ಶಾಸಕಿ ನಯನಾ ಮೋಟಮ್ಮ 
ರಾಜ್ಯ

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರಿಗೂ ಇಂತಹ ಅಶ್ಲೀಲ ಕಾಮೆಂಟ್ ಗಳ ಪೋಸ್ಟ್ ಹೆಚ್ಚಾಗುತ್ತಿದೆಯಂತೆ. ಈ ಕುರಿತು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗೆ ಅಶ್ಲೀಲ ಕಾಮೆಂಟ್ ಕಾಟ ಹೆಚ್ಚಾಗುತ್ತಿದೆ. ಇತ್ತೀಚಿಗೆ ಇಂತಹ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ನಟಿ ರಮ್ಯಾ, ವಿಜಯಲಕ್ಷ್ಮಿ ದರ್ಶನ್ ಹಾಗೂ ಸಿಡಿದೆದ್ದಿದ್ದರು. ಅಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಜೈಲಿಗಟ್ಟಿದ್ದರು. ಇದೀಗ ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರಿಗೂ ಇಂತಹ ಅಶ್ಲೀಲ ಕಾಮೆಂಟ್ ಗಳ ಪೋಸ್ಟ್ ಹೆಚ್ಚಾಗುತ್ತಿದೆಯಂತೆ. ಈ ಕುರಿತು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಮಾಜದ ಮಹಿಳಾ ವಿರೋಧಿ ಮನೋಭಾವದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. 'ನಾವು ಸ್ಲೀವ್‌ಲೆಸ್‌ ಬಟ್ಟೆ, ಜೀನ್ಸ್ ಅಥವಾ ಪ್ಯಾಂಟ್ ಧರಿಸಿದರೆ ನಮ್ಮನ್ನು 'ಕೆಲಸ ಮಾಡದ ರಾಜಕಾರಣಿ' ಎಂದು ಕರೆಯುತ್ತಾರೆ. ನಮ್ಮ ಉಡುಪಿನ ಆಧಾರದ ಮೇಲೆ ನಮ್ಮ ಕೆಲಸವನ್ನು ಅಳೆಯುತ್ತಾರೆ. ಆದರೆ ಇದೇ ಪ್ರಶ್ನೆಯನ್ನು ಪುರುಷ ರಾಜಕಾರಣಿಗಳಿಗೆ ಯಾರೂ ಕೇಳುವುದಿಲ್ಲವೇಕೆ?' ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.

ತಮ್ಮನ್ನು ನಿಂದಿಸುವವರ ಪ್ರೊಫೈಲ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶಾಸಕಿ, 'ಕಾಮೆಂಟ್ ಮಾಡುವ ಬಹುತೇಕರಿಗೆ ಪ್ರೊಫೈಲ್ ಚಿತ್ರವೇ ಇಲ್ಲ (DP Less Profile). ಇನ್ನೂ ಕೆಲವರ ಖಾತೆಯಲ್ಲಿ ಒಂದೂ ಪೋಸ್ಟ್ ಇಲ್ಲ. ಇವರೆಲ್ಲರೂ ಅನಾಮಧೇಯರಾಗಿ ಬಂದು ಮಹಿಳೆಯರ ಮೇಲೆ ದಾಳಿ ಮಾಡುತ್ತಾರೆ. ಬಹುಶಃ ಒಂದು ದಿನ ನಾನು ಇವರನ್ನೆಲ್ಲ ನೇರವಾಗಿ ಎದುರಿಸುತ್ತೇನೆ'. ಆದರೆ ಸದ್ಯಕ್ಕೆ ಈ ಮಹಿಳಾ ವಿರೋಧಿ ಮನೋಭಾವವನ್ನಷ್ಟೇ ಪ್ರಶ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ಇತ್ತೀಚಿನ ಒಂದು ಘಟನೆಯನ್ನು ನೆನಪಿಸಿಕೊಂಡಿರುವ ಅವರು, 'ವಿಮಾನ ನಿಲ್ದಾಣದಲ್ಲಿ ಮಹಿಳಾ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿದರು. ಅವರು ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಅನುಸರಿಸುತ್ತಿರುವುದಾಗಿ ಮತ್ತು ಮೌನವಾಗಿ ನನಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು. ಇದು ನನಗೆ ಬಹಳ ಆತ್ಮವಿಶ್ವಾಸ ನೀಡಿದೆ ಎಂದಿದ್ದಾರೆ.

ಜೀವನವನ್ನು ತಮ್ಮದೇ ಷರತ್ತಿನ ಮೇಲೆ ಬದುಕಲು ಬಯಸುವ ಸಾವಿರಾರು ಮಹಿಳೆಯರಿಗಾಗಿ ನಾನು ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳ ಕುರಿತು ಕೆಲವೊಮ್ಮೆ ನೆಗೆಟಿವ್ ಪ್ರತಿಕ್ರಿಯೆಗಳು ಬರುತ್ತವೆ. ಅವು ಕೆಲ ಕ್ಷಣಗಳಲ್ಲಿ ಮನಸ್ಸನ್ನು ಕುಗ್ಗಿಸಬಹುದು. ಆದರೂ ಇತರರಿಗಾಗಿ ನಾನು ಮುಂದುವರೆದು ನಿಲ್ಲಬೇಕೆಂಬ ಜವಾಬ್ದಾರಿಯ ಅರಿವು ನನಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ

'ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಬಗ್ಗೆ ಭಾರತದ ಮೌನ ಅರ್ಥವೇ ಆಗುತ್ತಿಲ್ಲ; ದೇಶದ ಪರವಾಗಿ ನಿಂತಿದ್ದು ಇದೇ ಟೆಹ್ರಾನ್!'

ತಪ್ಪಿದ ಲಿಫ್ಟ್ ದುರಂತ: ಹೊರಬರುವಾಗ ದಿಢೀರ್ ಚಾಲನೆ, ಕೆಳಗೆ ಬಿದ್ದ ವ್ಯಕ್ತಿ! Video ವೈರಲ್!

ಇರಾನ್-ಇಸ್ರೇಲ್ ಸಂಘರ್ಷದ ಎಫೆಕ್ಟ್: LNG ಉತ್ಪಾದನೆ ಸ್ಥಗಿತಗೊಳಿಸಿದ ಕತಾರ್; ಭಾರತಕ್ಕೆ ಪೂರೈಕೆಯಲ್ಲಿ ವ್ಯತ್ಯಯ

ಕಾಶ್ಮೀರ: ಪೂಂಚ್‌ನ ಭಿಂಬರ್ ಗಲಿ ಸೆಕ್ಟರ್‌ನಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

SCROLL FOR NEXT