ಡಿ.ಕೆ ಶಿವಕುಮಾರ್ 
ರಾಜ್ಯ

'ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿಗಳೇ, ನಿಗದಿಯಾದ ಪೇಮೆಂಟ್ ಇನ್ನೂ ಜಮಾ ಆಗಿಲ್ಲವೆಂದು ಖಾತೆ ಹಂಚಿಕೆ ತಡೆ ಹಿಡಿದಿದ್ದೀರಾ?'

ಇತ್ತ ದೆಹಲಿಯ 'ಕಲೆಕ್ಷನ್‌ ಏಜೆಂಟ್‌' ರಣದೀಪ್ ಸುರ್ಜೇವಾಲಾ ಸಾಹೇಬರು, ಅಸಮಾಧಾನಗೊಂಡ ಶಾಸಕರ ಮನೆ ಮನೆಗೆ ತೆರಳಿ ತೇಪೆ ಹಚ್ಚುವುದರಲ್ಲಿ ಹಾಗೂ ಕುಸಿಯುತ್ತಿರುವ ಸರ್ಕಾರಕ್ಕೆ 'ಪ್ಯಾಚ್‌ ವರ್ಕ್‌' ಹಾಕುವುದರಲ್ಲೇ ಬ್ಯುಸಿ,

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮುಗಿದು ಮೂರು ದಿನಗಳೇ ಕಳೆದಿವೆ ಆದರೆ 'ಖಾತೆ'ಗಳ ಸುಳಿವೇ ಇಲ್ಲ ಎಂದು ಬಿಜೆಪಿ ಶಾಸಕ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ,

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಡಮ್ಮಿ ಸಿಎಂ ಡಿಕೆ ಶಿವಕುಮಾರ್ ಅವರೇ, ಪೇಮೆಂಟ್ ಕೋಟಾ ಸಚಿವರಿಗೆ ಖಾತೆ ಹಂಚಲು ಹೈಕಮಾಂಡ್‌ ಅನುಮತಿಗಾಗಿ ಕಾಯುತ್ತಿದ್ದೀರೋ ಅಥವಾ ನಿಗದಿಯಾದ ಪೇಮೆಂಟ್ ಇನ್ನೂ 'ಖಾತೆ'ಗೆ (Account) ಜಮಾ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ? ಎಂದು ಪ್ರಶ್ನಿಸಿದ್ದಾರೆ.

ಇತ್ತ ದೆಹಲಿಯ 'ಕಲೆಕ್ಷನ್‌ ಏಜೆಂಟ್‌' ರಣದೀಪ್ ಸುರ್ಜೇವಾಲಾ ಸಾಹೇಬರು, ಅಸಮಾಧಾನಗೊಂಡ ಶಾಸಕರ ಮನೆ ಮನೆಗೆ ತೆರಳಿ ತೇಪೆ ಹಚ್ಚುವುದರಲ್ಲಿ ಹಾಗೂ ಕುಸಿಯುತ್ತಿರುವ ಸರ್ಕಾರಕ್ಕೆ 'ಪ್ಯಾಚ್‌ ವರ್ಕ್‌' ಹಾಕುವುದರಲ್ಲೇ ಬ್ಯುಸಿ, ಅಂದಹಾಗೆ, ಇನ್ನುಮುಂದೆ ಪ್ರತಿಯೊಂದು ಕಡತಕ್ಕೂ ಸಹಿ ಹಾಕಲು ಸುರ್ಜೇವಾಲಾ ಅವರೇ ಬೆಂಗಳೂರಿಗೆ ಬರಬೇಕಾ? ವಿಧಾನಸೌಧದಲ್ಲಿ ಅವರಿಗೆ ಒಂದು ಕೊಠಡಿ ಮೀಸಲಿಟ್ಟಿದ್ದೀರಾ? ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಎಲ್ಲಾ ಫೈಲ್‌ಗಳನ್ನ ದೆಹಲಿಗೆ ಸ್ಪೀಡ್‌ ಪೋಸ್ಟ್‌ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೀರಾ 'ರಬ್ಬರ್ ಸ್ಟ್ಯಾಂಪ್' ಮುಖ್ಯಮಂತ್ರಿಗಳೇ? ರಾಜ್ಯದಲ್ಲಿ ನಿಜವಾದ ಸರ್ಕಾರ ನಡೀತಾ ಇದೆಯೋ ಅಥವಾ ದೆಹಲಿಯ ಹೈಕಮಾಂಡ್‌ನ 'ರಿಮೋಟ್‌ ಕಂಟ್ರೋಲ್' ಹೈಜಾಕ್ ನಾಟಕ ನಡೀತಾ ಇದೆಯೋ ಜನತೆಗಂತೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2013ರ ಅತ್ಯಾಚಾರ ಪ್ರಕರಣ: ‘Tehelka’ ಮಾಜಿ ಸಂಪಾದಕ ತರುಣ್ ತೇಜಪಾಲ್ ದೋಷಿ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು..!

FCRA: 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ, ಸಾಮಾನ್ಯ ಭಾರತೀಯರೇ ದೊಡ್ಡ ಬೆಲೆ ತೆರಬೇಕಾಗುತ್ತದೆ': Shashi Tharoor

"ಪ್ರಧಾನಿ ಮೋದಿಗೆ ಅಷ್ಟೊಂದು ತಲೆಬಾಗಬೇಡಿ": Instagram ಖಾತೆ ನಿರ್ಬಂಧ ಬೆನ್ನಲ್ಲೇ Meta ವಿರುದ್ಧ ಕೇಜ್ರಿವಾಲ್ ಆಕ್ರೋಶ..!

'ನೋಡೋರ್ ಗಿಂತ ಆಡೋರ್ ಸಂಖ್ಯೆನೇ ಜಾಸ್ತಿ ಇದೆ': ಪ್ರೇಕ್ಷಕರೇ ಇಲ್ಲದೇ ಟೀಕೆಗೆ ಗುರಿಯಾದ Pakistan vs West Indies ಟೆಸ್ಟ್ ಪಂದ್ಯ!

ಯೆನ್ ರಕ್ಷಣೆಗೆ ಅಮೇರಿಕಾ-ಜಪಾನ್ ಜಂಟಿ ಕಾರ್ಯಾಚರಣೆ, ಜಾಗತಿಕ ಹಣಕಾಸು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ (ಹಣಕ್ಲಾಸು)