ಮುಸ್ಲಿಂ ಯುವಕನ ಜತೆ ಯುವತಿ 
ರಾಜ್ಯ

ಕೊಪ್ಪಳ: ನವ ವಿವಾಹಿತೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​: ಮುಸ್ಲಿಂ ಯುವಕನ ಜತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರ ಎದುರೇ ವಿವಾಹಿತೆ ಯುವತಿ, ತನ್ನ ಪ್ರಿಯಕರನ ಜೊತೆ ಹೋಗುವುದಾಗಿ ಹಠ ಹಿಡಿದಿದ್ದರೆ, ಘಟನೆಯಿಂದ ಮನೆಯಲ್ಲಿ ಈಗಾಗಲೇ ಒಂದು ಸಾವಾಗಿದೆ.

ಕೊಪ್ಪಳ: ಕೊಪ್ಪಳದಲ್ಲಿ ನವವಿವಾಹಿತೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮದುವೆಯಾದ ಎರಡು ತಿಂಗಳಲ್ಲೇ ನಾಪತ್ತೆಯಾಗಿದ್ದ ಯುವತಿ ಈಗ ಮುಸ್ಲಿಂ ಯುವಕನ ಜೊತೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ.

ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರ ಎದುರೇ ವಿವಾಹಿತೆ ಯುವತಿ, ತನ್ನ ಪ್ರಿಯಕರನ ಜೊತೆ ಹೋಗುವುದಾಗಿ ಹಠ ಹಿಡಿದಿದ್ದರೆ, ಘಟನೆಯಿಂದ ಮನೆಯಲ್ಲಿ ಈಗಾಗಲೇ ಒಂದು ಸಾವಾಗಿದೆ. ಹೀಗಾಗಿ ನಮಗೆ ಪರಿಹಾರ ಬೇಕು ಎಂದು ಪತಿ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಕೊಪ್ಪಳದ ಗೌರಿ ಅಂಗಳ ನಿವಾಸಿ ನಾಗರಾಜ್​​ ಎಂಬವರನ್ನು ವಿವಾಹವಾಗಿದ್ದ ರಾಯಚೂರು ಜಿಲ್ಲೆಯ ಸಿಂದನೂರಿನ ಸಂಜನಾ ಎಂಬ ಯುವತಿ 20 ದಿನಗಲ ಹಿಂದೆ ತನ್ನ ಪತಿಯನ್ನು ಬಿಟ್ಟು ನಾಪತ್ತೆ ಆಗಿದ್ದಳು.

ಇದೀಗ ಮುಸ್ಲಿಂ ಯುವಕ ರಾಜಾಭಕ್ಷಿ ಎಂಬಾತನ ಜೊತೆ ಹುಬ್ಬಳ್ಳಿಯಲ್ಲಿ ನವ ವಿವಾಹಿತೆ ಸಂಜನಾ ಅವರನ್ನು ಪತ್ತೆ ಮಾಡಿರುವ ಪೊಲೀಸರು, ಇಬ್ಬರನ್ನೂ ಕೊಪ್ಪಳದ ಮಹಿಳಾ ಠಾಣೆಗೆ ಕರೆತಂದಿದ್ದಾರೆ.

ಗದಗ ಜಿಲ್ಲೆ ನಿವಾಸಿಯಾಗಿರೋ ರಾಜಾಭಕ್ಷಿ ಆಟೋ ಚಾಲಕನಾಗಿದ್ದು, ಆತನಿಗೆ ಈಗಾಗಲೇ ಮದುವೆ ಕೂಡ ಆಗಿದೆ. ಹೀಗಿದ್ದರೂ ಆತ ಸಂಜನಾಳನ್ನು ಕರೆದುಕೊಂಡು ಹೋಗಿದ್ದ ಎಂಬ ವಿಚಾರವೀಗ ಬಯಲಾಗಿದೆ.

