ಸಿಜೆ ರಾಯ್, ಪ್ರದೀಪ್ ಈಶ್ವರ್ 
ರಾಜ್ಯ

ಸಿಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ ಅಥವಾ ಶೂಟ್ ಮಾಡಿದ್ರಾ? ಪ್ರದೀಪ್ ಈಶ್ವರ್ ಅನುಮಾನ!

ಅಧಿಕಾರಿಗಳನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಅಲ್ಲದೇ ಯಾವುದೇ ಸಿಸಿಟಿವಿ ಕ್ಯಾಮರಾಗಳಲ್ಲಿ ಶೂಟೌಟ್ ದೃಶ್ಯಾವಳಿಗಳು ಸೆರೆಯಾಗಿಲ್ಲ. ಹೀಗಾಗಿ ಅನುಮಾನವಿದೆ ಎಂದ ಪ್ರದೀಪ್ ಈಶ್ವರ್.

ಕನಕಪುರ: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ ಅಥವಾ ಶೂಟ್ ಮಾಡಿದ್ರಾ? ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಐಟಿ ಅಧಿಕಾರಿಗಳ ಮೇಲೆ ಬೊಟ್ಟು ಮಾಡಿದರು. ಶೂಟೌಟ್ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ

ಅಧಿಕಾರಿಗಳನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಅಲ್ಲದೇ ಯಾವುದೇ ಸಿಸಿಟಿವಿ ಕ್ಯಾಮರಾಗಳಲ್ಲಿ ಶೂಟೌಟ್ ದೃಶ್ಯಾವಳಿಗಳು ಸೆರೆಯಾಗಿಲ್ಲ. ಹೀಗಾಗಿ ಸಿಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ ಅಥವಾ ಬೇರೆ ಯಾರಾದರೂ ಶೂಟ್ ಮಾಡಿದ್ರಾ ಎಂಬುದರ ಬಗ್ಗೆ ಅನುಮಾನವಿದೆ ಎಂದರು.

ಕೇರಳ ಚುನಾವಣೆಗೆ ಬಿಜೆಪಿಯವರು ಸಿಜೆ ರಾಯ್ ಅವರಿಂದ ನೂರಾರು ಕೋಟಿ ರೂ. ದುಡ್ಡು ಕೇಳಿದ್ರು, ಈ ವಿಚಾರವಾಗಿ ಟಾರ್ಗೆಟ್ ಮಾಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆಗೆ ಒಳಪಡಿಸಿದ್ದಾರೆ. ಈ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಪ್ರದೀಪ್ ಈಶ್ವರ್ ಒತ್ತಾಯಿಸಿದರು.

ಸಿಬಿಐ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಅದು ಬಿಜೆಪಿ ಕೈಯಲಿದೆ ಎಂದು ಪ್ರದೀಪ್ ಈಶ್ವರ್ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಸುನೇತ್ರಾ ಪವಾರ್ ಆಯ್ಕೆ, ಸಂಜೆ ಮಹಾ DCM ಆಗಿ ಪ್ರಮಾಣ

ಬೀದರ್ ನಲ್ಲಿ ನಿಗೂಢ ಸ್ಫೋಟ; 4 ಮಕ್ಕಳು ಸೇರಿ 6 ಮಂದಿಗೆ ಗಾಯ, 6 ತಿಂಗಳಲ್ಲಿ ಎರಡನೇ ಬ್ಲಾಸ್ಟ್! Video

ಗಗನಕ್ಕೇರಿದ್ದ ಬೆಳ್ಳಿ ಬೆಲೆ ಒಂದೇ ದಿನ 1 ಲಕ್ಷ ರೂ ಕುಸಿತ, ಚಿನ್ನಕ್ಕೂ ದೊಡ್ಡ ಹೊಡೆತ! ಹೂಡಿಕೆದಾರರಿಗೆ ಭಾರಿ ನಷ್ಟ! ಕಾರಣವೇನು?

'ಶಾಕ್ ಆಯ್ತು.. ಊಟದ ಕುರಿತು ನನ್ನ ಕೇಳಿ.. ನನ್ನ ಧರ್ಮವನ್ನಲ್ಲ': ನಟ ಡಾಲಿ ಧನಂಜಯ್!

ಜೈಲಿನಲ್ಲಿ ಹದಗೆಟ್ಟ ಆರೋಗ್ಯ: ಸುಪ್ರೀಂ ಆದೇಶದ ಬಳಿಕ 'ಸೋನಮ್ ವಾಂಗ್ ಚುಕ್' ಜೋಧ್ ಪುರ AIIMSಗೆ ಸ್ಥಳಾಂತರ!

SCROLL FOR NEXT