ಎಐ ಚಿತ್ರ 
ರಾಜ್ಯ

ಬೆಂಗಳೂರಿಗರೇ ಗಮನಿಸಿ.., ಫ್ರೀಡಂ ಹಬ್ಬ ಹಿನ್ನೆಲೆ ನಗರದ ಹಲವು ರಸ್ತೆಗಳು ಬಂದ್‌, ಈ ರಸ್ತೆಗಳಲ್ಲಿ ವಾಹನ ಸಂಚಾರ ಇರಲ್ಲ..!

ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣ ಹಾಗೂ ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೆ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶನಿವಾರ ವಿಧಾನಸೌಧದ ಮುಂಭಾಗದಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ‘ಫ್ರೀಡಂ ಹಬ್ಬ’ ನಡೆಯಲಿರುವ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಹಲವು ಪ್ರಮುಖ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮೆಟ್ರೋ ನಿಲ್ದಾಣಗಳ ಪ್ರವೇಶ-ನಿರ್ಗಮನದಲ್ಲೂ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣ ಹಾಗೂ ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೆ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಸಾರ್ವಜನಿಕರು ಕಬ್ಬನ್‌ ಪಾರ್ಕ್ ಮೆಟ್ರೋ ನಿಲ್ದಾಣ ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣವನ್ನು (ಸೆಂಟ್ರಲ್ ಕಾಲೇಜು) ಬಳಸುವಂತೆ ಸೂಚಿಸಲಾಗಿದೆ.

ಅಂಬೇಡ್ಕರ್ ರಸ್ತೆಯಿಂದ ಕೆ.ಆರ್. ವೃತ್ತದ ಕಡೆಗೆ ಹಾಗೂ ಕೆ.ಆರ್. ವೃತ್ತದಿಂದ ಶೇಷಾದ್ರಿ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರದ ಕಡೆಗೆ ಅಂಬೇಡ್ಕರ್ ರಸ್ತೆಯ ಮಾರ್ಗವಾಗಿ ಎಲ್ಲ ರೀತಿಯ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

  • ಕೆ.ಆರ್. ವೃತ್ತದ ಕಡೆಗೆ ತೆರಳುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್‌ನಿಂದ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ತೆರಳಿ, ಚಂದ್ರಿಕಾ ಬಳಿ ಎಡಕ್ಕೆ ತಿರುಗಿ ಎಲ್‌ಆರ್‌ಡಿಇ–ಬಸವೇಶ್ವರ ಜಂಕ್ಷನ್–ಪ್ಯಾಲೇಸ್ ರಸ್ತೆ ಮೂಲಕ ಕೆ.ಆರ್. ವೃತ್ತ ತಲುಪಬಹುದು.

  • ಮತ್ತೊಂದು ಪರ್ಯಾಯ ಮಾರ್ಗವಾಗಿ ಬಾಳೇಕುಂದ್ರಿ ಜಂಕ್ಷನ್‌ನಿಂದ ಸಿಟಿಒ, ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್‌ಆರ್‌ಎಂಆರ್ ಹಾಗೂ ಕಾರ್ಪೊರೇಷನ್ ವೃತ್ತದ ಮೂಲಕ ತೆರಳಬಹುದು.

  • ಬಿಆರ್‌ವಿ ರಸ್ತೆಯಿಂದ ಬರುವ ವಾಹನಗಳು ಅನಿಲ್ ಕುಂಬ್ಳೆ ವೃತ್ತದ ಮೂಲಕ ಬಲಕ್ಕೆ ತಿರುಗಿ ಕ್ವೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಆರ್‌ಆರ್‌ಎಂಆರ್ ಮತ್ತು ಕಾರ್ಪೊರೇಷನ್ ವೃತ್ತದ ಮೂಲಕ ಸಾಗಬಹುದು.

  • ಮತ್ತೊಂದು ಮಾರ್ಗವಾಗಿ ರಾಜಭವನ ರಸ್ತೆಯಲ್ಲಿ ತೆರಳಿ ಚಾಲುಕ್ಯ ವೃತ್ತದಲ್ಲಿ ಎಡಕ್ಕೆ ತಿರುಗಿ ಪ್ಯಾಲೇಸ್ ರಸ್ತೆಯ ಮೂಲಕ ಕೆ.ಆರ್. ವೃತ್ತದ ಕಡೆಗೆ ಹೋಗಬಹುದು.