ಇನ್ನು ಇವರಿಬ್ಬರನ್ನು ಪೊಲೀಸ್​​ ಠಾಣೆಗೆ ಕರೆತರುತ್ತಿದ್ದಂತೆ ಸಂಜನಾ ಪತಿ ಸೇರಿ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ನಡುವೆಯೂ ತನಗೆ ರಾಜಾಭಕ್ಷಿನೇ ಬೇಕು ಎಂದು ಸಂಜನಾ ಹಠ ಹಿಡಿದಿದ್ದರೆ, ಈಕೆಯ ಹುಚ್ಚಾಟಕ್ಕೆ ಅದಾಗಲೇ ನಮ್ಮ ಮನೆಯಲ್ಲಿ ಒಂದು ಜೀವ ಹೋಗಿದೆ. ಹೀಗಾಗಿ ನಮಗೆ ಪರಿಹಾರ ಬೇಕು ಎಂದು ನಾಗರಾಜ್​​ ಕುಟುಂಬ ಪಟ್ಟು ಹಿಡಿದಿದೆ.

ಕಳೆದ ಫೆಬ್ರವರಿಯಲ್ಲಿ ಮದುವೆ

ಎರಡೂ ಕುಟುಂಬಳ ಪರಸ್ಪರ ಒಪ್ಪಿಗೆಯ ಮೇಲೆಯೇ ಕೊಪ್ಪಳದ ಪಾರ್ಥಾ ಕಲ್ಯಾಣ ಮಂಟಪದಲ್ಲಿ ಕಳೆದ ಫೆಬ್ರವರಿ 8ರಂದು ನಾಗರಾಜ್​​ ಮತ್ತು ಸಂಜನಾ ವಿವಾಹ ನಡೆದಿತ್ತು. ಆ ಬಳಿಕ ದಂಪತಿ ನಾಗರಾಜ್​​ ಅವರ ಮನೆಯ ಮೇಲಿನ ಮಹಡಿಯಲ್ಲಿ ವಾಸವಿದ್ದರು.

ಈ ನಡುವೆ ಮಾರ್ಚ್​​ 21ರ ರಾತ್ರಿ ರಾತ್ರಿ 8.30ರ ಸುಮಾರಿಗೆ ಸಂಜನಾ ತನಗೆ ಆರೋಗ್ಯ ಸರಿ ಇಲ್ಲದ ಕಾರಣ ಔಷಧ ತರುವಂತೆ ಪತಿ ನಾಗರಾಜ್​​ಗೆ ಹೇಳಿದ್ದಳು. ಪತಿ ಮಾತ್ರೆ ತರಲು ತೆರಳಿದ್ದ ವೇಳೆ ಸಂಜನಾ ಮನೆ ಬಿಟ್ಟು ಹೋಗಿದ್ದರು.

ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆಕೆಯ ಬಗ್ಗೆ ಮಾಹಿತಿ ಸಿಗದ ಕಾರಣ ಪತಿ ನಾಗರಾಜ್​​ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸೊಸೆ ನಾಪತ್ತೆಯಾಗಿರುವ ವಿಚಾರ ತಿಳಿದ ನಾಗರಾಜ್​ ಅವರ​ ತಂದೆ ಖಂಡೆಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-US ಹತ್ತಿರ: 'ಆತುರ ಬೇಡ'-ಟ್ರಂಪ್ ಹೊಸ ವರಸೆ!

ಇರಾನ್-US ಕದನ ವಿರಾಮದ ನಡುವೆ ಯುಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ರಾಜಧಾನಿಗೆ ಅಪ್ಪಳಿಸಿದ ಹೊಸ ಹೈಪರ್ಸಾನಿಕ್ ಕ್ಷಿಪಣಿ| video

ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ Biggboss ಮಾಜಿ ಸ್ಪರ್ಧಿ ಜಾಹ್ನವಿ!

ಗೋಹತ್ಯೆ ನಿಲ್ಲಬೇಕೆ?: ಮೊದಲು ಗೋವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಿ: ಬಕ್ರೀದ್'ಗೂ ಮುನ್ನ ಮುಸ್ಲಿಂ ಸಂಘಟನೆಗಳ ಒತ್ತಾಯ!

IPL 2026: ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್‌ಗೆ ಎಂಟ್ರಿಕೊಟ್ಟ ರಾಜಸ್ಥಾನ ರಾಯಲ್ಸ್; ಪಂಜಾಬ್, KKR ಕನಸು ಭಗ್ನ!

SCROLL FOR NEXT