ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ 
ರಾಜ್ಯ

Safe City Project: ಲಿಂಗ ಸಮಾನತೆ ಬಗ್ಗೆ ಜಾಗೃತಿ, ಬೆಂಗಳೂರು ನಗರ ಪೊಲೀಸರಿಂದ online ಕೋರ್ಸ್ ಆರಂಭ!

ಪೊಲೀಸ್ ಇಲಾಖೆಯ ಪ್ರಕಾರ, 'ಸೇಫ್ ಸಿಟಿ ಬೆಂಗಳೂರು ಸಿಟಿ ಪೊಲೀಸ್' ವೆಬ್‌ಸೈಟ್ (https://safecitybcp.karnataka.gov.in) ಮೂಲಕ ಸಾರ್ವಜನಿಕರು ಈ ಆನ್‌ಲೈನ್ ಕೋರ್ಸ್ ಅನ್ನು ಪಡೆಯಬಹುದು.

ಬೆಂಗಳೂರು: ಲಿಂಗ ಸಮಾನತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಮತ್ತು ಲಿಂಗ ತಾರತಮ್ಯದ ಹಾನಿಕಾರಕ ಪರಿಣಾಮ ತಡೆಗಟ್ಟುವ ಉದ್ದೇಶದಿಂದ, ಬೆಂಗಳೂರು ನಗರ ಪೊಲೀಸರು 'ಸೇಫ್ ಸಿಟಿ ಪ್ರಾಜೆಕ್ಟ್' ಅಡಿಯಲ್ಲಿ ಲಿಂಗ ಸಂವೇದನಾ ಕುರಿತ ಆನ್‌ಲೈನ್ ಜಾಗೃತಿ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದ್ದಾರೆ.

ಪೊಲೀಸ್ ಇಲಾಖೆಯ ಪ್ರಕಾರ, 'ಸೇಫ್ ಸಿಟಿ ಬೆಂಗಳೂರು ಸಿಟಿ ಪೊಲೀಸ್' ವೆಬ್‌ಸೈಟ್ (https://safecitybcp.karnataka.gov.in) ಮೂಲಕ ಸಾರ್ವಜನಿಕರು ಈ ಆನ್‌ಲೈನ್ ಕೋರ್ಸ್ ಅನ್ನು ಪಡೆಯಬಹುದು.

ಆಸಕ್ತರು ಮೊದಲು ನೋಂದಾಯಿಸಿಕೊಳ್ಳಬೇಕು (ಖಾತೆ ಇಲ್ಲದಿದ್ದರೆ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಬೇಕು) ಲಾಗಿನ್ ಆಗಬೇಕು, ಕೋರ್ಸ್‌ಗೆ ನೋಂದಾಯಿಸಿಕೊಳ್ಳಬೇಕು, ಎಲ್ಲಾ ಜಾಗೃತಿ ವೀಡಿಯೊಗಳನ್ನು ವೀಕ್ಷಿಸಬೇಕು, ಪ್ರತಿ ಅಧ್ಯಾಯದ ನಂತರದ ಪ್ರಶ್ನಾವಳಿಯನ್ನು ಪೂರ್ಣಗೊಳಿಸಬೇಕು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ನಂತರ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಈ ಕೋರ್ಸ್ 'ಲಿಂಗದ ಕುರಿತು ಮರುಚಿಂತನೆ: ಅಧಿಕಾರ, ಗುರುತು ಮತ್ತು ಸಮಾನತೆ', 'ಪಿತೃಪ್ರಭುತ್ವ ಮತ್ತು ಲೈಂಗಿಕತೆ: ಅಧಿಕಾರ ಮತ್ತು ಬದಲಾವಣೆ'; 'ಸ್ತ್ರೀವಾದ: ತಪ್ಪು ಕಲ್ಪನೆಗಳಾಚೆಗಿನ ಅರ್ಥಪೂರ್ಣ ಬದಲಾವಣೆ'; ಹಾಗೂ 'ಮಹಿಳಾ ಸಬಲೀಕರಣ: ಲಿಂಗ ಸಮಾನತೆಯತ್ತ ಹಾದಿಗಳು ಸೇರಿದಂತೆ ಲಿಂಗ ಸಂವೇದನೆಯ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಆರು ಅಧ್ಯಾಯಗಳನ್ನು ಹೊಂದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, "ಸೇಫ್ ಸಿಟಿ ಯೋಜನೆಯಡಿಯಲ್ಲಿ, ಲಿಂಗ ತಾರತಮ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ನಾವು ಭಾರತದಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಸಾರ್ವಜನಿಕರು ಈ ಕೋರ್ಸ್‌ಗೆ ದಾಖಲಾಗಲು, ಜಾಗೃತಿ ವೀಡಿಯೊಗಳನ್ನು ವೀಕ್ಷಿಸಲು, ಮಾಡ್ಯೂಲ್‌ಗಳನ್ನು ಪೂರ್ಣಗೊಳಿಸಲು ಮತ್ತು ಪ್ರಮಾಣಪತ್ರವನ್ನು ಪಡೆಯಲು ಮನವಿ ಮಾಡುತ್ತೇನೆ ಎಂದರು.

ಲಿಂಗ ಸಮಾನತೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು, ತಾರತಮ್ಯದ ವರ್ತನೆಗಳನ್ನು ಪ್ರಶ್ನಿಸುವುದು ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ಸುರಕ್ಷಿತ ಮತ್ತು ಹೆಚ್ಚು ಅಂತರ್ಗತ ಸಮಾಜವನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!