ಸಿದ್ದರಾಮಯ್ಯ  
ರಾಜ್ಯ

'ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಸೌಲಭ್ಯ ಕೊಡಿ': ಸರ್ಕಾರಕ್ಕೆ 13 ಕಂಪೆನಿಗಳ ಬೇಡಿಕೆ

ಮೂಲಗಳ ಪ್ರಕಾರ, ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕಂಪೆನಿ ಮತ್ತು ಸರ್ಕಾರಕ್ಕೆ ಲಾಭವಾಗುವ (win-win) ಪರಿಹಾರ ಕಂಡುಹಿಡಿಯಲು ಪ್ರತಿಯೊಂದು ಕಂಪನಿಯೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಬೇಕು ಎಂದು ಉಪಸಮಿತಿ ಸೂಚಿಸಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಕರ್ನಾಟಕದಲ್ಲಿ ಭಾರಿ ಹೂಡಿಕೆ ಮಾಡಲು ಯೋಜಿಸಿರುವ 13 ಕಂಪನಿಗಳಿಗೆ ಹೆಚ್ಚುವರಿ ಪ್ರೋತ್ಸಾಹಕಗಳನ್ನು ನೀಡುವ ಬಗ್ಗೆ ಚರ್ಚಿಸಿದೆ. ಕಂಪನಿಗಳ ಬೇಡಿಕೆ ಆಧರಿಸಿ ಪ್ರೋತ್ಸಾಹಕಗಳನ್ನು ನೀಡುವ ಕೆಲಸವನ್ನು ಈ ಉಪಸಮಿತಿ ನೋಡಿಕೊಳ್ಳುತ್ತದೆ.

ಮೂಲಗಳ ಪ್ರಕಾರ, ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕಂಪೆನಿ ಮತ್ತು ಸರ್ಕಾರಕ್ಕೆ ಲಾಭವಾಗುವ (win-win) ಪರಿಹಾರ ಕಂಡುಹಿಡಿಯಲು ಪ್ರತಿಯೊಂದು ಕಂಪನಿಯೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಬೇಕು ಎಂದು ಉಪಸಮಿತಿ ಸೂಚಿಸಿದೆ.

ಕೆಲವು ಕಂಪನಿಗಳು 40 ಶೇಕಡದವರೆಗೆ ಹೆಚ್ಚುವರಿ ಪ್ರೋತ್ಸಾಹಕಗಳನ್ನು ಕೇಳಿವೆ. ಇದನ್ನು 35 ಶೇಕಡಾ ಅಥವಾ ಕೆಲ ಸಂದರ್ಭಗಳಲ್ಲಿ 20-25 ಶೇಕಡಾಕ್ಕೆ ಇಳಿಸಬಹುದೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಈ ಹೂಡಿಕೆಗಳು ರಾಜ್ಯಕ್ಕೆ ತರುವ ಲಾಭವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಯೋಜನೆಗಳನ್ನು ತಿರಸ್ಕರಿಸಲಾಗಿಲ್ಲ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕಂಪನಿಗಳು ಕನ್ನಡಿಗರಿಗೆ ಉದ್ಯೋಗಗಳಿಗೆ ಆದ್ಯತೆ ನೀಡುವಂತೆ ಖಚಿತಪಡಿಸಿಕೊಳ್ಳಬೇಕೆಂದು ಒತ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಡಗುಗಳ ಮೇಲೆ ಇರಾನ್ ದಾಳಿ: 'ಕದನ ವಿರಾಮ ಉಲ್ಲಂಘನೆ ಮೂರ್ಖತನ-ಟ್ರಂಪ್ ಕೆಂಡಾಮಂಡಲ!

Bidadi Township Project: ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆಯವರೆಗೂ ಕಾಯುವೆ- ಕುಮಾರಸ್ವಾಮಿ

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ದೆಹಲಿಗೆ ತಮಿಳುನಾಡು ವಿಶೇಷ ಪ್ರತಿನಿಧಿಯಾಗಿ ಜನ ನಾಯಗನ್ ನಿರ್ಮಾಪಕನ ನೇಮಕ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು