File photo 
ರಾಜ್ಯ

ಮತದಾರರ ಪಟ್ಟಿ ಪರಿಷ್ಕರಣೆ: ಅರ್ಜಿ ಭರ್ತಿ ಸಹಾಯಕ್ಕಾಗಿ ಮತದಾರರ ನೆರವು ಕೇಂದ್ರಗಳತ್ತ ಜನಸಾಗರ..!

ಬಹುತೇಕ ಪ್ರದೇಶಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಸಮರ್ಪಕ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಗತ್ಯ ಮಾಹಿತಿ ನೀಡುತ್ತಿಲ್ಲ ಅಥವಾ ಸಮಯದ ಕೊರತೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಗಣತಿ (Enumeration) ನಮೂನೆ ಸಲ್ಲಿಕೆಗೆ ಇನ್ನೂ 15 ದಿನಗಳ ಕಾಲಾವಕಾಶ ಉಳಿದಿದ್ದರೂ, ರಾಜ್ಯದಾದ್ಯಂತ ಮತದಾರರ ನೆರವು ಕೇಂದ್ರಗಳಲ್ಲಿ (Voter Facilitation Centres - VFCs) ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

2002ರ ಮತದಾರರ ಪಟ್ಟಿಯ ವಿವರಗಳನ್ನು ಹುಡುಕುವುದು, ಅರ್ಜಿ ಭರ್ತಿ ಮಾಡುವುದು ಹಾಗೂ ನಮೂನೆಗಳನ್ನು ಸರಿಯಾಗಿ ಸಲ್ಲಿಸಲು ಸಹಾಯ ಪಡೆಯಲು ನಾಗರಿಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಬಹುತೇಕ ಪ್ರದೇಶಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಸಮರ್ಪಕ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಗತ್ಯ ಮಾಹಿತಿ ನೀಡುತ್ತಿಲ್ಲ ಅಥವಾ ಸಮಯದ ಕೊರತೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹೆಗ್ಗನಹಳ್ಳಿಯ ವೃದ್ಧ ಮಹಿಳೆ ಗೌರಮ್ಮ ಎಂಬುವವರು ಮಾತನಾಡಿ, "ನಾನು ಕರ್ನಾಟಕದಲ್ಲೇ ವಾಸಿಸುತ್ತಿದ್ದರೂ ನಮೂನೆ ಹೇಗೆ ಭರ್ತಿ ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಸಹಾಯಕ್ಕಾಗಿ ಬಿಎಲ್‌ಒ ಅವರನ್ನು ಸಂಪರ್ಕಿಸಿದರೂ ನೆರವು ಸಿಗಲಿಲ್ಲ. ಬಳಿಕ ನಮ್ಮ ವಾರ್ಡ್ ಕಚೇರಿಯಲ್ಲಿರುವ ಮತದಾರರ ನೆರವು ಕೇಂದ್ರಕ್ಕೆ ಹೋಗಬೇಕಾಯಿತು. ಅಲ್ಲಿ ಕೂಡ ಬಹಳ ಹೊತ್ತು ಕಾಯಬೇಕಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ವೃದ್ಧ ಸಿದ್ದರಾಜಯ್ಯ ಎಂಬುವವರು ಮಾತನಾಡಿ, "2002ರ ಮತದಾರರ ಪಟ್ಟಿಯ ವಿವರಗಳನ್ನು ಹುಡುಕುವುದು ತುಂಬಾ ಗೊಂದಲದ ಕೆಲಸವಾಗಿದೆ. ಸಣ್ಣ ತಪ್ಪಿನಿಂದಲೂ ಹೆಸರು ಅಳಿಸಿಹಾಕಬಹುದು ಎಂಬ ಆತಂಕದಿಂದ ನೆರವು ಕೇಂದ್ರಕ್ಕೆ ಹೋಗಿ ಮಾಹಿತಿ ಪಡೆದೆ" ಎಂದು ಹೇಳಿದ್ದಾರೆ.

ಹಲವರು ತಮ್ಮ ಹಳೆಯ ಮತದಾರರ ವಿವರಗಳಿಗಾಗಿ ನೆರವು ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರೊಬ್ಬರು (ಹೆಸರು ಬದಲಿಸಲಾಗಿದೆ) ಮಾತನಾಡಿ, "ಹೆಸರು ಅಳಿಸುವುದಿಲ್ಲ ಎಂದು ಹೇಳಿದರೂ ನೋಟಿಸ್ ಬರುವ ಭಯವಿದೆ.

2002ರಲ್ಲಿ ನಾನು ಯಾವ ಮತಗಟ್ಟೆಯಲ್ಲಿ ಮತದಾರನಾಗಿದ್ದೆ ಎಂಬುದನ್ನು ಹುಡುಕಲು ಕೆಲಸಕ್ಕೆ ರಜೆ ತೆಗೆದುಕೊಳ್ಳಬೇಕಾಯಿತು. ಮಧ್ಯೆ ಹಲವು ಬಾರಿ ಮನೆ ಬದಲಿಸಿದ್ದರಿಂದ ಸಾಕಷ್ಟು ಕಷ್ಟಪಟ್ಟು ಕೊನೆಗೆ ವಿವರ ಸಿಕ್ಕಿತು" ಎಂದರು.

ಇದಕ್ಕೆ ಪರಿಹಾರವಾಗಿ ಬಿಬಿಎಂಪಿ ವಾರ್ಡ್ ಕಚೇರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಮಾಹಿತಿಯ ಡೇಟಾಬೇಸ್ ಸಿದ್ಧಪಡಿಸಿವೆ. ಇದರ ಮೂಲಕ ವಾರ್ಡ್‌ನಲ್ಲಿರುವ ಮತದಾರರ ವಿವರಗಳನ್ನು ಪರಿಶೀಲಿಸಿ, ಸಮೀಪದ ವಾರ್ಡ್ ಕಚೇರಿಗೆ ತೆರಳಿ ಅಗತ್ಯ ಮಾಹಿತಿಯನ್ನು ಪಡೆಯುವಂತೆ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.

ಇದರ ಜೊತೆಗೆ, ವಿವಿಧ ಕ್ಷೇತ್ರಗಳ ಶಾಸಕರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಕ್ಷೇತ್ರದ ಮತದಾರರ ಮಾಹಿತಿಯನ್ನು ಪ್ರತ್ಯೇಕವಾಗಿ ಡೇಟಾಬೇಸ್ ರೂಪದಲ್ಲಿ ಸಂಗ್ರಹಿಸಿಕೊಂಡಿದ್ದಾರೆ.

ಚುನಾವಣಾ ಆಯೋಗದ ಮೊಬೈಲ್ ಆ್ಯಪ್‌ನಲ್ಲಿ ಪದೇಪದೇ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಕ್ಷೇತ್ರಗಳಲ್ಲಿ ಸ್ವತಂತ್ರ ಆನ್‌ಲೈನ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿ, ಬೂತ್ ಮಟ್ಟದ ಏಜೆಂಟ್‌ಗಳು (BLA) ಅವುಗಳ ಮೂಲಕ ಮತದಾರರಿಗೆ ಅಗತ್ಯ ಮಾಹಿತಿ ಒದಗಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ಕಸರತ್ತು: ರಾಹುಲ್ ಭೇಟಿಗೆ ಡಿಕೆಶಿ-ಸಿದ್ದು ದೆಹಲಿ ಪ್ರಯಾಣ, ಸ್ಥಾನಾಕಾಂಕ್ಷಿಗಳಿಗೆ ನಿರ್ಣಾಯಕ ವಾರ..!

ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ಸ್ಮರಣಾರ್ಥ ಹೊಸ ಯೋಜನೆ: 'ಭಾರತ್ ಜೋಡೋ ಯುವ ಸಂಘ' ಸ್ಥಾಪನೆಗೆ ಸರ್ಕಾರ ಗ್ರೀನ್ ಸಿಗ್ನಲ್; ಪ್ರತಿ ಸಂಘಕ್ಕೆ 10 ಲಕ್ಷ ರೂ. ಅನುದಾನ..!

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ: ಮೂವರು IPS ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್ ಚಿಟ್..!

ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ತಂಡ ಕಳುಹಿಸಿ; ಪ್ರಧಾನಿ ಮೋದಿಗೆ CM ಡಿ.ಕೆ. ಶಿವಕುಮಾರ್ ಪತ್ರ

ಬೆಂಗಳೂರು ಆಸ್ತಿ ಮಾಲೀಕರಿಗೆ GOOD NEWS; ಮನೆ ಬಾಗಿಲಿಗೇ ಖಾತೆ ತಲುಪಿಸಲು ಸರ್ಕಾರ ಸಿದ್ಧತೆ..!