ಚೇತನ್ ಅಹಿಂಸಾ  
ರಾಜ್ಯ

'ನಾನು ಹೇಳಿದ್ದರಲ್ಲಿ ತಪ್ಪೇನಿದೆ, ನನಗೆ ಧಮ್ಕಿ ಹಾಕಿದ್ರೆ, ಗೂಂಡಾ ರೀತಿ ವರ್ತಿಸಿದ್ರೆ ಸುಮ್ನಿರಲ್ಲ, ಕಾನೂನು ಹೋರಾಟ ಮಾಡ್ತೀನಿ': ನಟ ಚೇತನ್ ಅಹಿಂಸಾ

ನಾನು ನಿನ್ನೆ ಕ್ಷಮೆ ಕೇಳಿದ್ದು ರಾಜ್ ಕುಮಾರ್ ಅಭಿಮಾನಿಗಳು ಧಮ್ಕಿ ಹಾಕಿದ್ದಾರೆ. ನಾನು ನನ್ನ ಮಾತಿನ ಮೇಲೆ ಇಂದು ಕೂಡ ನಿಲ್ಲುತ್ತೇನೆ. ಸಾರ ಗೋವಿಂದು ಅವರು ಬಳಸಿದ ಪದಗಳು ಸರಿ ಇಲ್ಲ ಎಂದರು.

ಡಾ.ರಾಜ್‌ ಕುಮಾರ್ ಸ್ಮಾರಕದ ಭೂಮಿಗೆ ಸರ್ಕಾರದಿಂದ ಎರಡೂವರೆ ಎಕರೆ ಪ್ರದೇಶ ನೀಡಿದ್ದನ್ನು ಪ್ರಶ್ನಿಸಿ ನಟ ಅಹಿಂಸಾ ಚೇತನ್ ಮಾಡಿದ್ದ ಪೋಸ್ಟ್ ಭಾರೀ ವಿವಾದ ಉಂಟಾಗಿತ್ತು. ಇದಕ್ಕೆ ಸಾ ರಾ ಗೋವಿಂದ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ನಿನ್ನೆ ಚೇತನ್ ಅಹಿಂಸಾ ಮನೆ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಹಿಂಸಾ ಚೇತನ್ ಡಾ ರಾಜ್ ಕುಮಾರ್ ಅಭಿಮಾನಿಗಳಿಗೆ ಕ್ಷಮೆ ಕೂಡ ಕೇಳಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೆ ಕನ್ನಡಪರ ಹೋರಾಟಗಾರರ ನಡೆಯನ್ನು ವಿರೋಧಿಸಿ ಅಗತ್ಯಬಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಸಾರಾ ಗೋವಿಂದು ಬಳಸಿದ ಪದ ಸರಿ ಇಲ್ಲ

ನಾನು ನಿನ್ನೆ ಕ್ಷಮೆ ಕೇಳಿದ್ದು ರಾಜ್ ಕುಮಾರ್ ಅಭಿಮಾನಿಗಳು ಧಮ್ಕಿ ಹಾಕಿದ್ದಾರೆ. ನಾನು ನನ್ನ ಮಾತಿನ ಮೇಲೆ ಇಂದು ಕೂಡ ನಿಲ್ಲುತ್ತೇನೆ. ಸಾರ ಗೋವಿಂದು ಅವರು ಬಳಸಿದ ಪದಗಳು ಸರಿ ಇಲ್ಲ, ಸೌಜನ್ಯಯುತವಾಗಿ ಸೂಕ್ತ ವೇದಿಕೆಯಲ್ಲಿ ಅವರು ನನ್ನ ನಿಲುವನ್ನು ವಿರೋಧಿಸಬಹುದಾಗಿತ್ತು, ಆದರೆ ನನ್ನ ಮನೆ ಮುಂದೆ ಬಂದು ಗೂಂಡಾಗಳ ರೀತಿಯಲ್ಲಿ ವರ್ತಿಸಿದ್ದು, ಧಮ್ಕಿ ಹಾಕಿದ್ದು ಸರಿಯಲ್ಲ ಎಂದರು.

