ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

'ಸರ್ಕಾರಿ ಕೆಲಸ ಎಂದರೆ ಬಂದು ಹೋಗುವುದಲ್ಲ': LED ಬೀದಿ ದೀಪ ಯೋಜನೆ ಅನುಷ್ಠಾನದಲ್ಲಿ ವಿಳಂಬ, ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ

ಯೋಜನೆಯ ಬಗ್ಗೆ ಮೂಲ ಮಾಹಿತಿ ಇಲ್ಲ, ಕೇಳಿದ ಪ್ರಶ್ನೆಗಳಿಗೆ ಉತ್ತರ ಇಲ್ಲ, ಪರಿಶೀಲನಾ ಸಭೆಗೆ ಕನಿಷ್ಠ ಸಿದ್ಧತೆಯೂ ಇಲ್ಲ. ಹಾಗಿದ್ದರೆ ನೀವು ಸಭೆಗೆ ಬಂದಿರುವುದು ಏಕೆ?

ಬೆಂಗಳೂರು: ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳ ಯೋಜನೆ ಸಂಪೂರ್ಣವಾಗಿ ಜಾರಿಯಾದರೆ ಶೇ.61.01ರಷ್ಟು ವಿದ್ಯುತ್ ಉಳಿತಾಯ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಹೇಳಿದ್ದಾರೆ.

ಮಂಗಳವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವಿದ್ಯುತ್ ಎಂಜಿನಿಯರ್‌ಗಳ ಸಭೆಯಲ್ಲಿ ಎಲ್‌ಇಡಿ ಬೀದಿ ದೀಪ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಕಾರ್ಯವೈಖರಿಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಸಭೆಗೆ ಬಂದ ಅಧಿಕಾರಿಗಳ ಬಳಿ ಯೋಜನೆಯ ಪ್ರಗತಿಗೆ ಸಂಬಂಧಿಸಿದ ಮೂಲಭೂತ ಮಾಹಿತಿಯೇ ಇಲ್ಲದಿರುವುದನ್ನು ಕಂಡು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಯ ಬಗ್ಗೆ ಮೂಲ ಮಾಹಿತಿ ಇಲ್ಲ, ಕೇಳಿದ ಪ್ರಶ್ನೆಗಳಿಗೆ ಉತ್ತರ ಇಲ್ಲ, ಪರಿಶೀಲನಾ ಸಭೆಗೆ ಕನಿಷ್ಠ ಸಿದ್ಧತೆಯೂ ಇಲ್ಲ. ಹಾಗಿದ್ದರೆ ನೀವು ಸಭೆಗೆ ಬಂದಿರುವುದು ಏಕೆ? ಸರ್ಕಾರಿ ಕೆಲಸ ಎಂದರೆ ಕಚೇರಿಗೆ ಬಂದು ಹೋಗುವುದಷ್ಟೇ ಎಂಬ ಮನೋಭಾವ ಹೆಚ್ಚುತ್ತಿದೆ. ಇಂತಹ ನಿರ್ಲಕ್ಷ್ಯದಿಂದ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಯೋಜನೆಗೆ ಮೇ 7 ಮತ್ತು ಮೇ 15ರಂದು ಕಾಮಗಾರಿ ಆದೇಶ ನೀಡಲಾಗಿತ್ತು. ನಗರದಾದ್ಯಂತ ಒಟ್ಟು 3,02,919 ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಗುರಿ ಹೊಂದಲಾಗಿದ್ದು, ಇದುವರೆಗೆ ಕೇವಲ 2,67,270 ದೀಪಗಳ ಅಳವಡಿಕೆ ಮಾತ್ರ ಪೂರ್ಣಗೊಂಡಿದೆ.

ಇದೇ ರೀತಿ 24,677 ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CCMS) ಪ್ಯಾನೆಲ್‌ಗಳನ್ನು ಅಳವಡಿಸುವ ಯೋಜನೆಯಿದ್ದರೂ, ಇದುವರೆಗೆ ಕೇವಲ 7,567 ಪ್ಯಾನೆಲ್‌ಗಳ ಅಳವಡಿಕೆ ಮಾತ್ರ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಏಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದರು.

ನಗರದಲ್ಲಿ ಪದೇ ಪದೇ ಬೀದಿ ದೀಪಗಳು ಕಾರ್ಯನಿರ್ವಹಿಸದಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಶಾಶ್ವತ ಪರಿಹಾರ ಒದಗಿಸುವ ಜೊತೆಗೆ ವಿದ್ಯುತ್ ಬಳಕೆ ಕಡಿಮೆ ಮಾಡಿ, ಇಂಧನ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಬಳಿಕ ನಗರದಲ್ಲಿರುವ ಎಲ್ಲಾ ಸಾಂಪ್ರದಾಯಿಕ ಬೀದಿ ದೀಪಗಳನ್ನು ಯಾವುದೇ ವಿನಾಯಿತಿ ಇಲ್ಲದೆ ಎಲ್‌ಇಡಿ ದೀಪಗಳಿಂದ ಬದಲಾಯಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ, ಬೀದಿ ದೀಪಗಳೇ ಇಲ್ಲದ ಪ್ರದೇಶಗಳಲ್ಲಿ ಹೊಸ ದೀಪಗಳನ್ನು ಅಳವಡಿಸಬೇಕು ಹಾಗೂ ಎಲ್ಲಾ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಿಸಿಎಂಎಸ್‌ ಆಧಾರಿತ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!

Los Angeles ಭೇಟಿಗೂ ಮುನ್ನ ಟ್ರಂಪ್‌ಗೆ ಆಘಾತ; ಗಾಲ್ಫ್‌ ಮೈದಾನದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿ ಬಂಧನ, ಹತ್ಯೆಗೆ ಸಂಚು ಶಂಕೆ..!