ಸಚಿವ ಸತೀಶ್ ಜಾರಕಿಹೊಳಿ 
ರಾಜ್ಯ

ಒಳ ಮೀಸಲಾತಿ ನಿರ್ಧಾರಕ್ಕೆ ಜನಮನ್ನಣೆ ಸಿಕ್ಕಿದ್ದು, ಇದು ಐತಿಹಾಸಿಕ ನಿರ್ಧಾರ: ಸಚಿವ ಸತೀಶ್ ಜಾರಕಿಹೊಳಿ

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಏಕಮತದಿಂದ ಅಂಗೀಕರಿಸಲಾಗಿದೆ. ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಎಲ್ಲಾ ಸಚಿವರು ಸಭೆಯಲ್ಲಿ ಭಾಗವಹಿಸಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ನಿರ್ಧಾರ ಕೈಗೊಳ್ಳಲಾಗಿದೆ.

ಬೆಳಗಾವಿ: ರಾಜ್ಯ ಸರ್ಕಾರದ ಒಳ ಮೀಸಲಾತಿ ನಿರ್ಧಾರಕ್ಕೆ ಜನಮನ್ನಣೆ ದೊರಕುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಶನಿವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡ ಈ ನಿರ್ಧಾರವನ್ನು“ಐತಿಹಾಸಿಕ” ನಿರ್ಧಾರವಾಗಿದೆ ಎಂದು ಬಣ್ಣಿಸಿದ್ದಾರೆ.

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಏಕಮತದಿಂದ ಅಂಗೀಕರಿಸಲಾಗಿದೆ. ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಎಲ್ಲಾ ಸಚಿವರು ಸಭೆಯಲ್ಲಿ ಭಾಗವಹಿಸಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ನಿರ್ಧಾರ ಕೈಗೊಳ್ಳಲಾಗಿದೆ. “ಎಲ್ಲ ವರ್ಗಗಳಲ್ಲೂ ತೃಪ್ತಿ ಮೂಡಿದೆ” ಎಂದು ಹೇಳಿದ್ದಾರೆ.

ಒಳ ಮೀಸಲಾತಿ ಬಹುಕಾಲದಿಂದ ಕೇಳಿಬರುತ್ತಿದ್ದ ಬೇಡಿಕೆಯಾಗಿದ್ದು, ಸಮುದಾಯಗಳ ಒಳಗೆ ಮೀಸಲಾತಿ ಪ್ರಯೋಜನಗಳನ್ನು ಸಮನಾಗಿ ಹಂಚಿಕೆ ಮಾಡಲು ಇದು ಮಹತ್ವದ ಹೆಜ್ಜೆಯಾಗಿದೆ. ಈ ನಿರ್ಧಾರವು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದೆಂಬ ನಿರೀಕ್ಷೆ ಇದೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ವಿರುದ್ಧ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿಯವರು, “ವಿಪಕ್ಷಗಳು ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ತಪ್ಪು ಹುಡುಕುವುದು ಸಾಮಾನ್ಯ. ಇದು ಜನಪರ ಮತ್ತು ಐತಿಹಾಸಿಕ ಹೆಜ್ಜೆಯಾಗಿದ್ದು, ಸಾರ್ವಜನಿಕ ಬೆಂಬಲವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಶ್ವೇತಭವನದಲ್ಲಿ ಔತಣಕೂಟ ವೇಳೆ ಶೂಟೌಟ್ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ-Video

ಬೆಂಗಳೂರಿನ ವಾಹನ ಸವಾರರೇ ಗಮನಿಸಿ: 10K ಮ್ಯಾರಥಾನ್, ಈ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಸಂಚಾರ ಬಂದ್-Video

ಸಿಎಂ ಕುರ್ಚಿಗೆ ಬಿಗಿ ಪಟ್ಟು: ದೆಹಲಿಯಲ್ಲಿ ಬೀಡುಬಿಟ್ಟ ಡಿಕೆ ಬ್ರದರ್ಸ್, ನಾಯಕತ್ವ ಗೊಂದಲ ತಾರಕಕ್ಕೆ..!

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಸೀಕ್ರೆಟ್ ಸರ್ವಿಸ್ ಅದ್ಭುತವಾಗಿ ಕೆಲಸ ಮಾಡಿದೆ, ದಾಳಿಕೋರನ ಬಂಧಿಸಲಾಗಿದೆ: ಟ್ರಂಪ್‌

ಬೆಂಗಳೂರಲ್ಲಿ ರಣ ಬಿಸಿಲು: ಡಿಹೈಡ್ರೇಷನ್-ಹೀಟ್ ಸ್ಟ್ರೋಕ್ ಭೀತಿ, ಮಕ್ಕಳು-ವೃದ್ಧರು ಹೆಚ್ಚು ಅಪಾಯದಲ್ಲಿ..!

SCROLL FOR NEXT