ರಾಜ್​ಕುಮಾರ್ ಹೆಸರಿಗೆ ಮಸಿ ಬಳೀತಿದ್ದಾರೆ

ಇಲ್ಲಿ ಸೇರಿರುವ ನಾವೆಲ್ಲರೂ ಡಾ.ರಾಜ್‍ಕುಮಾರ್ ಅಭಿಮಾನಿಗಳೇ. ಡಾ.ರಾಜ್‍ಕುಮಾರ್ ಅವರ ಹೆಸರಿಗೆ ಸಾರಾ ಗೋವಿಂದ್ ಅಂತವರು ಮಸಿ ಬಳಿಯುತ್ತಿದ್ದಾರೆ. ನಿನ್ನೆ ಬಂದಿದ್ದಂತಹ ವ್ಯಕ್ತಿಗಳು ಗೂಂಡಾಗಿರಿ ಮಾಡಲಿಕ್ಕೆ ಎಂದರು.

ಮಹಿಳಾ ನಿಂದನೆ ಮಾಡಿ ರಾಜ್‌ಕುಮಾರ್ ಅಭಿಮಾನಿಗಳ ಹೆಸರಿಗೆ ಮಸಿ ಬಳಿತಾ ಇದ್ದಾರೆ. ನಾವು ರಾಜ್‌ಕುಮಾರ್ ಅವರಿಂದ ಸೌಜನ್ಯದಿಂದ ಮಾತನ್ನು ಹಿಡಿತದಲ್ಲಿ ಇಟ್ಕೊಂಡು ಹೋರಾಟ ನಡೆಸುವುದನ್ನು ಕಲಿತಿದ್ದೇವೆ. ಅದನ್ನ ಮುಂದುವರೆಸಿಕೊಂಡು ಹೋಗೋಣ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಪ್ರತಿಯೊಬ್ಬರು ಅವರವರ ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಹೇಳಿದ್ದಾರೆ.

ಹುಚ್ಚ ಎಂದಿದ್ದಕ್ಕೆ ಏನಂದ್ರು?

ಹುಚ್ಚು ಅಂತ ಕೆಲವರು ಹೇಳ್ತಾರೆ. ಅಷ್ಟೇ ಅಲ್ಲ ಕೆಲವರು ನನ್ನ ಮಾತನ್ನ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ಸಲಹೆಗಾರರು, ಹೋರಾಟಗಾರರ ಜೊತೆ ಸೇರಿ ಕಾನೂನು ರೀತಿ ಹೋರಾಡುತ್ತೇವೆ ಎಂದಿದ್ದಾರೆ.

ಮನೆ ಬಳಿ ಬಂದು ಹೆದರಿಸಿ, ಧಮ್ಕಿ ಹಾಕಿ ದಬ್ಬಾಳಿಕೆಯನ್ನ ನಾವು ಮಾಡಲ್ಲ. ನಮ್ಮ ವಿಚಾರ ಸರಿಯಾಗಿದೆ‌. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ ಅಂತ ಹೇಳಿರೋದು. ನನ್ನ ಟ್ವೀಟ್‌ಗೆ ನಾನು ನಿಲ್ಲುತ್ತೇನೆ, ರಾಜ್ ಕುಮಾರ್ ಇಂದು ಇರುತ್ತಿದ್ದರೆ ತಮಗೆ ಎರಡೂವರೆ ಎಕರೆ ನೀಡುತ್ತಿದ್ದರೆ ವಿರೋಧಿಸುತ್ತಿದ್ದರು, ಬೇಡ ಎನ್ನುತ್ತಿದ್ದರು ಎಂದರು.

