ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರು: ಐಫೋನ್ ಫ್ಯಾಕ್ಟರಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ, ಶಿಶುವಿನ ಗಂಟಲು ಸೀಳಿ ಕೊಲೆ!

ಅವಿವಾಹಿತೆಯಾಗಿರುವ ರೇಣುಕಾ, ಅವಮಾನ ಮತ್ತು ಕಳಂಕಕ್ಕೆ ಹೆದರಿ ಮಗುವನ್ನು ಕೊಂದಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿರುವ ಆಪಲ್‌ನ ಅಗ್ರ ಐಫೋನ್ ಅಸೆಂಬ್ಲರ್ ಆಗಿರುವ ಫಾಕ್ಸ್‌ಕಾನ್‌ನ ಫ್ಯಾಕ್ಟರಿ ಶೌಚಾಲಯದೊಳಗೆ 19 ವರ್ಷದ ಯುವತಿಯೊಬ್ಬಳು ಶಿಶುವಿಗೆ ಜನ್ಮ ನೀಡಿದ್ದು, ಅದಾದ ಸ್ವಲ್ಪ ಸಮಯದ ನಂತರವೇ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

ದೇವನಹಳ್ಳಿಯ ಫಾಕ್ಸ್‌ಕಾನ್ ಕಾರ್ಖಾನೆಯ ಉದ್ಯೋಗಿಯಾಗಿರುವ ಆರೋಪಿ ರೇಣುಕಾ ಬುಧವಾರ ಶೌಚಾಲಯದೊಳಗೆ ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಆಕೆಯು ಮಗುವಿನ ಗಂಟಲು ಸೀಳಿ ಕೊಂದು, ಶವವನ್ನು ಚೀಲದಲ್ಲಿ ಎಸೆದಿದ್ದಾಳೆ.

ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಠಾತ್ ಮತ್ತು ಯಾವುದೇ ಯೋಜನೆ ಇಲ್ಲದೆ ಹೆರಿಗೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಅವಿವಾಹಿತೆಯಾಗಿರುವ ರೇಣುಕಾ, ಅವಮಾನ ಮತ್ತು ಕಳಂಕಕ್ಕೆ ಹೆದರಿ ಮಗುವನ್ನು ಕೊಂದಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಬ್ಬ ಉದ್ಯೋಗಿ ಶೌಚಾಲಯಕ್ಕೆ ಪ್ರವೇಶಿಸಿದಾಗ ಅವಶೇಷಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ತಪಾಸಣೆ ನಡೆಸಿ, ಶಿಶು ಜನನದ ನಂತರ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಮಹಿಳೆಯನ್ನು ರೇಣುಕಾ ಎಂದು ಗುರುತಿಸಲಾಗಿದೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamilnadu & West Bengal Election 2026 Live Updates | 11 ಗಂಟೆ ವೇಳೆಗೆ ತಮಿಳುನಾಡು ಶೇ. 37.56, ಪಶ್ಚಿಮ ಬಂಗಾಳದಲ್ಲಿ ಶೇ.41.11ರಷ್ಟು ಮತದಾನ

AI ಸೇವೆಗಳಲ್ಲಿ ಕೂಡ ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಚೀನಾ! (ಹಣಕ್ಲಾಸು)

US-Iran war:: ಅಮೆರಿಕಾ ನೌಕಾ ದಿಗ್ಭಂಧನ ಮುಂದುವರಿದರೆ ಹಾರ್ಮುಜ್ ಜಲಸಂಧಿ ತೆರೆಯಲ್ಲ; ಇರಾನ್ ಕಠಿಣ ನಿಲುವು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

ಇಂದು SSLC ರಿಸಲ್ಟ್: 8.6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ, ಹೈಕೋರ್ಟ್ ಆದೇಶ ಹಿನ್ನೆಲೆ ಹಿಂದಿ ಗ್ರೇಡ್'ಗೆ ಕೊಕ್..!

ಕದನ ವಿರಾಮ ಒಪ್ಪಂದಕ್ಕೆ ಬೆಲೆ ಇಲ್ಲವೇ?: ಲೆಬನಾನ್‌ ಮೇಲೆ ಮುಂದುವರೆದ ಇಸ್ರೇಲ್ ದಾಳಿ, ಪತ್ರಕರ್ತೆ ಸೇರಿ ಐವರ ಸಾವು..!

SCROLL FOR NEXT