ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

Bengaluru: 'ಮನೆಗೆ ಸೂರ್ಯನ ಬೆಳಕು ಬರುತ್ತದೆ' ಎಂಬ ಒಂದೇ ಕಾರಣಕ್ಕೆ 80 ಸಾವಿರ ಬಾಡಿಗೆ ಕೇಳಿದ ಮಾಲೀಕ!

ಕೋವಿಡ್ ಸಾಂಕ್ರಾಮಿಕದ ಬಳಿಕ ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿ ಬೆಲೆಗಳು ಆಗಸಕ್ಕೇರುತ್ತಿದ್ದು, ಇಲ್ಲಿ ಬದುಕು ನಡೆಸುವುದೂ ಕೂಡ ದುಬಾರಿಯಾಗುತ್ತಿದೆ.

ಬಾಡಿಗೆ ಮನೆ
Srinivasa Murthy VN
Updated On : 16 Feb 2026, 8:32 am

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಮನೆ ಮಾಲೀಕರೊಬ್ಬರು ಮನೆಗೆ ಸೂರ್ಯನ ಬೆಳಕು ಬರುತ್ತದೆ ಎಂಬ ಒಂದೇ ಕಾರಣಕ್ಕೆ 80 ಸಾವಿರ ಬಾಡಿಗೆ ಕೇಳಿದ ವಿಚಿತ್ರ ಘಟನೆ ವರದಿಯಾಗಿದೆ.

ಹೌದು.. ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಭಾರಿ ದುಬಾರಿಯಾಗುತ್ತಿದ್ದು, ಅದರಲ್ಲೂ ಮನೆ ಬಾಡಿಗೆ ಗಗನಕ್ಕೇರುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿ ಬೆಲೆಗಳು ಆಗಸಕ್ಕೇರುತ್ತಿದ್ದು, ಇಲ್ಲಿ ಬದುಕು ನಡೆಸುವುದೂ ಕೂಡ ದುಬಾರಿಯಾಗುತ್ತಿದೆ.

ಈ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದ್ದು, ಬೆಂಗಳೂರಿನ HSR ಬಡಾವಣೆಯ ಮನೆ ಮಾಲೀಕರೊಬ್ಬರು ಮನೆಗೆ ಗಾಳಿ ಸೂರ್ಯನ ಬೆಳಕು ಚೆನ್ನಾಗಿ ಬರುತ್ತದೆ ಎಂಬ ಒಂದೇ ಕಾರಣಕ್ಕೆ ಮನೆಗೆ ಬರೊಬ್ಬರಿ 80 ಸಾವಿರ ರೂ ಬಾಡಿಗೆ ಕೇಳಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.

Advertisement

Advertisement

ಅನು ಎಂಬುವವರು ತಮ್ಮ X ಖಾತೆಯಲ್ಲಿ ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅವರು ಮನೆ ಮಾಲೀಕರ ಅತಿಯಾದ ಬೆಲೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ಬೆಳಕಿನಂತಹ ಸರಳ ವೈಶಿಷ್ಟ್ಯದಿಂದಾಗಿ ಬಾಡಿಗೆಗಳು ತುಂಬಾ ಹೆಚ್ಚಾಗುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.

Also Read

ಮನೆ ಬಾಡಿಗೆ 1.25 ಲಕ್ಷ, ಮನೆ ಕೆಲಸದಾಕೆ ಸಂಬಳವೇ 45 ಸಾವಿರ ರೂ: ರಷ್ಯಾ ಮಹಿಳೆಯ ಬೆಂಗಳೂರು ಲೈಫ್; ಲೆಕ್ಕಾಚಾರ ವೈರಲ್!

ಬೆಂಗಳೂರಿನ ಬಾಡಿಗೆಗಳು ಪ್ರತಿ ಬಾರಿಯೂ ತಮ್ಮನ್ನು ಆಶ್ಚರ್ಯಗೊಳಿಸುತ್ತದೆ ಎಂದು ಅನು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದು, ಕೋಣೆಗೆ ಸೂರ್ಯನ ಬೆಳಕು ಸಿಗುತ್ತದೆ. ಇದೇ ಕಾರಣಕ್ಕೆ ಬಾಡಿಗೆಯನ್ನು 80,000 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಆರಂಭದಲ್ಲಿ ಇದನ್ನು ನನಗೆ ನಂಬಲಾಗಲಿಲ್ಲ. ಬಳಿಕ ಸೂರ್ಯನ ಬೆಳಕಿನಂತಹ ಸರಳ ವೈಶಿಷ್ಟ್ಯವನ್ನೂ ಸಹ "ಹೆಚ್ಚುವರಿ" ಎಂದು ಪರಿಗಣಿಸಿ ಹೆಚ್ಚಿನ ಬೆಲೆಗೆ ನೀಡಲಾಗುತ್ತಿದೆ ಎಂದು ತಿಳಿದು ಆಘಾತವಾಯಿತು ಎಂದು ಹೇಳಿಕೊಂಡಿದ್ದಾರೆ.

ಅಂತೆಯೇ ಈ ಮೊತ್ತ ದುಬಾರಿಯಾಗಿದ್ದು, ಜನರು ಸಾಮಾನ್ಯವಾಗಿ ಮನೆಯಲ್ಲಿ ನಿರೀಕ್ಷಿಸುವ ಸೌಲಭ್ಯಗಳನ್ನು ಈಗ ನಗರದ ಬಾಡಿಗೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ಎಂದು ನೋಡಲಾಗುತ್ತಿದೆ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ವ್ಯಾಪಕ ವೈರಲ್ ಆಗಿದ್ದು, ನಗರದಲ್ಲಿ ಮನೆ ಬಾಡಿಗೆ ಎಷ್ಟು ದುಬಾರಿಯಾಗಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ.

ಪೋಸ್ಟ್ ವೈರಲ್

ಅವರ ಪೋಸ್ಟ್ ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತಕ್ಕೊಳಗಾಗಿದ್ದು, 'ಒಬ್ಬ ಬಳಕೆದಾರರು "ಬಾಡಿಗೆ ಪಾವತಿಸುವ ಬದಲು ಇಎಂಐಗೆ 80,000 ನೀಡುವುದು ಉತ್ತಮ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು "ನನಗೆ ಮುಂಬೈನಂತೆ ತೋರುತ್ತದೆ" ಎಂದು ಹೇಳಿದ್ದಾರೆ. "ಸೂರ್ಯನ ಬೆಳಕೂ ಕೂಡ ಈಗ ಪ್ರೀಮಿಯಂ ಸೌಲಭ್ಯವಾಗಿದೆ" ಎಂದು ಮೂರನೇ ಬಳಕೆದಾರರು ಸೇರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments