ತೇಜಸ್ವಿ ಸೂರ್ಯ-ಸರ್ಜಿಯೋ ಗೋರ್ ಹೊಟೇಲ್ ನಲ್ಲಿ  
ರಾಜ್ಯ

Bengaluru: ಅಮೆರಿಕ ರಾಯಭಾರಿ ಸರ್ಜಿಯೊ ಗೋರ್-ಸಿಎಂ ಭೇಟಿ; ಸಂಸದ ತೇಜಸ್ವಿ ಜೊತೆ ದೋಸೆ-ಕಾಫಿ ಸವಿದು ಆಟೋ ಪ್ರಯಾಣ; Video

ಭಾರತ-ಅಮೆರಿಕ ತಾತ್ಕಾಲಿಕ ವ್ಯಾಪಾರ ಒಪ್ಪಂದ, ಬೆಂಗಳೂರು ನಗರ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು.

ಭಾರತದಲ್ಲಿನ ಅಮೆರಿಕನ್ ರಾಯಭಾರಿ ಸರ್ಜಿಯೊ ಗೋರ್ ಇoದು ಮುಖ್ಯಮoತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸೌಹಾರ್ದ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಭಾರತ-ಅಮೆರಿಕ ತಾತ್ಕಾಲಿಕ ವ್ಯಾಪಾರ ಒಪ್ಪಂದ, ಬೆಂಗಳೂರು ನಗರ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು.

ನಿನ್ನೆ ಸಂಜೆ ಅಮೆರಿಕದ ಭಾರತ ರಾಯಭಾರಿ ಸರ್ಜಿಯೋ ಗೋರ್ ಅವರು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಜನಪ್ರಿಯ ಇಡ್ಲಿ-ದೋಸೆ ರುಚಿ ಸವಿಯುತ್ತಾ ಭಾರತ–ಅಮೆರಿಕ ಸಂಬಂಧಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.

ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡ ತೇಜಸ್ವಿ ಸೂರ್ಯ, ಕರ್ನಾಟಕದ ರಾಜಧಾನಿಗೆ ರಾಯಭಾರಿಯನ್ನು ಸ್ವಾಗತಿಸಿ, ಇಂದಿರಾನಗರದಲ್ಲಿ ಮಸಾಲೆ ದೋಸೆ ಮತ್ತು ಗಟ್ಟಿಯಾದ ಫಿಲ್ಟರ್ ಕಾಫಿ ಜೊತೆಗೆ ಆತಿಥ್ಯ ನೀಡಿದ್ದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಅಂತಿಮಗೊಂಡಿರುವ ಭಾರತ-ಅಮೆರಿಕ ತಾತ್ಕಾಲಿಕ ವಾಣಿಜ್ಯ ಒಪ್ಪಂದದ ಹಿನ್ನೆಲೆದಲ್ಲಿ, ವ್ಯಾಪಾರ, ತಂತ್ರಜ್ಞಾನ ಮತ್ತು ನವೋದ್ಯಮ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ಅವರು ತಮ್ಮ ಪೋಸ್ಟ್‌ನಲ್ಲಿ, ಭಾರತ–ಅಮೆರಿಕ ಸಹಭಾಗಿತ್ವದ ಬೆಳವಣಿಗೆ, ವಿಶೇಷವಾಗಿ ವ್ಯಾಪಾರ, ತಂತ್ರಜ್ಞಾನ ಮತ್ತು ನವೀನತೆ ಕ್ಷೇತ್ರಗಳಲ್ಲಿ, ಉತ್ತಮ ಸಂವಾದ ನಡೆಯಿತು ಎಂದು ಉಲ್ಲೇಖಿಸಿದರು. ಜೊತೆಗೆ, ರಾಯಭಾರಿಗೆ “ನಮ್ಮ ಆಟೋ” ಪ್ರಯಾಣದ ಅನುಭವವನ್ನು ಪರಿಚಯಿಸಿದ್ದು, ಅದನ್ನು “ಮರೆಯಲಾಗದ ಪ್ರಯಾಣ” ಎಂದು ವರ್ಣಿಸಿದರು ಎಂದು ಬರೆದಿದ್ದಾರೆ.

‘ಭಾರತದ ಅತ್ಯಂತ ವೇಗದ ಪ್ರಮುಖ ಘಟನಾವಳಿಗಳ ನಗರ’

ತೇಜಸ್ವಿ ಸೂರ್ಯ ಹಂಚಿಕೊಂಡ ವಿಡಿಯೊದಲ್ಲಿ ಇಬ್ಬರೂ ಆಟೋ ರಿಕ್ಷಾದಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸುತ್ತಿರುವುದು ಕಾಣಿಸುತ್ತದೆ. ಒಂದು ಕ್ಷಣದಲ್ಲಿ ಸರ್ಜಿಯೋ ಗೋರ್ ಅವರು ತಮ್ಮ ಮೊಬೈಲ್‌ನಲ್ಲಿ ರಸ್ತೆ ದೃಶ್ಯಗಳನ್ನು ವಿಡಿಯೊ ಮಾಡುತ್ತಿರುವುದು ಕೂಡ ಕಂಡುಬರುತ್ತದೆ.

