ಬಂಧಿತ ಆರೋಪಿ 
ರಾಜ್ಯ

ಬೆಳಗಾವಿ: ಅಕ್ರಮ ಸಂಬಂಧಕ್ಕೆ ಅಡ್ಡಿ; ಲವರ್ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ! ಇದೀಗ ಇಬ್ಬರು ಲಾಕ್

ಮನೆ ಬಳಿಯೇ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡಿರುವ ಕೈಲಾಶ್ ಬಾಲಕೃಷ್ಣ (43) ಮತ್ತು ಮೃತನ ಪತ್ನಿ ಲಕ್ಷ್ಮಿ ಅವಿನಾಶ್ ಸುಪ್ಪಣ್ಣ (29) ತಪ್ಪೊಪ್ಪಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ.

ಬೆಳಗಾವಿ: ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಖತರ್ನಾಕ್ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಮೃತರನ್ನು ಅಂಗೋಲ್‌ನ ಬಬಲೆ ಗಲ್ಲಿ ನಿವಾಸಿಯಾದ ಆಯುರ್ವೇದ ಥೆರಾಪಿಸ್ಟ್ ಅವಿನಾಶ್ ಅಶೋಕ್ ಸುಪ್ಪಣ್ಣ (40) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಬಳಿಯೇ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡಿರುವ ಕೈಲಾಶ್ ಬಾಲಕೃಷ್ಣ (43) ಮತ್ತು ಮೃತನ ಪತ್ನಿ ಲಕ್ಷ್ಮಿ ಅವಿನಾಶ್ ಸುಪ್ಪಣ್ಣ (29) ತಪ್ಪೊಪ್ಪಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ. ಗೃಹಿಣಿಯಾಗಿರುವ ಲಕ್ಷ್ಮಿ ಆಗಾಗ್ಗೆ ಕ್ಲಿನಿಕ್ ನಲ್ಲಿ ತನ್ನ ಪತಿಗೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಏಪ್ರಿಲ್ 5 ರಂದು ಸಂಜೆ ಅಂಗೋಲ್‌ನ ಅಂಕುಶ ಆಯುರ್ವೇದಿಕ್ ಕೇರ್ ಕ್ಲಿನಿಕ್‌ನಲ್ಲಿ ತನ್ನ ಮಗ ಅವಿನಾಶ್ ತಲೆಗೆ ಗಾಯವಾಗಿ ಸಾವನ್ನಪ್ಪಿದ್ದಾನೆ ಎಂದು ಕಮಲ್ ಅಶೋಕ್ ಸುಪ್ಪಣ್ಣ ಅವರು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 6 ರಂದು ದೂರು ದಾಖಲಿಸಿದ್ದರು. ಕೊಲೆಯಲ್ಲಿ ಸಂಚಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ನಂತರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಮೊದಲಿನಿಂದಲೂ ಮೃತನ ಪತ್ನಿಯ ಹೇಳಿಕೆಗಳು ಅಸಮಂಜಸವಾಗಿದ್ದು, ಸ್ಪಷ್ಟತೆಯ ಕೊರತೆಯಿತು. ಇದು ಆಕಸ್ಮಿಕವಾಗಿ ಬಿದ್ದಿದ್ದರೆ, ಒಂದು ಗಾಯ ಆಗಿರಬಹುದು. ಆದರೆ, ತಲೆಯ ಮೇಲೆ ನಾಲ್ಕು ಗಾಯದ ಗುರುತುಗಳಿದ್ದವು.ಮರಣೋತ್ತರ ಪರೀಕ್ಷೆಯಲ್ಲಿ ಹೃದಯಕ್ಕೆ ಗಾಯವಾಗಿರುವುದಾಗಿ ವೈದ್ಯರು ಹೇಳಿದ್ದರು. ಇದು ಅನುಮಾನವನ್ನು ಬಲಪಡಿಸಿತು ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಸುದ್ದಿಗಾರರಿಗೆ ತಿಳಿಸಿದರು.

ಅಪರಾಧ ಮರುಸೃಷ್ಟಿ ಅಧಿಕಾರಿಗಳು ಸೇರಿದಂತೆ ಫೋರೆನ್ಸಿಕ್ ತಂಡವು ಘಟನಾ ಸ್ಥಳದಲ್ಲಿ ರಕ್ತದ ಕಲೆ ಮಾದರಿ ಮತ್ತು ಲುಮಿನೋಲ್ ವಿಶ್ಲೇಷಣೆಯನ್ನು ನಡೆಸಿತು. ಪತ್ನಿ ನೀಡಿದ ಹೇಳಿಕೆಗಳು ಸ್ಥಳದಲ್ಲಿ ದೊರೆತ ಸಾಕ್ಷ್ಯಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ವೈಜ್ಞಾನಿಕ ಸಂಶೋಧನೆಗಳ ಆಧಾರದ ಮೇಲೆ ನಮ್ಮ ಅನುಮಾನಗಳು ದೃಢಪಟ್ಟಿತ್ತು. ತಾಂತ್ರಿಕ ಬುದ್ಧಿಮತ್ತೆಯ ಮೂಲಕ ಹಲವು ಸುಳಿವು ಸಿಕ್ಕಿತು. ಇದರ ಆಧಾರದ ಮೇಲೆ ಕೈಲಾಶ್ ಬಾಲಕೃಷ್ಣ ಮತ್ತು ಸಂತ್ರಸ್ತೆಯ ಪತ್ನಿ ಲಕ್ಷ್ಮಿ ಅವಿನಾಶ್ ಸುಪ್ಪಣ್ಣ ಅವರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಪರಾಧವನ್ನು ಒಪ್ಪಿಕೊಂಡರು ಎಂದು ಅವರು ವಿವರಿಸಿದರು.

