ಡಿಕೆ ಶಿವಕುಮಾರ್ - ರವಿಚಂದ್ರನ್ 
ರಾಜ್ಯ

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ 'ಕ್ರೇಜಿ ಸ್ಟಾರ್' ಎಂಟ್ರಿ ಸಾಧ್ಯತೆ

ಇತ್ತೀಚಿಗಷ್ಟೇ ನಟ ರವಿಚಂದ್ರನ್‌ ಅವರು ತಮ್ಮ ಬಾಲ್ಯದ ಸ್ನೇಹಿತ, ಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದರು. ಈ ವಿಚಾರ ರಾಜ್ಯದ ಜನರ ಗಮನ ಸೆಳೆದಿತ್ತು.

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಾಲ್ಯದ ಸ್ನೇಹಿತ, ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಅವರನ್ನು ಕಾಂಗ್ರೆಸ್, ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.

ಇತ್ತೀಚಿಗಷ್ಟೇ ನಟ ರವಿಚಂದ್ರನ್‌ ಅವರು ತಮ್ಮ ಬಾಲ್ಯದ ಸ್ನೇಹಿತ, ಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದರು. ಈ ವಿಚಾರ ರಾಜ್ಯದ ಜನರ ಗಮನ ಸೆಳೆದಿತ್ತು. ಅಲ್ಲದೆ, ಈ ಭೇಟಿಯ ಹಿಂದಿನ ಉದ್ದೇಶವೇನು ಎಂದು ನಟನ ಅಭಿಮಾನಿಗಳೂ ಸಹ ತಲೆ ಕೆಡಿಸಿಕೊಂಡಿದ್ದರು. ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ರಾಜಕೀಯ ಅಖಾಡ ಪ್ರವೇಶಿಸುತ್ತಿರುವ ವಿಚಾರ ಬಹಿರಂಗವಾಗಿದೆ.

ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಪಾರ ಕೊಡುಗೆ ನೀಡಿರುವ ರವಿಚಂದ್ರನ್ ಅವರ ಕಲಾ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಸರ್ಕಾರ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಲು ನಿರ್ಧರಸಿದೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ಅವರ ಕ್ಲಾಸ್‌ಮೇಟ್ ಆಗಿರುವ ರವಿಚಂದ್ರನ್ ಅವರ ಹೆಸರನ್ನು ಸಾಂಸ್ಕೃತಿಕ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್‌ ಗ್ರೀನ್ ಸಿಗ್ನಲ್ ನೀಡಿದ್ದು, , ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೈಟ್​ಫೀಲ್ಡ್ ಠಾಣೆಯಲ್ಲ 'ಡಾರ್ಕ್' ಫೀಲ್ಡ್ ಠಾಣೆ: ಕಾನೂನು ಬಾಹಿರವಾಗಿ ವ್ಯಕ್ತಿ ಬಂಧನ ಸಂಬಂಧ ACP, DCP ವಿರುದ್ದ ಜಡ್ಜ್ ಗರಂ, Video!

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ! ಆರ್. ಅಶ್ವಿನ್ ಆಯ್ಕೆ ಮಾಡಿದ್ದು ಯಾರನ್ನ ಗೊತ್ತಾ?

ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್; Cloud seeding ಗೆ ಎರಡು ಸಮಿತಿಗಳ ರಚನೆ

ಹೈಕೋರ್ಟ್ ಆದೇಶ ಉಲ್ಲಂಘನೆ: ಮಮತಾ ವಿರುದ್ಧ ಸ್ವಯಂಪ್ರೇರಿತವಾಗಿ FIR ದಾಖಲಿಸಿದ ಪೊಲೀಸರು; ಮಾಜಿ CMಗೆ ಬಿಗ್ ಶಾಕ್!

ಮನುಕುಲಕ್ಕೆ ಎಚ್ಚರಿಕೆಗಾಗಿ ಟೈಮ್ ಟ್ರಾವಲ್! 2022 ರಲ್ಲಿ ಬಂದ ChatGPT ಬಳಸದಂತೆ 2012 ರಲ್ಲೇ ಜನರಿಗೆ ಕರೆ ನೀಡಿದ್ದ ಪೋಸ್ಟ್ ವೈರಲ್!