ಮಂಗಳೂರು: 2015ರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡ ಮೊಹಮ್ಮದ್ ರಿಯಾಝ್ ಫರಂಗಿಪೇಟೆಗೆ ಬೆಳ್ತಂಗಡಿ ನ್ಯಾಯಾಲಯ 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದೆ.
ಈ ಪ್ರಕರಣ ಜುಲೈ 23, 2015 ರಂದು ಬೆಳ್ತಂಗಡಿ ತಾಲೂಕು ಅಧಿಕಾರಿ ಕರ್ನಾಟಕ ಬಳಿ ನಡೆದ ಪ್ರತಿಭಟಗೆ ಸಂಬಂಧಿಸಿದ್ದಾಗಿದೆ. ಪ್ರತಿಭಟನೆಯಲ್ಲಿ ರಿಯಾಝ್ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಬೆಳ್ತಂಗಡಿ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಂದಿನ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿ ಬಿ.ಎಸ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ರಿಯಾಜ್ ಅಪರಾಧಿ ಎಂದು ನ್ಯಾಯಾಧೀಶ ರಾಮಲಿಂಗಪ್ಪ ತೀರ್ಪು ನೀಡಿದ್ದಾರೆ.