ಅತ್ಯಾಚಾರ (ಸಾಂದರ್ಭಿಕ ಚಿತ್ರ) 
ರಾಜ್ಯ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 1.25 ರೂ ಲಕ್ಷ ದಂಡ..!

ನಂತರ ಬಾಲಕಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಗ್ರಾಮಕ್ಕೆ ಕರೆದೊಯ್ದು, ಅಕ್ಟೋಬರ್ 16ರಿಂದ 31ರವರೆಗೆ ಒಂದು ಕೊಠಡಿಯಲ್ಲಿ ಬಂದಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೊ) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ (RI) ಹಾಗೂ ರೂ. 1.25 ಲಕ್ಷ ದಂಡ ವಿಧಿಸಿದೆ.

ಸರ್ಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕಲಬುರಗಿ ಜಿಲ್ಲೆಯ ರಟಕಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರಾಮದ ಆರೋಪಿ ಸಾಬಣ್ಣ ಮಲ್ಕಪ್ಪ ಕಟ್ಟಿಮನಿ ಎಂಬಾತ ಅದೇ ಗ್ರಾಮದ 11 ವರ್ಷ ಮತ್ತು 10 ತಿಂಗಳ ಬಾಲಕಿಯನ್ನು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮತ್ತು ಆಕೆಯ ಮನೆ ಮುಂದೆ ಆಟವಾಡುತ್ತಿದ್ದಾಗ ಅಪಹರಿಸಿದ್ದಾನೆ.

ನಂತರ ಬಾಲಕಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಗ್ರಾಮಕ್ಕೆ ಕರೆದೊಯ್ದು, ಅಕ್ಟೋಬರ್ 16ರಿಂದ 31ರವರೆಗೆ ಒಂದು ಕೊಠಡಿಯಲ್ಲಿ ಬಂದಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

ಈ ಬಗ್ಗೆ ಮಾಹಿತಿ ಪಡೆದ ಬಾಲಕಿಯ ತಂದೆ, ಸ್ಥಳಕ್ಕೆ ತೆರಳಿ ಮಗಳನ್ನು ರಕ್ಷಿಸಿ ರಟ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ ಕಠಿಣ ಶಿಕ್ಷೆ ವಿಧಿಸಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಟೆಹ್ರಾನ್ ಷರತ್ತುಗಳಿಗೆ ‘NO’ ಎಂದ ಅಮೆರಿಕಾ; ಸಂದಿಗ್ಧ ಸ್ಥಿತಿಯಲ್ಲಿ ಶಾಂತಿ ಮಾತುಕತೆ

ಟ್ರಂಪ್ ಕೈಗೆ ಗಾಯ, ಬಣ್ಣ ಬದಲಾವಣೆ: ಫೋಟೋ ವೈರಲ್, ಅಮೆರಿಕಾ ಅಧ್ಯಕ್ಷರ ಆರೋಗ್ಯ ಕುರಿತು ಊಹಾಪೋಹ ಶುರು..!

ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು: ಸರ್ಕಾರಿ ಶಾಲೆಗಳ ಬಲವರ್ಧನೆಗೆ 8 ಗ್ಯಾರಂಟಿಗಳ ಘೋಷಣೆ..!

ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ತೆರೆ ಎಳೆಯಿರಿ: ಹೈಕಮಾಂಡ್'ಗೆ ಸತೀಶ್ ಜಾರಕಿಹೊಳಿ ಆಗ್ರಹ

SSLC ಪರೀಕ್ಷೆಯಲ್ಲಿ “ಮಾಸ್ ಕಾಪಿ” ಆರೋಪ: ವಯಸ್ಸಾಗಿದೆ-ಏನೇನೋ ಬಡಬಡಿಸುತ್ತಾರೆ, ಕ್ಷಮಿಸಿಬಿಡೋಣ; ಹೆಚ್.ವಿಶ್ವನಾಥ್ ವಿರುದ್ಧ ಮಧು ಬಂಗಾರಪ್ಪ ಆಕ್ರೋಶ

SCROLL FOR NEXT