ರಾಜ್​ಕುಮಾರ್ ಅವರನ್ನು ಟಾರ್ಗೆಟ್ ಮಾಡಿದ್ದಲ್ಲ

ಅಣ್ಣಾವ್ರೆ ಬದುಕಿದ್ರೆ ಅವರಿಗೆ ಜಾಗ ಬೇಕಾ ಅಂತ ಕೇಳಿದ್ರೂ ಅವರೇ ಬೇಡ ಅಂತಿದ್ದರು. ಇದು ಪ್ರಚಾರಕ್ಕಾಗಿ ಅಲ್ಲ.. ವಿಚಾರಕ್ಕಾಗಿ. ಸರ್ಕಾರದ ಯೋಜನೆಯಿಂದ ಒಬ್ಬರಿಗೆ ಲ್ಯಾಂಡ್ ಕೊಟ್ಟರು. ಉಳಿದವರಿಗೆ ಕೊಟ್ಟಿಲ್ಲ ಅಂತ ಅಂದ್ರೆ ಅದು ಚಿತ್ರರಂಗದಲ್ಲಿ ಗಲಾಟೆ ಆಗುತ್ತೆ. ನಾನು ಡಾ.ರಾಜ್‌ಕುಮಾರ್ ಅವರನ್ನ ಟಾರ್ಗೆಟ್ ಮಾಡಿ ಮಾತನಾಡಿಲ್ಲ ಎಂದರು.

ಐದು ಹತ್ತು ಕೋಟಿ ಸ್ಮಾರಕಕ್ಕೆ ಬೇಕಾ ಅಂತ ಕೊವಿಡ್ ಸಮಯದಲ್ಲಿ ಮಾತನಾಡಿದ್ದೆ. ಆಗಲೂ ಅದು ಚರ್ಚೆ ಆಗಿ ಇತ್ತು. ಶಿವರಾಮೆಗೌಡ್ರು ಕನ್ನಡಕ್ಕಾಗಿ ಹೋರಾಟ ಮಾಡಿದ್ದರೆ ಈ ರೀತಿ ಅನೇಕ ಹೋರಾಟಗಾರರು ಬಂದಾಗ ನಿಮಗೆ ನೋವಾಗಿದ್ರೆ ಕ್ಷಮಿಸಿ ಅಂತ ಕೇಳಿದ್ದೇನೆ.

ಸೌಜನ್ಯವಾಗಿ ಮಾತನಾಡಿದ್ರೆ ಒಪ್ಪುತ್ತೇನೆ. ಆದರೆ ಧಮ್ಕಿ ಹಾಕಿದ್ರೆ ನಾನು ಒಪ್ಪಲ್ಲ. ಕಾನೂನನ್ನ ಕೈಗೆ ತಗೋಬೇಕು ಅನ್ನೋದನ್ನ ಒಪ್ಪಲ್ಲ. ನಾನು ಚಿಕ್ಕ ವಯಸ್ಸಿನಿಂದಲೂ ರಾಜಕುಮಾರ್ ಅವರ ಕಲಾಸೇವೆಗೆ ಅಭಿಮಾನಿ. ಆದರೆ ಅವರ ಅಭಿಮಾನಿ ಹೆಸರಲ್ಲಿ ಈ ರೀತಿ ನಡೆದುಕೊಳ್ಳೋದನ್ನ ಒಪ್ಪಲ್ಲ ಎಂದಿದ್ದಾರೆ. ಕಾನೂನು ಸಲಹೆಗಾರರ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಶ್ವೇತಭವನದಲ್ಲಿ ಔತಣಕೂಟ ವೇಳೆ ಶೂಟೌಟ್ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ-Video

ಬೆಂಗಳೂರಿನ ವಾಹನ ಸವಾರರೇ ಗಮನಿಸಿ: 10K ಮ್ಯಾರಥಾನ್, ಈ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಸಂಚಾರ ಬಂದ್-Video

ಸಿಎಂ ಕುರ್ಚಿಗೆ ಬಿಗಿ ಪಟ್ಟು: ದೆಹಲಿಯಲ್ಲಿ ಬೀಡುಬಿಟ್ಟ ಡಿಕೆ ಬ್ರದರ್ಸ್, ನಾಯಕತ್ವ ಗೊಂದಲ ತಾರಕಕ್ಕೆ..!

ಹೈಕೋರ್ಟ್ ನ 101 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ, ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಸೀಕ್ರೆಟ್ ಸರ್ವಿಸ್ ಅದ್ಭುತವಾಗಿ ಕೆಲಸ ಮಾಡಿದೆ, ದಾಳಿಕೋರನ ಬಂಧಿಸಲಾಗಿದೆ: ಟ್ರಂಪ್‌

SCROLL FOR NEXT