ಚಿನ್ನದಂಗಡಿಯಲ್ಲಿ ದರೋಡೆಗೆ ಯತ್ನ 
ರಾಜ್ಯ

ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿ ದರೋಡೆಗೆ ಯತ್ನ: ಮಾಲೀಕನ ಮೇಲೆ ಗುಂಡಿನ ದಾಳಿ, Video

ದಾಬಸ್‌ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಮಾಲೀಕ ಪುನ್ನಾರಾಮ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದಂಗಡಿ ಮಾಲೀಕನ ಮೇಲೆ ದರೋಡೆಕೋರ ಗ್ಯಾಂಗ್​​ ಫೈರಿಂಗ್ ಮಾಡಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ಡಾಬಸ್​ಪೇಟೆಯಲ್ಲಿ ನಡೆದಿದೆ.

ದಾಬಸ್‌ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಮಾಲೀಕ ಪುನ್ನಾರಾಮ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೂಲಗಳ ಪ್ರಕಾರ, ಬೊಲೆರೋ ಕಾರಿನಲ್ಲಿ ಆಗಮಿಸಿದ್ದ ಐದಾರು ಜನರ ತಂಡ, ಆಭರಣ ಖರೀದಿಸುವವರಂತೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದೆ. ಈ ವೇಳೆ ಚಿನ್ನಾಭರಣಗಳನ್ನು ನೋಡುವ ನೆಪದಲ್ಲಿ ಅಂಗಡಿ ಮಾಲೀಕನ ಗಮನ ಸೆಳೆದಿದೆ.

ಬಳಿಕ ಚಿನ್ನಾಭರಣಗಳನ್ನು ದರೋಡೆ ಮಾಡಲು ಯತ್ನಿಸಿದ್ದು, ಈ ವೇಳೆ ಮಾಲೀಕ ಪುನ್ನಾರಾಮ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ದರೋಡೆಕೋರರು ಅವರ ಮೇಲೆ ಏಕಾಏಕಿ ಫೈರಿಂಗ್ ಮಾಡಿ ಪರಾರಿ ಆಗಿದ್ದಾರೆ.

ಅಂಗಡಿಯಲ್ಲಿ ಜೀವಂತ ಗುಂಡು ಪತ್ತೆ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಂತೆಯೇ ಅಂಗಡಿ ಪರಿಶೀಲನೆ ವೇಳೆ 2 ಜೀವಂತ ಗುಂಡುಗಳು ಕೂಡ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ-14 ಪ್ರದೋಶ್ ಮಾಫಿ ಸಾಕ್ಷಿ ವಿಚಾರಣೆ, ದರ್ಶನ್ ಗೆ "ಕಂಟಕವಾಗುತ್ತಾ? ಆ.10 ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು!

'ಕ್ಯಾ ಬೋಲ್ತಿ ಪಬ್ಲಿಕ್': ನೀಟ್ ನಂತರ CJPಯ ಮುಂದಿನ ಟಾರ್ಗೆಟ್ ನಿರುದ್ಯೋಗ; ಜನರ ಧ್ವನಿಯಾಗಲು ದೇಶಾದ್ಯಂತ ಅಭಿಯಾನ

ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ: ‘Tehelka’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೊಂದು ಶಾಕ್; ಪ್ರದೋಷ್ ಬಳಿಕ ಕೋರ್ಟ್‌ಲ್ಲಿ ಸತ್ಯ ಹೇಳಲು ಮುಂದಾದ ವಿನಯ್, ರವಿಶಂಕರ್!

ಶಿವನ ಮುಂದೆ ಇರುವ ಬಸವ ನಾನು; ನಾನೇ ಮುಖ್ಯಮಂತ್ರಿ ಇದ್ದಂತೆ: ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್