ಚಲುವರಾಯಸ್ವಾಮಿ 
ರಾಜ್ಯ

'ದೇವೇಗೌಡರೇ ಹೊಟ್ಟೆ ಉರಿಗೆ ಮಾತಾಡಬೇಡಿ: ವಿಧಾನಸೌಧಕ್ಕೆ ಬಂದು ಸಲಹೆ ನೀಡಿ; ನೀಟ್ ಹಗರಣಕ್ಕೆ ಮೌನ, ಡಿಕೆಶಿ ವಿರುದ್ಧ ಹೋರಾಟವೇ?'

ಅಶೋಕ್‌ಗೆ ದೇವೇಗೌಡರು ಮಾರ್ಗದರ್ಶನ ನೀಡಲಿ. ಅದು ಬಿಟ್ಟು ಅಸೂಯೆ ಬೀಳಬೇಡಿ. ಪ್ರತಿಭಟನೆ ಮಾಡಿ ಮತ್ತಷ್ಟು ಗೊಂದಲ ಮಾಡಬೇಡಿ ಎಂದು ತಿಳಿಸಿದರು.

ಬೆಂಗಳೂರು: ಡಿಕೆ ಶಿವಕುಮಾರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ, ದೇವೇಗೌಡರು ಹೊಟ್ಟೆ ಉರಿಗೆ ಮಾತಾಡೋದು ಬೇಡ ಎಂದು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ. ಇಳಿ ವಯಸ್ಸಿನಲ್ಲಿ ಒಳ್ಳೆ ಮಾರ್ಗದರ್ಶನ ಕೊಡಲಿ. ಅಶೋಕ್‌ಗೆ ದೇವೇಗೌಡರು ಮಾರ್ಗದರ್ಶನ ನೀಡಲಿ. ಅದು ಬಿಟ್ಟು ಅಸೂಯೆ ಬೀಳಬೇಡಿ. ಪ್ರತಿಭಟನೆ ಮಾಡಿ ಮತ್ತಷ್ಟು ಗೊಂದಲ ಮಾಡಬೇಡಿ ಎಂದು ತಿಳಿಸಿದರು.

ಎಸ್‌ಎಂ ಕೃಷ್ಣ ಸಿಎಂ ಆಗಿದ್ದು ನಿಮಗೆ ಇಷ್ಟ ಆಗಿಲ್ಲ. ಎರಡನೇ ಬಾರಿ ಧರ್ಮಸಿಂಗ್ ಅವರನ್ನ ಸಿಎಂ ಮಾಡಿದ್ರಿ. ಇವತ್ತು ಡಿಕೆಶಿ ಸಿಎಂ ಆಗಿರೋದು ಸಹಿಸೋಕೆ ಆಗ್ತಿಲ್ಲ. ಜನರು ಮಾತಾಡೋದನ್ನ ಅಶೋಕ್, ಕುಮಾರಸ್ವಾಮಿ ನೋಡಬೇಕು.

ಕುಮಾರಸ್ವಾಮಿ, ಅಶೋಕ್ ಭ್ರಮೆಯಲ್ಲಿ ಇದ್ದಾರೆ. ದೇವೇಗೌಡರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ದೇವೇಗೌಡರ ಸಲಹೆ ಕೊಡಲಿ, ಫಾರ್ಮುಲ ಕೊಡಲಿ. ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ ಸಲಹೆ ಕೊಡಲಿ. ಬಿಡದಿ ವಿಚಾರದಲ್ಲಿ ಸಿಎಂ ಬೇಕಾದ್ರೆ ಸಲಹೆ ಪಡೆಯುತ್ತಾರೆ ಎಂದು ದೇವೇಗೌಡರಿಗೆ ತಿರುಗೇಟು ಕೊಟ್ಟರು.

ಕುಮಾರಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಅಂತಾರೆ. ಕುಸ್ತಿ ಆಡೋಕೆ ಹೋಗಬೇಕಾ? ರೈತರ ಸಮಸ್ಯೆ ಇತ್ಯರ್ಥ ಮಾಡೋಕೆ ವಿಧಾನಸೌಧ ಇದೆ. ಕೆಂಗಲ್ ಹನುಮಂತಯ್ಯ ಕಟ್ಟಿರೋದು. ಹರಿಯಾಣ, ಪಂಜಾಬ್‌ನಲ್ಲಿ ಅನೇಕ ದಿನ ರೈತರು ಪ್ರತಿಭಟನೆ ಮಾಡಿದ್ರು.

ಯಾಕೆ ದೇವೇಗೌಡ ಹೋಗಿಲ್ಲ? ಕುಮಾರಸ್ವಾಮಿಗೆ ಮಾತುಕತೆಗೆ ಕರೆದರೆ ವಿಧಾನಸೌಧಕ್ಕೆ ಬರಲ್ಲ ಅಂತಾರೆ. ಪಾಪ ಕುಮಾರಸ್ವಾಮಿ, ಅಶೋಕ್‌ಗೆ ನೋವಾಗಿದೆ ಎಂದು ಲೇವಡಿ ಮಾಡಿದರು.

ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಸತ್ಯಾಗ್ರಹ ಮಾಡ್ತೀನಿ ಅಂತಾರೆ. ನೀಟ್ ಲೋಪ ಆದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು ದೇವೇಗೌಡ ಮಾತೇ ಆಡಲಿಲ್ಲ. ಇವತ್ತು ಡಿಕೆ ಶಿವಕುಮಾರ್ ವಿರುದ್ದ ಹೋರಾಟ ಮಾಡ್ತಾರಂತೆ. ದೇವನಹಳ್ಳಿಯಲ್ಲಿ ರೈತರು ಪ್ರತಿಭಟನೆ ಮಾಡಿದಾಗ ದೇವೇಗೌಡರು ಅಲ್ಲಿಗೆ ಹೋಗಿರಲಿಲ್ಲ ಎಂದು ಪ್ರಶ್ನೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಉದ್ವಿಗ್ನತೆ ಮತ್ತಷ್ಟು ತೀವ್ರ: Iran ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ; ಟೆಹ್ರಾನ್ ಪ್ರತೀಕಾರ, ಬಹ್ರೇನ್-ಕುವೈತ್ ಗುರಿಯಾಗಿಸಿ ಕ್ಷಿಪಣಿಗಳ ಸುರಿ ಮಳೆ..!

'ನಾವು ತಪ್ಪು ಮಾಡಿದೆವು...': Epstein ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance, Trump ಆಡಳಿತಕ್ಕೆ ತೀವ್ರ ಮುಜುಗರ..!

'ಅವರಿಗೆ ಕಥೆ ಗೊತ್ತಿದೆ, ಎಚ್ಚರಿಕೆಯಿಂದ ವರ್ತಿಸಲಿ': Iranಗೆ Trump ಕಠಿಣ ಎಚ್ಚರಿಕೆ, ಗಡುವು ನೀಡದೆ ಸೇನಾ ಕಾರ್ಯಾಚರಣೆಗೆ ಅಮೆರಿಕಾ ಮುಂದು..!

Bidadi township ಯೋಜನೆ: ಸಮಿತಿ ರಚನೆಯಲ್ಲ, ಯೋಜನೆಯನ್ನೇ ಕೈಬಿಡಿ; ರಾಜ್ಯ ಸರ್ಕಾರ ವಿರುದ್ಧ BJP ಆಗ್ರಹ

'ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂಬ ಮಾತು ಸಾಲದು, ಯೋಜನೆಯನ್ನೇ ರದ್ದುಪಡಿಸಿ'; ಸಿಎಂ ಡಿಕೆ.ಶಿವಕುಮಾರ್'ಗೆ ಬಿಡದಿ ರೈತರ ಒತ್ತಾಯ