ಆರೋಪಿ ಅಕ್ಷಯ್ ಹಾಗೂ ಎಸ್ ಪಿ ಜಾಹ್ನವಿ ಚಿತ್ರ 
ರಾಜ್ಯ

ಕೊಟ್ಟೂರು 'ತ್ರಿವಳಿ ಮರ್ಡರ್' ಕೇಸ್ ಗೆ ಬಿಗ್ ಟ್ವಿಸ್ಟ್!

ಮೊದಲಿಗೆ ತಂಗಿ ಅಂತರ್ಜಾತಿಯ ಹುಡುಗನೊಂದಿಗೆ ಸಂಬಂಧ ಬೆಳೆಸಿ ಮೂರು ತಿಂಗಳ ಗರ್ಭಿಣಿ ಆಗಿದ್ದರಿಂದ ಮಾರ್ಯಾದೆಗೆ ಅಂಜಿ ಗರ್ಭಪಾತ ಮಾಡಿಸಲು ಆರೋಪಿ ಅಕ್ಷಯ್ ಒತ್ತಡ ಹಾಕಿದ್ದ ಎನ್ನಲಾಗಿತ್ತು.

ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಮಗನಿಂದಲೇ ತಂದೆ, ತಾಯಿ ಹಾಗೂ ತಂಗಿಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಂತಕ ಅಕ್ಷಯ್ ಕಳ್ಳಾಟದ ಮೂಲಕ ತನಿಖೆ ದಿಕ್ಕನ್ನು ತಪ್ಪಿಸಲು ಯತ್ನಿಸಿರುವುದು ಬಯಲಾಗಿದೆ.

ಮೊದಲಿಗೆ ತಂಗಿ ಅಂತರ್ಜಾತಿಯ ಹುಡುಗನೊಂದಿಗೆ ಸಂಬಂಧ ಬೆಳೆಸಿ ಮೂರು ತಿಂಗಳ ಗರ್ಭಿಣಿ ಆಗಿದ್ದರಿಂದ ಮಾರ್ಯಾದೆಗೆ ಅಂಜಿ ಗರ್ಭಪಾತ ಮಾಡಿಸಲು ಒತ್ತಡ ಹಾಕಿದ್ದ. ಆದರೆ, ಇದಕ್ಕೆ ಪೋಷಕರು ಒಪ್ಪದಿದ್ದಾಗ ಮೂವರನ್ನು ಕೊಲೆ ಮಾಡಿ ದೃಶ್ಯಂ ಸಿನಿಮಾ ಸ್ಟೈಲಿನಲ್ಲಿ ಮನೆಯ ಹಾಲ್ ನಲ್ಲಿ ಗುಂಡಿ ತೋಡಿ ಹೂತ್ತಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿತ್ತು. ಆದರೆ ಇದೀಗ ಹಣದ ವಿಚಾರಕ್ಕಾಗಿ ಕೊಲೆಯಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಪೊಲೀಸರ ತನಿಖೆ ವೇಳೆ ಆರೋಪಿ ಅಕ್ಷಯ್​ ಸಾಕಷ್ಟು ಸುಳ್ಳು ಹೇಳಿರೋದು ಬಯಲಾಗಿದೆ. ಬರೋಬ್ಬರಿ 1.20 ಕೋಟಿ ಎಫ್ ಡಿ ಹಣದ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಆರೋಪಿ ಅಕ್ಷಯ್​, ತಂಗಿ ವಿಚಾರಕ್ಕೆ ತಂದೆ ತಾಯಿ ಜೊತೆಗೆ ಜಗಳ ಮಾಡಿರಲಿಲ್ಲ. ಬದಲಿಗೆ ಬ್ಯಾಂಕ್​ನಲ್ಲಿ ತಂದೆ ಇಟ್ಟಿದ್ದ ಬರೋಬ್ಬರಿ 1.20 ಕೋಟಿ ಎಫ್ ಡಿ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು, ಮೂವರನ್ನು ಕೊಂದಿದ್ದಾನೆ ಎನ್ನುವುದು ತಿಳಿದುಬಂದಿದೆ.

ಕುಡಿತದ ಚಟಕ್ಕೆ ಬಿದ್ದಿದ್ದ ಹಂತಕ ಅಕ್ಷಯ್​​, ಹಣಕಾಸಿನ ವಿಚಾರಕ್ಕೆ ಮಾತ್ರವಲ್ಲದೇ ತಂಗಿಯ ಹೆಸರಲ್ಲಿ ತಂದೆ ಎಫ್​ಡಿ ಇಟ್ಟಿದ್ದ ಹಣದ ಬಗ್ಗೆಯೂ ಮನಸ್ತಾಪ ಹೊಂದಿದ್ದ ಎನ್ನಲಾಗಿದೆ. ಮಗಳ ವಿದ್ಯಾಭ್ಯಾಸಕ್ಕೆಂದೇ ಅಕ್ಷಯ್​​ ತಂದೆ ಐವತ್ತು ಲಕ್ಷ ಹಣ ಎಫ್​ಡಿ ಮಾಡಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

ಇದೇ ಹಣದ ವಿಚಾರದ ಬಗ್ಗೆ ಅಕ್ಷಯ್​ ಮಾವನ ಬಳಿ ಚರ್ಚೆ ಮಾಡಿದ್ದನು. ಹೆಚ್ಚು ಹಣದಾಸೆಗೆ ಅಳಿಯ ಅಕ್ಷಯ್​ಗೆ ಮಾವ ವಸಂತನೇ ಕೊಲೆಯ ಐಡಿಯಾ ಕೊಟ್ಟಿದ್ದಾನೆ ಎನ್ನಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಎಲ್ಲಾ ಆಯಾಮದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಂಗಿಯ ಪ್ರಿಯಕರನನ್ನೂ ಕೊಲೆ ಮಾಡಿರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

ವಿವಾದದ ನಡುವೆ ಮೈಸೂರಿನ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

SCROLL FOR NEXT