅದಾಗಿದೆ. ಏತನ್ಮಧ್ಯೆ, ಪೊಲೀಸರು ಎಲ್ಲಾ ಸಂಭಾವ್ಯ ಕೋನಗಳನ್ನು ನೋಡುತ್ತಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಾಣೆಯಾದ ಮಹಿಳೆಯ ಕುಟುಂಬವನ್ನು ಪತ್ತೆಹಚ್ಚಲಾಗಿದ್ದು ಮಾಹಿತಿ ನೀಡಲಾಗಿದೆ ಎಂದು ಎಸ್‌ಪಿ ಬಿಂದು ಮಣಿ ಆರ್‌ಎನ್ ದೃಢಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ಬೋಗಸ್ ದಾಖಲೆ ಸೃಷ್ಟಿಸಿ 23 ಕೋಟಿ ರೂ ಲೂಟಿ; ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯುಕ್ತ ದಾಳಿ!

ವಚನಾನಂದಶ್ರೀ ವಿರುದ್ಧದ Pocso ಪ್ರಕರಣ: ತನಿಖಾಧಿಕಾರಿ PSI ಮಂಜುಳಾ ದಿಢೀರ್ ವರ್ಗಾವಣೆ!

ಮಾನವೀಯತೆ ಮರೆತ ಜನ: ಜನನಿಬಿಡ ರಸ್ತೆಯಲ್ಲೇ ಯುವ ದಂಪತಿ ಮೇಲೆ ಭೀಕರ ಹಲ್ಲೆ; Video Viral ಆದ ನಂತರ ಆಕ್ರೋಶ!

SCROLL FOR NEXT