ಇಬ್ಬರೂ ಸೇರಿ ಕೊಲೆಗೆ ಯೋಜನೆ ರೂಪಿಸಿದ್ದರು. ಕೈಲಾಶ್ ಕ್ಲಿನಿಕ್ ಗೆ ಹೋಗಿ ಅವಿನಾಶ್ ಮೇಲೆ ಗ್ಯಾಸ್ ಸಿಲಿಂಡರ್ ನಿಂದ ಹಲ್ಲೆ ನಡೆಸಿದ್ದರೆ, ಲಕ್ಷ್ಮಿ ಮನೆಯಲ್ಲಿಯೇ ಇದ್ದಳು. ಅವಿನಾಶ್ ತಲೆಗೆ ನಾಲ್ಕು ಗಾಯಗಳಾಗಿದ್ದು, ಎದೆಯ ಮೇಲೂ ಸಿಲಿಂಡರ್ ನಿಂದ ಹಲ್ಲೆ ನಡೆಸಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆರಂಭದಲ್ಲಿ ಮೃತನ ಪತ್ನಿ ತನ್ನ ಪತಿಗೆ ಕಡಿಮೆ ಬ್ಲಡ್ ಶುಗರ್ ಮತ್ತು ಅಧಿಕ ರಕ್ತದೊತ್ತಡವಿದೆ ಎಂದು ಪೊಲೀಸರಿಗೆ ತಿಳಿಸಿದ್ದು, ಕೆಳಗೆ ಬಿದ್ದು ಮೇಜಿನ ಮೇಲೆ ಬಿದ್ದಿರಬಹುದು ಎಂದು ಹೇಳಿದ್ದರು. ಆದರೆ ಮೊದಲಿನಿಂದಲೂ ಆಕೆಯ ಹೇಳಿಕೆ ಬಗ್ಗೆ ನಮಗೆ ಅನುಮಾನವಿತ್ತು. ಲಕ್ಷ್ಮಿ ಮತ್ತು ಕೈಲಾಶ್ ಅವರ ಸಂಬಂಧ ಹೇಗಿತ್ತು ಎಂಬುದು ತನಿಖೆಯಲ್ಲಿ ವಿವರವಾಗಿ ತಿಳಿಯಿತು ಎಂದು SP ಬೊರಸೆ ತಿಳಿಸಿದರು.

ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದಾರೆ. ಆರಂಭದಲ್ಲಿ ಅದನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಿದ್ದೇವು. ಆದರೆ ಘಟನಾ ಸ್ಥಳವನ್ನು ಪರೀಕ್ಷಿಸಿದ ನಂತರ ಮರಣೋತ್ತರ ಪರೀಕ್ಷೆಯ ವರದಿ ಮತ್ತು ರಕ್ತದ ಕಲೆಗಳ ಮಾದರಿ ವಿಶ್ಲೇಷಣೆಯ ನಂತರ ನಮ್ಮ ಅನುಮಾನಗಳು ಹೆಚ್ಚಾದವು. ಫೋರೆನ್ಸಿಕ್ ತಂಡವು ಈ ಪ್ರಕರಣದಲ್ಲಿ ಉತ್ತಮ ಕೆಲಸ ಮಾಡಿದ್ದು, ನಮ್ಮ ಅನುಮಾನವನ್ನು ದೃಢಪಡಿಸಿದವು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

ಇರಾನ್ ಜೊತೆಗೆ ನಾಳೆ ಮಹತ್ವದ ಮಾತುಕತೆ: ಇಸ್ಲಾಮಾಬಾದ್‌ಗೆ ತೆರಳುವ ಮುನ್ನಾ ವಾರ್ನಿಂಗ್ ನೀಡಿದ ಜೆಡಿ ವ್ಯಾನ್ಸ್!

Viral Video: ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಬೆನ್ನಲ್ಲೇ 165 ಲೀಟರ್ ತುಪ್ಪ ಅರ್ಪಣೆ; ನೆಟ್ಟಿಗರಿಂದ ಭಾರೀ ಆಕ್ರೋಶ

ISI, ತೆಹ್ರೀಕ್-ಇ- ತಾಲಿಬಾನ್ ಹಿಂದೂಸ್ತಾನ್ ಜೊತೆಗೆ ನಂಟು: ಡೆಹ್ರಾಡೂನ್ ವ್ಯಕ್ತಿಯ ಬಂಧನ!

ದಾವಣಗೆರೆ: 'ಸಮರ್ಥ್ ಸೋಲಿಸಲು ಕಾಂಗ್ರೆಸ್ ನಿಂದಲೇ ಸಂಚು'; ಮುಸ್ಲಿಂ ನಾಯಕರಿಂದ ಸ್ಫೋಟಕ ಹೇಳಿಕೆ

SCROLL FOR NEXT