ವೀಡಿಯೊದಲ್ಲಿ, ತೇಜಸ್ವಿ ಸೂರ್ಯ ಬೆಂಗಳೂರನ್ನು “ಭಾರತದ ಅತ್ಯುತ್ತಮ ನಗರ” ಮತ್ತು “Most happening city” ಎಂದು ಪರಿಚಯಿಸಿ, ಭಾರತ–ಅಮೆರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ರಾಯಭಾರಿಯ ಪಾತ್ರಕ್ಕೆ ಧನ್ಯವಾದ ತಿಳಿಸಿದ್ದಾರೆ. ಮೊದಲ ಬಾರಿಗೆ ಬೆಂಗಳೂರಿಗೆ ಬಂದಿರುವ ಸರ್ಜಿಯೋ ಗೋರ್ ಅವರು, ತೇಜಸ್ವಿ ಸೂರ್ಯ ಅವರನ್ನು “ಅದ್ಭುತ ಆತಿಥೇಯ” ಎಂದು ಪ್ರಶಂಸಿಸಿದರು. ರಾತ್ರಿ ಆಟೋ ಪ್ರಯಾಣವೇ ನಿಜವಾದ ಬೆಂಗಳೂರು ಅನುಭವ ಎಂದು ಹೇಳಿ, ಬೆಂಗಳೂರನ್ನು ಭಾರತ–ಅಮೆರಿಕ ಸಹಭಾಗಿತ್ವದ “ಕಿರೀಟ ರತ್ನ” ಎಂದು ವರ್ಣಿಸಿದರು.

ವ್ಯಾಪಾರ ಮತ್ತು ತಂತ್ರಜ್ಞಾನಕ್ಕೆ ಒತ್ತು

ಸರ್ಜಿಯೋ ಗೋರ್ ಅವರು ತಮ್ಮ ಪೋಸ್ಟ್‌ನಲ್ಲಿ, ಬೆಂಗಳೂರಿಗೆ ಇತ್ತೀಚೆಗಷ್ಟೇ ಆಗಮಿಸಿರುವುದಾಗಿ ತಿಳಿಸಿ, ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ರಸ್ತೆ ಆಹಾರವರೆಗಿನ ನಗರದ ವೇಗ, ಉತ್ಸಾಹವನ್ನು ಪ್ರಶಂಸಿಸಿದರು ಮತ್ತು ಆತಿಥ್ಯಕ್ಕಾಗಿ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ ಹೇಳಿದರು.

ಬೆಂಗಳೂರು ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದ ಸಾಫ್ಟ್‌ವೇರ್ ರಫ್ತುಗಳಲ್ಲಿ ಶೇ43ರಷ್ಟು ಕೊಡುಗೆ ನೀಡುತ್ತಿದೆ. ಜೊತೆಗೆ ದೇಶದ ಜಿಸಿಸಿಗಳ (Global Capability Centres) ಶೇ40ರಷ್ಟು ಕೇಂದ್ರಗಳು ಬೆಂಗಳೂರಿನಲ್ಲಿದ್ದು, ಭಾರತ–ಅಮೆರಿಕಾ ನೂತನ ಸಹಭಾಗಿತ್ವದ ಮುಂದಾಳತ್ವವನ್ನು ನಮ್ಮ ಬೆಂಗಳೂರು ವಹಿಸಿಕೊಂಡಿದೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

'ಅವರು ರಕ್ತದ ರುಚಿ ನೋಡಿದ್ದಾರೆ': PCB ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಪಾಕ್ ಮಾಜಿ ಪ್ರಧಾನಿ ಸೋದರಿಯರ ಗಂಭೀರ ಆರೋಪ

T20 World Cup 2026: ಭಾರತದ ವಿರುದ್ಧ ಪಂದ್ಯ ಆಡಲು 'Actual Hero' ಕಾರಣ; ವರಸೆ ಬದಲಿಸಿದ ಪಾಕಿಸ್ತಾನ!

ಜೇವರ್ಗಿ-ಬಳ್ಳಾರಿ ಮಾರ್ಗ ಸೇರಿ ರಾಜ್ಯದ 6 ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಅನುಮೋದನೆ

SCROLL FOR NEXT