  • ಕೆ.ಆರ್. ವೃತ್ತದಿಂದ ಶೇಷಾದ್ರಿ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರದ ಕಡೆಗೆ ತೆರಳುವ ವಾಹನಗಳು ಮಹಾರಾಣಿ ಫ್ಲೈಓವರ್ ಬಳಿ ಎಡಕ್ಕೆ ತಿರುಗಿ ಪ್ಯಾಲೇಸ್ ರಸ್ತೆಯ ಬಸವೇಶ್ವರ ವೃತ್ತದ ಮೂಲಕ ವಸಂತನಗರ ಅಥವಾ ಶಿವಾಜಿನಗರ ತಲುಪಬಹುದು.

  • ಕೆ.ಆರ್. ವೃತ್ತದಿಂದ ಮತ್ತೊಂದು ಪರ್ಯಾಯವಾಗಿ ನೃಪತುಂಗ ರಸ್ತೆ–ಕಾರ್ಪೊರೇಷನ್ ವೃತ್ತ–ಕೆಬಿ ರಸ್ತೆ ಮೂಲಕ ಶಿವಾಜಿನಗರದ ಕಡೆಗೆ ತೆರಳಲು ಅವಕಾಶವಿದೆ.

ವಾಹನ ನಿಲುಗಡೆಗೆ ನಿರ್ಬಂಧ

ಕ್ವೀನ್ಸ್ ರಸ್ತೆಯ ಎರಡೂ ಬದಿಗಳಲ್ಲಿ ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಹಾಗೂ ಕ್ವೀನ್ಸ್ ವೃತ್ತದಿಂದ ಸಿಟಿಒ ಜಂಕ್ಷನ್‌ವರೆಗೆ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಲೋಕಭವನ್ ರಸ್ತೆ, ಟಿ. ಚೌಡಯ್ಯ ರಸ್ತೆ ಮತ್ತು ರೇಸ್‌ಕೋರ್ಸ್ ರಸ್ತೆಯಲ್ಲೂ ಪಾರ್ಕಿಂಗ್ ನಿಷೇಧಿಸಲಾಗಿದೆ.

ಕಬ್ಬನ್‌ ಪಾರ್ಕ್‌ನ ಕಿಂಗ್‌ ಸರ್ಕಲ್‌ ಹಾಗೂ ಪ್ರೆಸ್‌ ಕ್ಲಬ್‌ ಮುಂಭಾಗದಲ್ಲಿಯೂ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.

ವಾಹನ ನಿಲುಗಡೆಗೆ ನಿಗದಿತ ಸ್ಥಳಗಳು

  • ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಪಾರ್ಕಿಂಗ್‌ ಪ್ರದೇಶ

  • ಫ್ರೀಡಂ ಪಾರ್ಕ್‌ ಬಹುಮಹಡಿ ಪಾರ್ಕಿಂಗ್‌

  • ಕಂಠೀರವ ಕ್ರೀಡಾಂಗಣ

  • ಜ್ಞಾನಜ್ಯೋತಿ ಸಭಾಂಗಣದ ಸಮೀಪದ ವಿಶ್ವವಿದ್ಯಾಲಯ ಪಾರ್ಕಿಂಗ್‌ ಪ್ರದೇಶ

  • ಸರ್ಕಾರಿ ಕಲಾ ಕಾಲೇಜು ಪಾರ್ಕಿಂಗ್‌ ಪ್ರದೇಶ

  • ಯುಬಿ ಸಿಟಿ

  • ಶಿವಾಜಿನಗರ ಬಹುಮಹಡಿ ಪಾರ್ಕಿಂಗ್‌

  • ನೆಹರು ತಾರಾಲಯ

  • ಸೇಂಟ್‌ ಜೋಸೆಫ್‌ ಹೈಸ್ಕೂಲ್‌ ಮೈದಾನ

  • ಲಿಂಕ್‌ ರಸ್ತೆ (ಚಿನ್ನಸ್ವಾಮಿ ಕ್ರೀಡಾಂಗಣ)ದಲ್ಲಿ ವಾಹನ ನಿಲುಗಡೆ ಮಾಡಬಹುದು.

ಕ್ಯಾಬ್‌ಗಳಿಗೆ ಪಿಕ್‌ಅಪ್‌ ಮತ್ತು ಡ್ರಾಪ್‌ ಪಾಯಿಂಟ್‌

ಕ್ಯಾಬ್‌ಗಳ ಪಿಕ್‌ಅಪ್‌ಗಾಗಿ ಸಿಟಿಒ ಜಂಕ್ಷನ್‌ ಹಾಗೂ ಕೆ.ಆರ್. ವೃತ್ತವನ್ನು ನಿಗದಿಪಡಿಸಲಾಗಿದೆ. ಡ್ರಾಪ್‌ ಮಾಡಲು ಕಬ್ಬನ್‌ ಪಾರ್ಕ್‌ ಮೆಟ್ರೋ ಹಾಗೂ ಕೆ.ಆರ್. ವೃತ್ತವನ್ನು ಬಳಸಬಹುದು.

ಬಿಎಂಟಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ

ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ಸಂಚರಿಸಲಿದೆ. ಎಂ.ಎಸ್. ಬಿಲ್ಡಿಂಗ್‌ ಒಳಭಾಗದ ದೇವರಾಜ ಅರಸು ರಸ್ತೆಯಿಂದ ಹೊರಡುವ ಬಸ್‌ಗಳು ಟೌನ್‌ಹಾಲ್‌, ಸಿಟಿ ಮಾರ್ಕೆಟ್‌, ಮೈಸೂರು ರಸ್ತೆ ಸ್ಯಾಟಲೈಟ್‌, ಶೇಷಾದ್ರಿಪುರಂ, ಲುಲು ಮಾಲ್‌, ಮಾಗಡಿ ರಸ್ತೆ, ಸುಮನಹಳ್ಳಿ, ಶಾಂತಿನಗರ, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಲಾಲ್‌ಬಾಗ್‌ ರಸ್ತೆ, ಬನಶಂಕರಿ ರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ನವರಂಗ್‌ ಥಿಯೇಟರ್‌, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಶಂಕರಮಠ ಹಾಗೂ ಬಸವೇಶ್ವರನಗರ ಮಾರ್ಗಗಳಲ್ಲಿ ಸಂಚರಿಸಲಿವೆ.

ಸಿಟಿಒ ಜಂಕ್ಷನ್‌ (ಬಿಆರ್‌ವಿ ರಸ್ತೆ)ಯಿಂದ ಹೊರಡುವ ಬಸ್‌ಗಳು ಮಣಿಪಾಲ್‌ ಸೆಂಟರ್‌, ಓಲ್ಡ್‌ ಮದ್ರಾಸ್‌ ರಸ್ತೆ, ಕೆ.ಆರ್. ಪುರಂ, ಟ್ರಿನಿಟಿ ಜಂಕ್ಷನ್‌, ಓಲ್ಡ್‌ ಏರ್‌ಪೋರ್ಟ್‌ ರಸ್ತೆ, ಮಾರತ್‌ಹಳ್ಳಿ, ವೈಟ್‌ಫೀಲ್ಡ್‌, ಕಂಟೋನ್ಮೆಂಟ್‌, ಟ್ಯಾನರಿ ರಸ್ತೆ, ನಾಗವಾರ, ಮೇಖ್ರಿ ವೃತ್ತ, ಸದಾಶಿವನಗರ, ಯಶವಂತಪುರ ಹಾಗೂ ಮಾದಾವರ ಮಾರ್ಗಗಳಲ್ಲಿ ಸಂಚರಿಸಲಿವೆ.

ಉತ್ತರಾಖಂಡ: ಚಮೋಲಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ-Video

Iran ಮುಗಿಸಲು ಅಮೆರಿಕ ಮಾಸ್ಟರ್ ಪ್ಲ್ಯಾನ್: ಜಾಗತಿಕ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭೀಕರ 'ಆರ್ಥಿಕ ಯುದ್ಧ' ಘೋಷಣೆ!

'ಸಮಯವಿಲ್ಲ, ವಿಜಯನಗರ ಜಿಲ್ಲಾ ಉಸ್ತುವಾರಿ ಹೊಣೆ, ಧ್ವಜಾರೋಹಣ ನನಗೆ ಬೇಡ': ಜಮೀರ್ ಅಹ್ಮದ್ ಸಿಎಂಗೆ ಪತ್ರ

ಸ್ವಾತಂತ್ರ್ಯೋತ್ಸವಕ್ಕೆ ಸಿಲಿಕಾನ್ ಸಿಟಿ ಸಜ್ಜು: ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’ಕ್ಕೆ ಭರದ ಸಿದ್ಧತೆ, 18 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ..!

ದೇಶ ವಿಭಜನೆಯ ಸಂತ್ರಸ್ತರನ್ನು ಸ್ಮರಿಸಿದ ಪ್ರಧಾನಿ ಮೋದಿ; ಸಾಮರಸ್ಯ, ಸಹೋದರತ್ವಕ್ಕೆ ಕರೆ